ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು
ಕೊಡಗು

ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು

July 4, 2018

ಮಡಿಕೇರಿ: ವಿರಾಜಪೇಟೆಯ ಖಾಸಗಿ ಆಸ್ಪತ್ರೆ ಯಲ್ಲಿ ಹೆರಿಗೆ ಗೆಂದು ದಾಖಲಾದ ಮಹಿಳೆ ಯೋರ್ವರು ತೀವ್ರ ರಕ್ತ ಸ್ರಾವದಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯು ಸಿರೆಳೆದ ದಾರುಣ ಘಟನೆ ನಡೆದಿದೆ.

ವಿರಾಜಪೇಟೆ ಹೊಸ ಬಡಾವಣೆ ನಿವಾಸಿ ಯಾದ ಅಣ್ಣಡಿಯಂಡ ಲಾಸ್ಯ ತೇಜಸ್ವಿ (26) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಲಾಸ್ಯ ತೇಜಸ್ವಿ, ಹೆರಿಗೆಗೆಂದು ವಿರಾಜಪೇಟೆಯ ಖಾಸಗಿ ನರ್ಸಿಂಗ್ ಹೋಂಗೆ ದಾಖಲಾಗಿದ್ದು, ಸಹಜ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಲಾಸ್ಯ ತೇಜಸ್ವಿ ಚಿಕ್ಸಿತೆಗೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ONE COMMENT ON THIS POST To “ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು”

Translate »