ಕೊಡಗು

ಮಳೆ ಅವಾಂತರ; ಕೊಡಗಿಗೆ ‘ಕತ್ತಲ’ ಭಾಗ್ಯ
ಕೊಡಗು

ಮಳೆ ಅವಾಂತರ; ಕೊಡಗಿಗೆ ‘ಕತ್ತಲ’ ಭಾಗ್ಯ

July 17, 2018

ಮಡಿಕೇರಿ:  ವರುಣನ ವಕ್ರದೃಷ್ಠಿಗೆ ತುತ್ತಾಗಿರುವ ಕೊಡಗು ಜಿಲ್ಲೆ ಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿದ್ದು, ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಭಾರೀ ಗಾಳಿಯಿಂದ ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಗೆ “ಕತ್ತಲ ಭಾಗ್ಯ” ಒದಗಿ ಬಂದಿದೆ. ನಗರ, ಪಟ್ಟಣ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಹಲವು ದಿನಗಳಿಂದ ವಿದ್ಯುತ್ ಪೂರೈಕೆ ಕಡಿತವಾಗಿದೆ. ಕಡಗದಾಳು ವ್ಯಾಪ್ತಿಯಲ್ಲಿ ಸೋಮ ವಾರ 7 ಮತ್ತು ಮರಗೋಡು ವ್ಯಾಪ್ತಿಯಲ್ಲಿ 10 ಕ್ಕೂ ಹೆಚ್ಚು ವಿದ್ಯುತ್…

ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯವಿರಲಿ
ಕೊಡಗು

ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯವಿರಲಿ

July 17, 2018

ಸೋಮವಾರಪೇಟೆ: ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಸವಲತ್ತುಗಳು ಸಕಾಲದಲ್ಲಿ ಸಮರ್ಪಕವಾಗಿ ವಿತರಣೆಯಾಗ ಬೇಕೆಂದು ಕೊಡಗು ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಸೋಮವಾರಪೇಟೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿ ಸಲಾಗಿದ್ದ ತಾಲೂಕಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ವರ್ಗಗಳ ವಸತಿ ನಿಲಯ ನಿರ್ವಹಣೆಯ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ…

ಬೈಕ್‍ಗೆ ಇನ್ನೋವಾ ಡಿಕ್ಕಿ
ಕೊಡಗು

ಬೈಕ್‍ಗೆ ಇನ್ನೋವಾ ಡಿಕ್ಕಿ

July 17, 2018

ಮಡಿಕೇರಿ:  ಅತಿ ವೇಗದಿಂದ ಬಂದ ಇನ್ನೋವಾ ಕಾರೊಂದು ಬೈಕ್ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಘಟನೆ ನಗರದ ರೋಟರಿ ಹಾಲ್ ಬಳಿ ನಡೆದಿದೆ. ಕಾರು ಚಾಲಕನ ಅಜಾಗರೂಕತೆ ಚಾಲನೆಯಿಂದ ಈ ಘಟನೆ ಸಂಭವಿಸಿದ್ದು, ಬೈಕ್ ಸವಾರ ಪವಾಡ ಸದೃಶ ರೀತಿಯಲ್ಲಿ ಯಾವುದೇ ಗಾಯಗಳಿಲ್ಲದೆ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯನ್ನು ಕಂಡ ಸ್ಥಳೀಯರು, ಕಾರಿನಲ್ಲಿದ್ದ ಯುವಕರು ಮ್ತತು ಕಾರು ಚಾಲಕನಿಗೆ ಧರ್ಮದೇಟು ನೀಡಿದ್ದಾರೆ ಈ ದೃಶ್ಯಗಳು ರೋಟರಿ ಹಾಲ್ ಪಕ್ಕ ದಲ್ಲಿರುವ ಪೆಟ್ರೋಲ್ ಬಂಕ್‍ವೊಂದರ…

ಜು.20ರಂದು ಮಡಿಕೇರಿಯಲ್ಲಿ ಪತ್ರಿಕಾ ದಿನಾಚರಣೆ
ಕೊಡಗು

ಜು.20ರಂದು ಮಡಿಕೇರಿಯಲ್ಲಿ ಪತ್ರಿಕಾ ದಿನಾಚರಣೆ

July 17, 2018

ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಪತ್ರಕರ್ತರ ವೇದಿಕೆ ಜಂಟಿ ಆಶ್ರಯದಲ್ಲಿ ಜು.20 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೊಡಗು ಪತ್ರಿಕಾ ಭವನದಲ್ಲಿ “ಪತ್ರಿಕಾ ದಿನಾಚರಣೆ” ನಡೆಯಲಿದೆ. ನಾಡೋಜ ಡಾ.ಮಹೇಶ್ ಜೋಶಿ, ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನುಶೆಣೈ ಹಾಗೂ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ ನೆಲ್ಲಿತ್ತಾಯ, ಹಿರಿಯ ಪತ್ರಕರ್ತ ಟಿ.ಪಿ.ರಮೇಶ್ ಇತರರು ಪಾಲ್ಗೊಳ್ಳಲಿದ್ದಾರೆ. ಪ್ರೊ. ಬೆಸೂರು ಮೋಹನ್ ಪಾಲೇಗಾರ್ ಅವರ ಆಧುನಿಕ ಚಲನಶೀಲ ಜೀವ ಜಗತ್ತು ಹಾಗೂ ಎಚ್.ಎಸ್.ಚಂದ್ರಮೌಳಿ ಅವರಿಂದ…

ಇಂದು ಉದ್ಯೋಗ ಮೇಳ
ಕೊಡಗು

ಇಂದು ಉದ್ಯೋಗ ಮೇಳ

July 17, 2018

ಮಡಿಕೇರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ “ವಿಶ್ವ ಕೌಶಲ್ಯ ದಿನ”ದ ಪ್ರಯುಕ್ತ ಉದ್ಯೋಗ ಮೇಳವು ಜುಲೈ, 17 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಬಿಎಸ್‍ಎಲ್ ಇಂಡಿಯಾ, ಅರಸ್ ಕಾರ್ಸ್, ಮುತ್ತೂಟ್ ಮತ್ತಿತರ ಸಂಸ್ಥೆಗಳು ಭಾಗವಹಿಸಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು…

ಕೊಡಗಿನಲ್ಲಿ ಮಳೆ ತಂದ ಅವಘಡಗಳು
ಕೊಡಗು

ಕೊಡಗಿನಲ್ಲಿ ಮಳೆ ತಂದ ಅವಘಡಗಳು

July 16, 2018

ಮಡಿಕೇರಿ:  ಬಿರುಗಾಳಿ ಮಳೆಗೆ ಕೊಡಗು ಜಿಲ್ಲೆಯ ಜನತೆ ತತ್ತರಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ, ವಿದ್ಯುತ್ ಕಂಬ ಸೇರಿದಂತೆ ಮನೆಗಳು ಕುಸಿದು ಬಿದ್ದಿದೆ. ಮಾದಾಪುರ ಸಮೀಪದ ಶಾಸಕ ಅಪ್ಪಚ್ಚು ರಂಜನ್ ಅವರ ನಿವಾಸದ ಬಳಿ ಭಾರಿ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮಡಿಕೇರಿ ಸೋಮವಾರಪೇಟೆ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಬಸ್ಸೊಂದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದೆ. ಮಾದಾಪುರ ಬಳಿ ಬಸ್ಸ್ ಬರುತ್ತಿದ್ದಂತೆಯೇ ಮರ ಧರೆಗುರುಳಲು ಸಿದ್ಧವಾಗುತ್ತಿತ್ತು. ತಕ್ಷಣವೇ ಸಮಯ ಪ್ರಜ್ಞೆ ಮರೆದ ಬಸ್‍ನ ಚಾಲಕ ಬಸ್ಸನ್ನು…

ಅಮ್ಮತ್ತಿ ಪಿಎಸಿಸಿ ನಿವ್ವಳ ಲಾಭದಲ್ಲಿ ದಾಖಲೆ ನಿರ್ಮಾಣ
ಕೊಡಗು

ಅಮ್ಮತ್ತಿ ಪಿಎಸಿಸಿ ನಿವ್ವಳ ಲಾಭದಲ್ಲಿ ದಾಖಲೆ ನಿರ್ಮಾಣ

July 16, 2018

ವಿರಾಜಪೇಟೆ: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನಲ್ಲಿ ದಾಖಲೆಯ 35,29,608.15 ರೂ. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಮೂಕೊಂಡ ಸಿ.ಅಯ್ಯಪ್ಪ ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯ ನಂತರ ಮಾತನಾಡುತ್ತಾ ಸಂಘವು ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದೆ. ನವ ಪೀಳಿಗೆಯ ಕೃಷಿಕರನ್ನು ಸಂಘದ ಸದಸ್ಯರನ್ನಾಗಿಸಿ ಸಂಘದ ಬಲವರ್ಧನೆ, ರೈತರಿಗೆ ಅಗತ್ಯದ ಮಾಹಿತಿಗಳನ್ನು ಏಕಕಾಲದಲ್ಲಿ ಆನ್ ಲೈನ್ ಮೂಲಕ ಮೊಬೈಲ್ ದೂರವಾಣಿಗೆ ರವಾನಿಸುವ ಉದ್ದೇಶ…

ಕಾಡಾನೆ ದಾಳಿಗೆ ಬೆಳೆ ನಾಶ
ಕೊಡಗು

ಕಾಡಾನೆ ದಾಳಿಗೆ ಬೆಳೆ ನಾಶ

July 16, 2018

ಸುಂಟಿಕೊಪ್ಪ: ಒಂದೆಡೆ ಭಾರೀ ಗಾಳಿ ಮಳೆಯಿಂದ ಜನತೆಯು ನಲುಗಿದ್ದರೆ, ಮತ್ತೊಂದು ಭಾಗದಿಂದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅಪಾರ ಬೆಳೆ ನಷ್ಟ ಜೊತೆಗೆ ತೋಟದಲ್ಲಿಯೇ ಬೀಡುಬಿಟ್ಟ ಕಾಡಾನೆಗಳಿಂದ ಜನ ಆತಂಕದ ಸ್ಥಿತಿಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ನಿವೃತ್ತ ರೇಂಜರ್ ಅಪ್ಪಯ್ಯ ಅವರ ನೆಲಜಿ ತೋಟಕ್ಕೆ ನುಗ್ಗಿದ್ದ ಮೂರು ಕಾಡಾನೆಗಳು ಬಾಳೆ, ಕಾಫಿ ಇನ್ನಿತರ ಕೃಷಿ ಫಸಲುಗಳನ್ನು ತಿಂದು ತುಳಿದು ಧ್ವಂಸಗೊಳಿಸಿವೆ ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ…

ಆನೆ ಸಾವು
ಕೊಡಗು

ಆನೆ ಸಾವು

July 16, 2018

ಗೋಣಿಕೊಪ್ಪಲು: ಬೆಮ್ಮತ್ತಿ ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಸೆರೆಯಾಗಿದ್ದ ಕಾಡಾನೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಭಾನುವಾರ ಬೆಳಗ್ಗೆ ಸಾವನ್ನಪ್ಪಿದೆ. ಸೆರೆಯಾಗಿದ್ದ 40 ವರ್ಷ ಪ್ರಾಯದ ಗಂಡಾನೆಯ ಕಾಲಿನ ಊದಿಕೊಂಡಿರುವ ಜಾಗದಲ್ಲಿ ಕೀವನ್ನು ಶನಿ ವಾರ ವೈದ್ಯರು ಹಾಗೂ ಸಿಬ್ಬಂದಿ ಸಹಾಯ ದಲ್ಲಿ ಹೊರ ತೆಗೆದಿದ್ದರು. ಕಾಲಿನ ಮೇಲ್ಪದರ ಕೊಳೆತಿರುವುದರಿಂದ ಕಾಲಿಗೆ ಬಲವಿಲ್ಲದಾ ಗಿತ್ತು. ಗಾಯದ ಒಳಭಾಗದಲ್ಲಿ ಕೊಳೆತು ಕಾಲಿನ ಮೇಲಿನವರೆಗೂ ಆಕ್ರಮಿಸಿಕೊಂಡು ಹೊಟ್ಟೆಗೆ ಸೇರಿದ್ದೇ ಸಾವಿಗೆ ಕಾರಣವಾಗಿದೆ. ಕಳೆದ ಗುರುವಾರ ಸಂಜೆ 6…

ವಿರಾಜಪೇಟೆಯಲ್ಲಿ ರೋಟರಿ ಪದಗ್ರಹಣ ಸಮಾರಂಭ
ಕೊಡಗು

ವಿರಾಜಪೇಟೆಯಲ್ಲಿ ರೋಟರಿ ಪದಗ್ರಹಣ ಸಮಾರಂಭ

July 16, 2018

ವಿರಾಜಪೇಟೆ:  ರೋಟರಿ ಸಂಸ್ಥೆಯ ಸಮಾಜ ಸೇವೆ ಅಮೂಲ್ಯ ವಾದದ್ದು. ಬಡವರು, ನಿರ್ಗತಿಕರು, ಅರ್ಹ ಫಲಾನುಭವಿಗಳಿಗೆ ವಿದ್ಯಾಭ್ಯಾಸ, ಆರೋಗ್ಯದ ದೃಷ್ಟಿಯಿಂದ ಸಮಗ್ರ ಮಾಹಿತಿ, ತಿಳುವಳಿಕೆಯನ್ನು ನೀಡುವಂತಾಗಬೇಕು. ಈ ಸೇವೆಯಿಂದ ಪ್ರತಿಯೊಬ್ಬರಿಗೂ ಸಾರ್ಥಕತೆಯ ಸೇವೆ ಒದಗಿಸುವಂತಾಗ ಬೇಕು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೋ:ಎಂ.ಎಂ.ಸುರೇಶ್ ಚಂಗಪ್ಪ ಹೇಳಿದರು. ರೋಟರಿ ಕ್ಲಬ್‍ನಿಂದ ವಿರಾಜಪೇಟೆ ರೋಟರಿ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಸಾಲಿನ ಆಡಳಿತ ಮಂಡಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತ ನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜ…

1 155 156 157 158 159 187
Translate »