ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯ
ಕೊಡಗು

ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯ

July 4, 2018

ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಸುಮಾರು 130 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ.

ಸಾವಿರಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ್ದರು. ಆರಂಭದಲ್ಲಿ ಇದ್ದ ಸ್ಥಿತಿಯಲ್ಲಿಯೇ ಕಾಲೇಜು ಈಗಲೂ ಮುಂದುವರೆಯು ತ್ತಿದೆ. ಕಟ್ಟಡ ದುರಸ್ಥಿ ಕಾಣದೆ, ಶಿಥಿ ಲಾವಸ್ಥೆಗೆ ತಲುಪಿದೆ. ಕಟ್ಟಡದ ಗೋಡೆ ಗಳಲ್ಲಿ ಅಲ್ಲಲ್ಲಿ ಬಿರುಕು, ಪ್ಲಾಸ್ಟಿಂಗ್ ಕಿತ್ತು ಬಂದಿದೆ. ಕೆಲವು ಗೋಡೆ ಬಿದ್ದು ದೊಡ್ಡಕಿಂಡಿಯಾಗಿದೆ. ಹೆಂಚುಗಳು ಹಳತಾಗಿ, ಕೆಲವು ಹೆಂಚುಗಳು ತೂತಾಗಿ, ಎಲ್ಲಾ ತರಗತಿ ಕೊಠಡಿಗಳೂ ಮಳೆಯಿಂದ ಸೋರುತ್ತಿವೆ. ಬೆಂಚ್‍ಗಳು, ಡೆಸ್ಕ್‍ಗಳನ್ನು 130 ವರ್ಷದ ಪಳೆಯು ಳಿಕೆಗಳಂತಾಗಿವೆ.
ಕುಡಿಯುವ ನೀರಿನ ವ್ಯವಸ್ಥೆ, ಶೌಚಾ ಲಯದ ವ್ಯವಸ್ಥೆ ಸ್ಥಿತಿ ಗಂಭೀರವಾಗಿದೆ. ಪ್ರಾಂಶುಪಾಲರಿಗೆಕೂರಲು ಸರಿಯಾದ ಕೊಠಡಿ ಇಲ್ಲದಂತಾಗಿದೆ. ಸಭಾಂಗಣ ವಂತು ಇಲ್ಲವೇ ಇಲ್ಲ. ಇಷ್ಟೆಲ್ಲಾ ನ್ಯೂನ ತೆಗಳ ನಡುವೆ ಈ ಭಾಗದ ಮಕ್ಕಳ ವಿದ್ಯೆಯ ಹಸಿವು ನೀಗಿಸುತ್ತಿರುವ ವಿರಾಜಪೇಟೆಯ ಜೂನಿಯರ್ ಕಾಲೇಜ್ ಈಗ ಅಕ್ಷರಶಃ ಸರ್ಕಾರದ ಅನು ದಾನಕ್ಕಾಗಿ ಕಾಯುತ್ತಿದೆ.

ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯನವರು ಸ್ವಯಂಪ್ರೇರಣೆ ಯಿಂದ ಕಾಲೇಜಿಗೆ ದಿಢೀರ್ ಭೇಟಿ ನೀಡಿ, ಕಾಲೇಜಿನ ಅವ್ಯವಸ್ಥೆ, ಕಟ್ಟಡ ನಿರ್ವಹಣೆಯಿಲ್ಲದಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಅವರೊಡ ಗೂಡಿ ಖುದ್ದು ವೀಕ್ಷಣೆ ನಡೆಸಿದರು.

ಕಾಲೇಜಿನ ಸಮಸ್ಯೆಗಳ ವಿವರ ಪಡೆದ ಇವರು ಸರ್ಕಾರದ ವತಿಯಿಂದ ಪರಿ ಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೆ ಸುಧೀರ್ಘ ಚರ್ಚೆ ನಡೆಸಿ ನೀಡಿದ ಮನವಿಯನ್ನು ಸ್ವೀಕರಿಸಿದರು. ಈ ಬಗ್ಗೆ ಶಿಕ್ಷಣ ಸಚಿವ.ಎನ್.ಮಹೇಶ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದರು. ಜಿಲ್ಲಾ ಪಂಚಾ ಯಿತಿಯ ವತಿಯಿಂದ ಕಾಲೇಜಿನ ಪರಿಹಾರಕ್ಕೆ ಪ್ರಯತ್ನಿಸುವ ಬಗ್ಗೆ ಆಶಾ ಭಾವನೆ ವ್ಯಕ್ತಪಡಿಸಿದರು. ಸಭಾಂಗಣ ನಿರ್ಮಾಣ ಬಗ್ಗೆಯು ಸಮಾನ ಮನಸ್ಕ ರೊಡನೆ ಚರ್ಚಿಸು ವುದಾಗಿ ತಿಳಿಸಿದರು.

Translate »