ಕ್ಲೀನರ್ ಚಾಲನೆ ಮಾಡುತ್ತಿದ್ದ ಲಾರಿ, ಬಸ್‍ಗೆ ಡಿಕ್ಕಿ
ಕೊಡಗು

ಕ್ಲೀನರ್ ಚಾಲನೆ ಮಾಡುತ್ತಿದ್ದ ಲಾರಿ, ಬಸ್‍ಗೆ ಡಿಕ್ಕಿ

July 11, 2018

ಮಡಿಕೇರಿ: ಹೆದ್ದಾರಿಯಲ್ಲಿ ಕ್ಷೀನರ್ ಓರ್ವ ಲಾರಿ ಚಾಲಿಸಲು ಹೋಗಿ ಬಸ್‍ಗೆ ಡಿಕ್ಕಿ ಪಡಿಸಿ ಧರ್ಮದೇಟು ತಿಂದ ಘಟನೆ ನಗರದ ಚೈನ್‍ಗೇಟ್ ಬಳಿ ನಡೆದಿದೆ.

ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಸರಕು ತುಂಬಿದ್ದ ಲಾರಿಯನ್ನು ಚಾಲಕ, ಕ್ಲೀನರ್ ರಾಜು ಎಂಬಾತನಿಗೆ ಚಾಲನೆ ಮಾಡಲು ನೀಡಿದ್ದ. ಚೈನ್‍ಗೇಟ್ ತಲುಪುತ್ತಿದ್ದಂತೆಯೇ ಲಾರಿ ಚಾಲಿಸುತ್ತಿದ್ದ ಕ್ಲೀನರ್ ರಾಜು, ಲಾರಿಯನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಹಾಸನದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದ್ದಾನೆ.

ಬಸ್‍ನ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಲಾರಿ ಕ್ಲೀನರ್ ರಾಜುನನ್ನು ಕೆಳಗಿಳಿಸಿ ಧರ್ಮದೇಟು ನೀಡಿದ್ದಾರೆ. ಕ್ಲೀನರ್ ಹೊಸದಾಗಿ ಚಾಲನೆ ಕಲಿಯುತ್ತಿದ್ದು, ವಾಹನ ಚಾಲನ ಪರವಾನಗಿಯನ್ನು ಹೊಂದಿಲ್ಲ. ಲಾರಿ ಡಿಕ್ಕಿಹೊಡೆದ ಪರಿಣಾಮ ಬಸ್‍ಗೆ ಅಲ್ಪಪ್ರಮಾಣದ ಹಾನಿಯಾಗಿದ್ದು, ಘಟನೆ ಕುರಿತಂತೆ ಮಡಿಕೇರಿ ನಗರ ಸಂಚಾರಿ ಪೊಲೀ ಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Translate »