ಕೊಡಗು

ಮಾಯಾಮುಡಿ ಬಳಿ ತೋಟದಲ್ಲಿ ಪುಂಡಾನೆ ಸೆರೆ
ಕೊಡಗು

ಮಾಯಾಮುಡಿ ಬಳಿ ತೋಟದಲ್ಲಿ ಪುಂಡಾನೆ ಸೆರೆ

July 14, 2018

ಗೋಣಿಕೊಪ್ಪಲು: ಇಲ್ಲಿನ ಮಾಯಾಮುಡಿ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಕೆಲವು ದಿನಗಳಿಂದ ಆತಂಕ ಮೂಡಿಸಿ ಸದಾ ಭಯದ ನೆರಳಿನಲ್ಲಿಯೇ ಬದುಕುವಂತೆ ಮಾಡಿದ್ದ ಪುಂಡಾನೆ ಯನ್ನು ಸೆರೆ ಹಿಡಿಯಲು ಮೂಲಕ ಅರಣ್ಯ ಇಲಾಖೆಯು ಜನರಲ್ಲಿನ ಆತಂಕವನ್ನು ಸದ್ಯದ ಮಟ್ಟಿಗೆ ದೂರಮಾಡಿದೆ. ಇತ್ತೀಚೆಗೆ ಕಾಡಾನೆಗಳು ಮಾಯಾ ಮುಡಿ ಸಮೀಪದ ತೋಟಗಳಲ್ಲಿ ಬೀಡು ಬಿಟ್ಟು ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಭಯಪಡುವ ಸ್ಥಿತಿಯನ್ನು ನಿರ್ಮಾಣಮಾಡಿ, ರಸ್ತೆಗಳಲ್ಲಿ ಓಡಾಡಲೂ ಜನರು ಹೆದರುವಂತೆ ಮಾಡುವ ಮೂಲಕ ಭೀತಿ ಯನ್ನು ಉಂಟುಮಾಡಿತ್ತು….

ಮಗುವಿಗೆ ಜನ್ಮವಿತ್ತು ತಾಯಿ ಸಾವು ಪ್ರಕರಣ: ವೈದ್ಯರ ವಿರುದ್ಧ ಕ್ರಮಕ್ಕೆ  ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಕೊಡಗು

ಮಗುವಿಗೆ ಜನ್ಮವಿತ್ತು ತಾಯಿ ಸಾವು ಪ್ರಕರಣ: ವೈದ್ಯರ ವಿರುದ್ಧ ಕ್ರಮಕ್ಕೆ  ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

July 13, 2018

ವಿರಾಜಪೇಟೆ: ವಿರಾಜಪೇಟೆ ಸಮೀಪದ ಮರಂದೋಡ ಗ್ರಾಮದ ಕೀರ್ತನ್ ಕಾರ್ಯಪ್ಪ ಅವರ ಪತ್ನಿ ಲಾಸ್ಯ ತೇಜಸ್ವಿನಿ [26] ಸಾವಿಗೆ ಸಂಬಂಧಿಸಿದಂತೆ ವಿರಾಜಪೇಟೆಯ ಅಂಬಿಕಾ ಖಾಸಗಿ ನರ್ಸಿಂಗ್ ಹೋಂನ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿವರೆಗೆ ಮೆರವಣಿಗೆ ಸಾಗಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ತಾಲೂಕು ತಾಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಲಾಸ್ಯ ತೇಜಸ್ವಿನಿ ಹೆರಿಗೆ ನೋವಿನ ಸಂದರ್ಭ…

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿತ
ಕೊಡಗು

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿತ

July 13, 2018

ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದಿಂದ, ರಾಜಾಸೀಟ್ ಬೆಟ್ಟದ ಕೆಳ ಭಾಗದ ಹೆದ್ದಾರಿಯಲ್ಲಿ ಭಾರೀ ಬಿರುಕು ಮೂಡಿದ್ದು, ಹೆದ್ದಾರಿ ಕುಸಿತಗೊಂಡಿದೆ. ಮಳೆಯ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಹೆದ್ದಾರಿಯ ಪಕ್ಕದಲ್ಲಿ ಬರೆ ಕುಸಿತವಾಗಿ, ಹೆದ್ದಾರಿ ಸಂಚಾರ ದುಸ್ಥರ ಗೊಂಡಿದೆ. ಯಾವುದೇ ಕ್ಷಣದಲ್ಲೂ ರಸ್ತೆ ಕುಸಿಯುವ ಸಾಧ್ಯತೆಯಿದ್ದು, ಪ್ರಸ್ತುತ ಏಕಮುಖ ವಾಹನ ಸಂಚಾರ ವ್ಯವಸ್ಥೆ ರೂಪಿಸಲಾಗಿದೆ. ಶಿರಾಡಿಘಾಟ್‍ನಲ್ಲಿ ಭಾರೀ ವಾಹನಗಳ ಸಾಗಾಟಕ್ಕೆ ರಸ್ತೆ ನವೀಕರ ಣದಿಂದ ನಿರ್ಭಂದ ಹೇರಲಾಗಿದ್ದು, ಮಂಗಳೂರು-ಶಿರಾಡಿ ರಸ್ತೆಯಲ್ಲಿ ಸಂಚರಿಸು ತ್ತಿದ್ದ ಭಾರೀ ಸರಕು ತುಂಬಿದ…

ಜಿಲ್ಲೆಯಲ್ಲಿ ನಿಲ್ಲದ ಮಳೆ
ಕೊಡಗು

ಜಿಲ್ಲೆಯಲ್ಲಿ ನಿಲ್ಲದ ಮಳೆ

July 13, 2018

ಅಲ್ಲಲ್ಲಿ ಬರೆ ಕುಸಿತ, ಮನೆಗಳಿಗೆ ಹಾನಿ ಇಂದು, ನಾಳೆ ಶಾಲಾ-ಕಾಲೇಜಿಗೆ ರಜಾ ಮಡಿಕೇರಿ:  ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಸಿದ್ದಾಪುರ ಕರಡಿ ಗೋಡು ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕರಡಿಗೋಡು ಬೆಟ್ಟದ ಕಾಡು ಬಳಿ ಕೆಲವು ಮನೆಗಳಿಗೆ ನದಿ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆ ಯಲ್ಲಿ 5-6 ಕುಟುಂಬಗಳು, ತಾತ್ಕಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರವಾಗಿದ್ದು, ಕೆಲವು ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ. ಮಳೆಯ ಹಿನ್ನೆಲೆಯಲ್ಲಿ ಜು.13…

ಅಪಘಾತ; ಬಸ್ ಚಾಲಕನಿಗೆ ಶಿಕ್ಷೆ
ಕೊಡಗು

ಅಪಘಾತ; ಬಸ್ ಚಾಲಕನಿಗೆ ಶಿಕ್ಷೆ

July 13, 2018

ಸೋಮವಾರಪೇಟೆ: ಕಳೆದ 2013ರ ಸೆ.25ರಂದು ನಡೆದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಈರ್ವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಆರೋಪಿ ಚಾಲಕ ಸಿದ್ದಲಿಂಗಪುರ ಗ್ರಾಮದ ಕೆ.ಎನ್. ವಿಜಯಕುಮಾರ್ ಅವರಿಗೆ 2 ವರ್ಷ ಸಜೆ ವಿಧಿಸಿದೆ.

ನಾಲ್ಕುನಾಡು ಅರಮನೆ ಸಂರಕ್ಷಣೆಗೆ ಮನವಿ
ಕೊಡಗು

ನಾಲ್ಕುನಾಡು ಅರಮನೆ ಸಂರಕ್ಷಣೆಗೆ ಮನವಿ

July 13, 2018

ಮಡಿಕೇರಿ:  ನಾಲ್ಕು ನಾಡು ಅರಮನೆ ಸಂರಕ್ಷಣೆಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮನವಿ ಮಾಡಿದ್ದಾರೆ. ಅವರು ವಿಧಾನಪರಿಷತ್‍ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದು ಈ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆ ಪ್ರಸ್ತುತ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದೆಯೇ? ಎಂಬ ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೌದು ಎಂದು ಉತ್ತರಿಸಿದರು. ಇದ್ದಲ್ಲಿ ಈ ನಾಲ್ಕುನಾಡು ಅರಮನೆಯನ್ನು ಸುಸ್ಥಿತಿಯಲ್ಲಿ ಕಾಪಾಡಲು ಯಾವ ಕ್ರಮ ವಹಿಸಲಾಗಿದೆ? ಎಂಬ ಪ್ರಶ್ನೆಗೆ…

ಕೊಡಗಿನಾದ್ಯಂತ ವರುಣನ ರೌದ್ರಾವತಾರ
ಕೊಡಗು

ಕೊಡಗಿನಾದ್ಯಂತ ವರುಣನ ರೌದ್ರಾವತಾರ

July 12, 2018

ಉಕ್ಕಿ ಹರಿಯುತ್ತಿರುವ ನದಿ ತೊರೆಗಳು  ಜನ ಜೀವನ ಅಸ್ತವ್ಯಸ್ತ, ಪರದಾಟ  ಇಂದು ಶಾಲಾ-ಕಾಲೇಜಿಗೆ ರಜೆ ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಐದು ದಿನ ಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನಾಳೆ (ಜು.12)ಯೂ ಸಹ ಜಿಲ್ಲಾದ್ಯಂತ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಬೋಟ್ ಬಳಸಿ ಅಲ್ಲಿನ…

ಮೈಸೂರು-ತಲಚೇರಿ ರೈಲು ಮಾರ್ಗ ಸರ್ವೇಗೆ ಅನುಮತಿ ನೀಡಿಲ್ಲ
ಕೊಡಗು

ಮೈಸೂರು-ತಲಚೇರಿ ರೈಲು ಮಾರ್ಗ ಸರ್ವೇಗೆ ಅನುಮತಿ ನೀಡಿಲ್ಲ

July 12, 2018

ಮಡಿಕೇರಿ: ದಕ್ಷಿಣ ಕೊಡಗಿನ ಮೂಲಕ ಹಾದು ಹೋಗಲಿರುವ ಮೈಸೂರು-ತಲಚೇರಿ ಉದ್ದೇಶಿತ ರೈಲು ಮಾರ್ಗದ ಸರ್ವೇ ಕಾರ್ಯಕ್ಕೆ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಹ್ಮಣಿ ಪ್ರಸ್ತುತ ರೈಲು ಮಾರ್ಗದ ಸರ್ವೇ ಕಾರ್ಯ ಉಲ್ಲೇಖಿಸಿ ಸಭಾಪತಿಗಳಿಗೆ ಪತ್ರ ಬರೆದಿದ್ದರು. ಅಲ್ಲದೆ ಶೂನ್ಯ ವೇಳೆಯಲ್ಲಿ ಈ ವಿಚಾರದ ಪ್ರಸ್ತಾಪಕ್ಕೆ ಅವಕಾಶವನ್ನು ಕೋರಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಟಷ್ಟನೆ ನೀಡಿ, ಉದ್ದೇಶಿತ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಸರ್ವೇ ಕಾರ್ಯ…

ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಕೊಡಗು

ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

July 12, 2018

ಮಡಿಕೇರಿ: ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ 35 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್.ಡಿ.ನಂಬರ್ ಇರುವ ಜಾತಿ ಪ್ರಮಾಣ ಪತ್ರದೊಂದಿಗೆ ಎ4 ಸೈಜ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ ಕನಿಷ್ಠ 200 ಪುಟ ಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಸಾಹಿತ್ಯ ಕೃತಿಗಳು ಪ್ರಕಟವಾಗಿರುವ ಲೇಖಕರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಲೇಖಕರೂ ಕೂಡ ಅರ್ಜಿ ಸಲ್ಲಿಸಬಹುದು….

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ
ಕೊಡಗು

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ

July 11, 2018

ಐದನೇ ಬಾರಿಗೆ ತ್ರಿವೇಣಿ ಸಂಗಮ ಜಲಾವೃತ್ತ ಅಲ್ಲಲ್ಲಿ ಭೂ ಕುಸಿತ ಇಂದು ಶಾಲಾ-ಕಾಲೇಜಿಗೆ ರಜೆ ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಸ್ಥಿತಿಗೆ ತಲುಪಿದೆ. ಕಾವೇರಿ, ಲಕ್ಷ್ಮಣ ತೀರ್ಥ ರಾಮ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭೂ ಕುಸಿತ ಉಂಟಾಗಿದೆ. ಕಾಲೇಜು ಕಟ್ಟಡಕ್ಕೆ ಹೊಂದಿ ಕೊಂಡಂತೆ ಬರೆ ಕುಸಿದ ಪರಿಣಾಮ, ಕಾಲೇಜು ಕಟ್ಟಡ ಅಪಾಯಕ್ಕೆ ಸಿಲುಕಿದೆ….

1 157 158 159 160 161 187
Translate »