ಮೈತ್ರಿ ಸರ್ಕಾರದ ಚೊಚ್ಚಲ ಅಧಿವೇಶನ ಆರಂಭ: ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಾಲಾ ಭಾಷಣ
ಮೈಸೂರು

ಮೈತ್ರಿ ಸರ್ಕಾರದ ಚೊಚ್ಚಲ ಅಧಿವೇಶನ ಆರಂಭ: ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಾಲಾ ಭಾಷಣ

July 3, 2018

ಸಮಗ್ರ ಕರ್ನಾಟಕ ಕಲ್ಯಾಣಕ್ಕೆ ದೋಸ್ತಿ ಸಂಕಲ್ಪ

  • ಹಿಂದಿನ ಸರ್ಕಾರದ ಭಾಗ್ಯಗಳ ಜೊತೆಗೆ ರೈತರ ಸಂಕಷ್ಟಕ್ಕೆ ನೆರವು
  • ಪರಿಶಿಷ್ಟ ಜಾತಿ, ವರ್ಗದ ಕುಟುಂಬಗಳಿಗೆ ಅಡುಗೆ ಅನಿಲ, ಕೌಶಲ್ಯ ಅಭಿವೃದ್ಧಿ
  • ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇರ್ ಘಟಕ ಆರಂಭ
  • ಪೇದೆಗಳಿಗೆ ಠಾಣಾ ವ್ಯಾಪ್ತಿಯಲ್ಲಿ ಭೌಗೋಳಿಕ ಸರಹದ್ದು ನಿಗದಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿ ಸರ್ಕಾರದ ಮುಂದಿನ ಐದು ವರ್ಷದ ಸ್ಥಿರತೆಯ ಖಾತರಿಯೊಂದಿಗೆ ಆಯ್ದ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಕರ್ನಾಟಕದ ಕಲ್ಯಾಣಕ್ಕೆ ಶ್ರಮಿಸುವುದಾಗಿ ರಾಜ್ಯಪಾಲರ ಮೂಲಕ ಭರವಸೆ ನೀಡಲಾಗಿದೆ.

ರಾಜ್ಯದಲ್ಲಿ ತೃಪ್ತಿಕರವಾದ ಕಾನೂನು-ಸುವ್ಯವಸ್ಥೆ ಕಾಯ್ದುಕೊಂಡಿದೆ, ಮುಖ್ಯ ಪೇದೆ ಹಾಗೂ ಪೊಲೀಸ್ ಪೇದೆಗಳಿಗೆ ಅವರ ತಾಣ ವ್ಯಾಪ್ತಿಯಲ್ಲಿ ಭೌಗೋಳಿಕ ಸರಹದ್ದು ನಿಗದಿ ಪಡಿಸಿ, ಅವರಿಗೆ ಸರಹದ್ದು ಗಳ ಸಂಪೂರ್ಣ ಹೊಣೆಗಾರಿಕೆ ನೀಡ ಲಾಗುವುದು. ವ್ಯವಸ್ಥೆ ಏನೇ ಏರುಪೇರಾ ದರೂ ಅವÀರೇ ಹೊಣೆಗಾರರಾಗುತ್ತಾರೆ.

ವಿಧಾನಮಂಡಲದ ಉಭಯ ಸದನ ಗಳ ಜಂಟಿ ಅಧಿವೇಶನ ಉದ್ದೇಶಿಸಿ ಮಾತ ನಾಡಿದ ರಾಜ್ಯಪಾಲ ವಜೂಭಾಯ್ ವಾಲಾ, ಮೈತ್ರಿ ಸರ್ಕಾರದ ಮುಂದಿನ ಗುರಿಯ ಜೊತೆಗೆ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿರುವ ಪಕ್ಷಗಳು ಹೊಂದಾಣಿಕೆ ಯಿಂದ ಮುಂದುವರಿಯಲಿವೆ ಎಂಬು ದನ್ನು ಭಾಷಣದಲ್ಲಿ ಬಿಂಬಿಸಲಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗ ಳಲ್ಲಿ ಉಭಯ ಪಕ್ಷಗಳಲ್ಲಿದ್ದ ನಾಯಕರ ಗೊಂದಲಕ್ಕೆ ಈ ಭಾಷಣ ತೆರೆ ಎಳೆದಂತಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಮುಂದಿನ ಯೋಜನೆಗಳ ಚಿತ್ರಣ ವನ್ನು ಸಂಕ್ಷಿಪ್ತವಾಗಿ ನೀಡುವುದರ ಜೊತೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಬಿಂಬಿಸಿ, ಅವು ಗಳಿಗೆ ಭಾಷಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿ ರುವುದಲ್ಲದೆ, ಹಳೇ ಕಾರ್ಯಕ್ರಮಗಳ ಮುಂದುವರೆಸುವ ಭರವಸೆ ಇತ್ತಿದ್ದಾರೆ.

ಸರ್ಕಾರದ ಮುಂದಿನ ಕಾರ್ಯಯೋಜನೆ ಹಾಗೂ ಎಲ್ಲಾ ವರ್ಗದ ಜನರ ಸುರಕ್ಷತೆ ವಿಚಾರಕ್ಕೆ ಒತ್ತು ನೀಡಲಾಗಿದೆ. ಹೈದರಾ ಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ದೃಢಸಂಕಲ್ಪ ಮಾಡಲಾಗಿದೆ.

ಅನ್ನಭಾಗ್ಯ, ಸುವರ್ಣ ಕರ್ನಾಟಕ, ಆರೋಗ್ಯ ಭಾಗ್ಯ ಸೇರಿದಂತೆ ಕಳೆದ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಿ, ಹೊಸ ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗುವ ಹಾಗೂ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವ, ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳ ಮೂಲಸೌಕರ್ಯಕ್ಕೆ ಒತ್ತು ನೀಡುವ ವಾಗ್ದಾನ ಮಾಡಿದ್ದಾರೆ.

ಹಾಲಿನ ಸಂಗ್ರಹಣೆಯಲ್ಲಿ ರಾಜ್ಯ 2ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 7ನೇ ಸ್ಥಾನ, ಮಾಂಸ ಉತ್ಪಾದನೆಯಲ್ಲಿ 11ನೇ ಸ್ಥಾನ ಹೊಂದಿದೆ. ಈ ಸ್ಥಾನಗಳಿಂದ ಮತ್ತಷ್ಟು ಮೇಲೆ ಹೋಗಲು ‘ರಾಜ್ಯ ಮೇವು ಭದ್ರತಾ ನೀತಿ ರೂಪಿಸಲಿದೆ.’ ಇದೇ ಸಂದರ್ಭ ದಲ್ಲಿ ಚರ್ಮ ಸಂಸ್ಕರಣೆ ಮತ್ತು ಹದ ಮಾಡುವ ಕೇಂದ್ರ ಸ್ಥಾಪಿಸ ಲಾಗುವುದು. ನೀರಾವರಿ ಸಾಮಥ್ರ್ಯ ಕಲ್ಪಿಸಲು ನಿರ್ದಿಷ್ಟ ಯೋಜನೆಗಳನ್ನು ರೂಪಿಸಲಿದೆ. ಇದಕ್ಕಾಗಿ ಕಿರು ನೀರಾವರಿ ವ್ಯವಸ್ಥೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಂಡು ಕೆರೆಗಳನ್ನು ತುಂಬಿಸುವ ಯೋಜನೆ ಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಕಾಲುವೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಮಾಪನ ಮಾಡಲು ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ವ್ಯವಸ್ಥೆ ಅಳವಡಿಸ ಲಾಗುವುದು. ನದಿಗಳ ಜಲಾನಯನ ಅಚ್ಚುಕಟ್ಟು ಪ್ರದೇಶಗಳನ್ನು ಶುದ್ಧೀಕರಿಸಿ, ನದಿ ದಡಗಳ ಮೇಲೆ ದಟ್ಟ ಮರದ ತೋಪುಗಳನ್ನು ರೂಪಿಸುವ ಉದ್ದೇಶ ಹೊಂದಿದ್ದೇವೆ.

ಮಾಲಿನ್ಯಗೊಂಡ ನದಿ ತೀರಗಳಲ್ಲಿ ಹಂತ ಹಂತವಾಗಿ ನೀರಿನ ಗುಣಮಟ್ಟ, ಮೇಲ್ವಿಚಾರಣಾ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಿದೆ. ಪ್ಲ್ಯಾಸ್ಟಿಕ್ ಕ್ಯಾರಿಬ್ಯಾಗ್‍ಗಳು ಮತ್ತು ಇತರ ಪ್ಲ್ಯಾಸ್ಟಿಕ್ ವಸ್ತುಗಳ ಉತ್ಪಾದನೆ, ಸರಬರಾಜು, ಮಾರಾಟ ಮತ್ತು ಬಳಕೆ ನಿಷೇಧಿಸಿದೆ, ಇದನ್ನು ರಾಜ್ಯಾದ್ಯಂತ ಕಟ್ಟುನಿಟ್ಟಿನಿಂದ ಜಾರಿಗೆ ತರಲಾಗುವುದು.

ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ, ವರ್ಗದ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದಲ್ಲದೆ, ನಿರುದ್ಯೋಗಿ ಯುವಜನರಿಗೆ ಕೌಶಲ್ಯ ಅಭಿವೃದ್ಧಿ ಒದಗಿಸಲು ಮುಂದಾಗಿದೆ. ಈ ವರ್ಗದ ಸ್ವಉದ್ಯೋಗಕ್ಕಾಗಿ ನೆರವು ನೀಡುವಂತಹ ಹಲವು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಮೂಲಸೌಲಭ್ಯ ಒದಗಿಸುವುದಕ್ಕೆ ಒತ್ತು ನೀಡಲಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ಸಮಗ್ರ ಬೆಳವಣಿಗೆಗೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಯೋಜನೆಯನ್ನು ಸರ್ಕಾರ ಖಾತರಿ ಪಡಿಸುತ್ತದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹಾಗೂ ಕಲಿಕಾ ದೋಷಗಳನ್ನು ಪತ್ತೆ ಹಚ್ಚಲು ಸಾಧನಾ ಸಮೀಕ್ಷೆ ನಡೆಸಲಿದೆ. ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇರ್ ಘಟಕಗಳನ್ನು ಹಂತ ಹಂತವಾಗಿ ಬಲಪಡಿಸಲು ಉದ್ದೇಶಿಸಿದೆ. ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಲೆಕ್ಕಕ್ಕೆ ಸಿಗದೆ ಹರಿಯುವ ನೀರಿನ ಪ್ರಮಾಣ ಕಡಿತಗೊಳಿಸುವ ಮತ್ತು ಸೋರಿಕೆ ನಿಯಂತ್ರಿಸಲು ಒಂದು ಯೋಜನೆ ನಗರದಲ್ಲಿ ಜಾರಿಗೆ ತರಲಾಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮವು 2021 ರ ಮಾರ್ಚ್ ವೇಳೆಗೆ 118 ಕಿಲೋ ಮೀಟರ್ ಉದ್ದದ ಮಾರ್ಗ ನಿರ್ಮಾಣ ಪೂರ್ಣಗೊಳಿಸಿ, 20 ಲಕ್ಷ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಧ್ಯೇಯ ಹೊಂದಿದೆ. ರಾಜ್ಯದ ಹಲವು ಪ್ರಗತಿಪರ ಯೋಜನೆಗಳು ವಿವಿಧ ರಾಜ್ಯಗಳಿಗೆ ಮಾದರಿಯಾಗಿದೆ, ಇಲ್ಲಿರುವ ಸದಸ್ಯರಲ್ಲಿ ಹಲವರು ರಾಜ್ಯ, ರಾಷ್ಟ್ರ, ವಿಶ್ವ ಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿದ್ದು, ಕೀರ್ತಿ ಪತಾಕೆಯನ್ನು ಇವರು ಮತ್ತಷ್ಟು ಎತ್ತರಕ್ಕೆ ಹಾರಿಸುವ ಸಾಮಥ್ರ್ಯ ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ಯೋಜನೆಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಜನ ಮಾನಸಕ್ಕೆ ತಲುಪಿಸಲು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸೋಣ.

ಅಲ್ಪ ನೀರಿನಲ್ಲಿ ಲಾಭದಾಯಕ ಬೆಳೆಗೆ ಸರ್ಕಾರದ ಒತ್ತಾಸೆ

ಬೆಂಗಳೂರು: ರಾಜ್ಯದ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಂಡು ಅಲ್ಪ ನೀರಿನಲ್ಲಿ ಲಾಭದಾಯಕ ಬೆಳೆ ತೆಗೆಯಲು ನನ್ನ ಸರ್ಕಾರ ಕಾರ್ಯಕ್ರಮ ರೂಪಿಸಲಿದೆ ಎಂದು ರಾಜ್ಯಪಾಲರು ಇಂದಿಲ್ಲಿ ತಿಳಿಸಿದ್ದಾರೆ.

ವಿಧಾನಮಂಡಲದ ಉಭಯ ಸದನದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜೂಭಾಯ್ ವಾಲಾ, ನೀರು ಲಭ್ಯತೆ ಆಧರಿಸಿ, ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯ ಬಹುದು ಎಂಬುದರ ಕುರಿತು ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಲಹೆ ನೀಡುತ್ತಾರೆ. ನಮ್ಮ ಕೃಷಿ ಪದ್ಧತಿ ಹಾಗೂ ನೀತಿಯಲ್ಲಿ ಬದಲಾವಣೆ ತಂದು ಅನ್ನದಾತನಿಗೆ ಅಧಿಕ ಆದಾಯ ಹಾಗೂ ಹೆಚ್ಚು ಲಾಭ ದೊರಕಿಸಿ ಕೊಡಬೇಕಾದರೆ, ತೋಟ ಗಾರಿಕಾ ಬೆಳೆಗಳಿಗೆ ಹೆಚ್ಚು ಒತ್ತು ನೀಡಲಿದೆ. ರಫ್ತು ಆಧಾರಿತ ದೃಷ್ಟಿ ಹೊತ್ತು ಮಾರುಕಟ್ಟೆ ಪೊಟ್ಟಣೀಕರಣ ಸಂಗ್ರಹ ವ್ಯವಸ್ಥೆ ರೂಪಿಸಲಾ ಗುವುದು. ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆ ಇಡೀ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ನನ್ನ ಸರ್ಕಾರ ದೃಢಸಂಕಲ್ಪ ಹೊಂದಿದೆ. ಆತಂಕದ ದಿನಗಳು ಇನ್ನಿಲ್ಲ, ಧ್ವನಿ ಇಲ್ಲದ ಸಣ್ಣ ರೈತರಿಗೆ ಧ್ವನಿಯಾಗಬೇಕು ಎಂಬುದು ನನ್ನ ಸರ್ಕಾರದ ಆಶಯ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಈ ಸದನದ ಮೂಲಕ ಕೃಷಿಕ ಸಮು ದಾಯಕ್ಕೆ ಮನವಿ ಮಾಡುತ್ತೇನೆ. ರೈತರ ರಕ್ಷಣೆಗೆ ನನ್ನ ಸರ್ಕಾರ ಸದಾ ತುಡಿಯುತ್ತದೆ, ಆಧುನಿಕ ಕೃಷಿ ತಂತ್ರಜ್ಞಾನ ಬಳಕೆಗೆ ಸಜ್ಜುಗೊಳಿಸುವುದು ನನ್ನ ಆದ್ಯತೆ. ಒಟ್ಟಾರೆ ಅನ್ನದಾತನ ಬದುಕನ್ನು ಹಸನುಗೊಳಿಸಲು ಮಾನವೀಯತೆ ಚೌಕಟ್ಟಿನಲ್ಲಿ ನಿಲುವು, ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನ ಹಿತ ಕಾಪಾಡುವಂತಹ ಹೊಸ ದೃಷ್ಟಿ, ಹೊಸ ದಾರಿಯಲ್ಲಿ ಹೆಜ್ಜೆ ಇಡಲಿದೆ ಎಂದು ತಿಳಿಸಿದ್ದಾರೆ.

Translate »