ಮಗುವಿಗೆ ಜನ್ಮವಿತ್ತು ತಾಯಿ ಸಾವು ಪ್ರಕರಣ: ವೈದ್ಯರ ವಿರುದ್ಧ ಕ್ರಮಕ್ಕೆ  ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಕೊಡಗು

ಮಗುವಿಗೆ ಜನ್ಮವಿತ್ತು ತಾಯಿ ಸಾವು ಪ್ರಕರಣ: ವೈದ್ಯರ ವಿರುದ್ಧ ಕ್ರಮಕ್ಕೆ  ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

July 13, 2018

ವಿರಾಜಪೇಟೆ: ವಿರಾಜಪೇಟೆ ಸಮೀಪದ ಮರಂದೋಡ ಗ್ರಾಮದ ಕೀರ್ತನ್ ಕಾರ್ಯಪ್ಪ ಅವರ ಪತ್ನಿ ಲಾಸ್ಯ ತೇಜಸ್ವಿನಿ [26] ಸಾವಿಗೆ ಸಂಬಂಧಿಸಿದಂತೆ ವಿರಾಜಪೇಟೆಯ ಅಂಬಿಕಾ ಖಾಸಗಿ ನರ್ಸಿಂಗ್ ಹೋಂನ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿವರೆಗೆ ಮೆರವಣಿಗೆ ಸಾಗಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ತಾಲೂಕು ತಾಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಲಾಸ್ಯ ತೇಜಸ್ವಿನಿ ಹೆರಿಗೆ ನೋವಿನ ಸಂದರ್ಭ ಅಂಬಿಕಾ ನರ್ಸಿಂಗ್ ಹೋಂಗೆ ಜು.1ರಂದು ದಾಖಲು ಮಾಡಲಾಯಿತು. ಜು.2 ರಂದು ಬೆಳಿಗ್ಗೆ 9 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಂತರ ಮಧ್ಯಾಹ್ನ 1.15ರ ತನಕ ಸಂಬಂಧಿ ಕರಿಗೆ ಮಗು ಮತ್ತು ತಾಯಿಯ ಆರೋಗ್ಯ ವನ್ನು ನೋಡಲು ನರ್ಸಿಂಗ್ ಹೋಂನ ವೈದ್ಯ ರಾದ ಡಾ.ಶಶಿಕಲಾ ಹಾಗೂ ಸಿಬ್ಬಂದಿಗಳು ಬಿಡಲಿಲ್ಲ. ಬಳಿಕ 1.30ಕ್ಕೆ ಬಿಡುಗಡೆ ಪತ್ರ ನೀಡಿ ನಂತರ ಲಾಸ್ಯ ತೇಜಸ್ವಿನಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದರು ಎಂದು ಸಂಬಂಧಿ ಕರು ಹಾಗೂ ಪ್ರತಿಭಟನಕಾರರು ದೂರಿದರು.

ನಿಗಧಿತ ಸಮಯದಲ್ಲಿ ಲಾಸ್ಯಳಿಗೆ ಸೂಕ್ತ ಚಿಕಿತ್ಸೆ ದೊರೆಯದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಲಾಸ್ಯ ತೇಜಸ್ವಿನಿಯನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿದಾಗ ವಿರಾಜಪೇಟೆಯಲ್ಲಿ ವೈದ್ಯರು ಮಹಿಳೆಯ ‘ರಕ್ತಸ್ರಾವವನ್ನು ತಡೆಯಲು ವಿಳಂಬವಾಗಿದ್ದರಿಂದ ಲಾಸ್ಯ ಸಾವು’ ಬದುಕು ಹೋರಾಟದಲ್ಲಿರುವುದನ್ನು ಮಡಿಕೇರಿಯ ವೈದ್ಯರು ಖಚಿತ ಪಡಿಸಿದ್ದಾರೆ. ನಂತರ ಜು.3 ರಂದು ಬೆಳಗಿನ ಜಾವ 4.30ರ ವೇಳೆಗೆ ಲಾಸ್ಯ ತೇಜಸ್ವಿ ಮೃತಪಟ್ಟಿರುವುದರಿಂದ ನರ್ಸಿಂಗ್ ಹೋಂನ ಡಾ.ಕೆ.ಎಸ್.ಶಶಿಕಲಾ ಅವರ ಪರವಾನಗಿಯನ್ನು ರದ್ದುಗೊಳಿಸುವಂತೆ ತಹಸಿಲ್ದಾರರಿಗೆ ನೀಡಿದ ಮನವಿಯಲ್ಲಿ ಪ್ರತಿಭಟ ನಾಕಾರರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಕ್ಕಬೆ ಕುಂಜಿಲ ಗ್ರಾಪಂ ಅಧ್ಯಕ್ಷೆ ಶೈಲಾ ಕುಟ್ಟಪ್ಪ, ಗ್ರಾಮದ ಕೊಡವ ಸಂಘದ ಅಧ್ಯಕ್ಷ ಅನ್ನಡಿಯಂಡ ದಿಲಿಪ್ ಕುಮಾರ್, ಮರಂದೋಡ ರಿಕ್ರಿಯೇಷನ್ ಕ್ಲಬ್ ಎಂ.ಪ್ರವೀಣ್, ಮುದ್ದಯ್ಯ, ಹರೀಶ್ ಮೊಣ್ಣಯ್ಯ, ಕುಟುಂಬಸ್ಥರಾದ ಸೋನಿ, ಪಿ.ಮಾಚಯ್ಯ, ಪಿ.ಕಮಲ ಸುಬ್ಬಯ್ಯ, ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು, ಸ್ವ-ಸಹಾಯ ಸಂಘದ ಪದಾಧಿಕಾರಿ ಗಳು, ಗ್ರಾಮಸ್ಥರು ಭಾಗವಹಿಸಿದ್ದರು.

Translate »