ಜು.25ರಂದು ಉದ್ಯೋಗ ಮೇಳ
ಮೈಸೂರು

ಜು.25ರಂದು ಉದ್ಯೋಗ ಮೇಳ

July 13, 2018

ಮೈಸೂರು: ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಆವರಣದಲ್ಲಿ ಜು.25ರಂದು ಬೆಳಿಗ್ಗೆ 10 ಗಂಟೆಗೆ ಕಚೇರಿಯ ಆವರಣದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ “ಉದ್ಯೋಗ ಮೇಳ ”ವನ್ನು ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಸುರಭಿ ಪ್ಲಾನ್‍ಟೆಕ್ ಮೈಸೂರು, ಬಿ.ಎಸ್.ಗೌಡ ಎಂಟರ್ ಪ್ರೈಸಸ್ ಮೈಸೂರು, ಯುರೇಕಾಫೋಬ್ರ್ಸ್ ಮೈಸೂರು, ತೇಜಸ್ವಿನಿ ಎಂಟರ್‍ಪ್ರೈಸಸ್ ಮೈಸೂರು, ರೀಟೇಲ್ ವಕ್ರ್ಸ್‍ಇಂಡಿಯಾ ಪ್ರೈ. ಲಿ. ಬೆಂಗಳೂರು, ಹಿಂದುಜಾ ಗ್ಲೋಬಲ್ ಸಲ್ಯೂಷನ್ ಮೈಸೂರು, ರಾಜಾ ಬಯೋಟೆಕ್ ಮೈಸೂರು, ಗ್ರಾಸ್ ರೋಟ್ ಮೈಸೂರು, ಉಡ್‍ಲ್ಯಾಂಡ್ ಮೈಸೂರು, ರಾಣೆ ಮದ್ರಾಸ್ ಪ್ರೈ. ಲಿ ಮೈಸೂರು. ಹಾಗೂ ಇನ್ನಿತರೆ ಖಾಸಗಿ ನಿಯೋಜಕರುಗಳು ಭಾಗವಹಿಸಲಿದ್ದಾರೆ.

ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಹ ನಿರುದ್ಯೋಗ ಪುರುಷ/ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಸ್ವಂತ-ಪರಿಚಯ ಪತ್ರ (ಃIಔ-ಆಂಖಿಂ) ದೊಂದಿಗೆ ಹಾಜರಾಗುವುದು.

ಹೆಚ್ಚಿನ ಮಾಹಿತಿಗೆ ಡಿ.ಎಂ.ರಾಣ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮೈಸೂರು ಇವರನ್ನು ಕಚೇರಿ ವೇಳೆಯಲ್ಲಿ ಅಥವಾ ದೂರವಾಣ ಸಂಖ್ಯೆ:0821-2489972 ಅನ್ನು ಸಂಪರ್ಕಿಸಬಹುದು.

Translate »