ಅಪಘಾತ; ಬಸ್ ಚಾಲಕನಿಗೆ ಶಿಕ್ಷೆ
ಕೊಡಗು

ಅಪಘಾತ; ಬಸ್ ಚಾಲಕನಿಗೆ ಶಿಕ್ಷೆ

July 13, 2018

ಸೋಮವಾರಪೇಟೆ: ಕಳೆದ 2013ರ ಸೆ.25ರಂದು ನಡೆದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಈರ್ವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಆರೋಪಿ ಚಾಲಕ ಸಿದ್ದಲಿಂಗಪುರ ಗ್ರಾಮದ ಕೆ.ಎನ್. ವಿಜಯಕುಮಾರ್ ಅವರಿಗೆ 2 ವರ್ಷ ಸಜೆ ವಿಧಿಸಿದೆ.

Translate »