ವಿರಾಜಪೇಟೆಯಲ್ಲಿ ರೋಟರಿ ಪದಗ್ರಹಣ ಸಮಾರಂಭ
ಕೊಡಗು

ವಿರಾಜಪೇಟೆಯಲ್ಲಿ ರೋಟರಿ ಪದಗ್ರಹಣ ಸಮಾರಂಭ

July 16, 2018

ವಿರಾಜಪೇಟೆ:  ರೋಟರಿ ಸಂಸ್ಥೆಯ ಸಮಾಜ ಸೇವೆ ಅಮೂಲ್ಯ ವಾದದ್ದು. ಬಡವರು, ನಿರ್ಗತಿಕರು, ಅರ್ಹ ಫಲಾನುಭವಿಗಳಿಗೆ ವಿದ್ಯಾಭ್ಯಾಸ, ಆರೋಗ್ಯದ ದೃಷ್ಟಿಯಿಂದ ಸಮಗ್ರ ಮಾಹಿತಿ, ತಿಳುವಳಿಕೆಯನ್ನು ನೀಡುವಂತಾಗಬೇಕು. ಈ ಸೇವೆಯಿಂದ ಪ್ರತಿಯೊಬ್ಬರಿಗೂ ಸಾರ್ಥಕತೆಯ ಸೇವೆ ಒದಗಿಸುವಂತಾಗ ಬೇಕು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೋ:ಎಂ.ಎಂ.ಸುರೇಶ್ ಚಂಗಪ್ಪ ಹೇಳಿದರು.

ರೋಟರಿ ಕ್ಲಬ್‍ನಿಂದ ವಿರಾಜಪೇಟೆ ರೋಟರಿ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಸಾಲಿನ ಆಡಳಿತ ಮಂಡಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತ ನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ರೋಟರಿ ಸಂಸ್ಥೆಯ ರೋಟೆರಿ ಯನ್‍ಗಳು ವೈಯಕ್ತಿಕವಾಗಿ ತನ್ನ ಸಾಮ ಥ್ರ್ಯವನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ಸಮಾಜದ ಬೇಡಿಕೆ ಗಳಿಗೆ ಸ್ಪಂದಿಸುವಂತಾಗಬೇಕು. ರೋಟೆರಿಯ ನ್‍ಗಳು ತಾವು ಮಾಡುವ ಸೇವಾ ಕಾರ್ಯ ಗಳಲ್ಲಿ ನಿಗಧಿತ ಗುರಿ ಇಟ್ಟುಕೊಂಡು ಸಮಾ ಜಸೇವೆಗೆ ಮುಂದಾಗಬೇಕು ಹಾಗೂ ಸ್ವಾವಲಂಬಿಗಳು, ದುರ್ಬಲರಿಗೆ, ಕಡುಬಡ ವರಿಗೆ ಸಹಾಯ ಹಸ್ತ ನೀಡುವ ಮನ ಸ್ಸುವುಳ್ಳವರು ಇದನ್ನು ಪೂರ್ತಿಗೊಳಿಸಲು ಸರಿಯಾದ ಮಾರ್ಗದರ್ಶನ ಅಗತ್ಯ. ಸಮಾಜದ ಉನ್ನತಿಗೆ, ಪ್ರಗತಿಗೆ, ರೋಟೆ ರಿಯನ್ನರ ಮುಕ್ತ ಸ್ಪಂದನೆ ಸಹಕಾರ ಅಗತ್ಯವಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಅಸಿಸ್ಟೆಂಟ್ ಗವರ್ನರ್ ರೋ:ಧರ್ಮಪುರ ನಾರಾಯಣ್ ಮಾತನಾಡಿ, ರೋಟರಿ ಸಂಸ್ಥೆಯು ಬಾಲ್ಯ ಶಿಕ್ಷಣ ಯೋಜನೆಯನ್ನು ಜಾರಿ ಗೊಳಿಸಿದ್ದು, ಇದರಿಂದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ಸಮಗ್ರ ರೀತಿಯಲ್ಲಿ ಜಾರಿಗೆ ತರಲು ರೋಟೆರಿ ಯನ್‍ಗಳು ಪರಸ್ಪರ ಸಹಕರಿಸಬೇಕು ಎಂದರು. ರೋಟರಿ ಸಂಸ್ಥೆಯ ಜೋನಲ್ ಲೆಫ್ಟಿನೆಂಟ್ ರೋ: ರೀಟಾ ದೇಚಮ್ಮ ಮಾತನಾಡಿ, ಪದಾಧಿಕಾರಿಗಳು ಸಂಸ್ಥೆಯ ಆಧಾರ ಸ್ತಂಭವಿದ್ದಂತೆ. ಸಮಾಜ ಸೇವೆಗೆ ಅವರ ಶ್ರಮ ಅವಶ್ಯವಾಗಿದೆ ಎಂದರು. ಸಭೆಯನ್ನುದ್ದೇಶಿಸಿ ಬೆಂಗಳೂರಿನ ಸಿಇಒ ಅನರ್ವ ಸಂಸ್ಥೆಯ ಸ್ಥಾಪಕ ದೇವಿಕಾ ದೇವಯ್ಯ, ಸಂಸ್ಥೆಯ ಹಿಂದಿನ ಸಾಲಿನ ಅಧ್ಯಕ್ಷ ಶಾಂತರಾಮ್ ಕಾಮತ್, ಪ್ರಸ್ತುತ ಸಾಲಿನ ಅಧ್ಯಕ್ಷ ಎಂ.ಎಸ್.ರವಿ ಮಾತ ನಾಡಿದರು. ಕಾರ್ಯದರ್ಶಿ ಕೆ.ಎಚ್. ಆದಿತ್ಯ ವರದಿ ವಾಚಿಸಿದರು.

ನೂತನ ಸಾಲಿನ ಆಡಳಿತ ಮಂಡಳಿ ಯಿಂದ ಅಧಿಕಾರ ಸ್ವೀಕಾರ: ರಾಜ್ಯಪಾಲ ರಿಂದ ಪ್ರತಿಜ್ಞಾವಿಧಿ ಸ್ವೀಕ ರಿಸಿದ ನಂತರ ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಎಸ್. ರವಿ, ಎನ್.ಉಷಾಲತಾ, ಕಾರ್ಯದರ್ಶಿ ಯಾಗಿ ಬಿ.ಜಿ. ಚೇತನ್ ಮುತ್ತಣ್ಣ, ಖಜಾಂಚಿಯಾಗಿ ಸರೋಜ್ ಕಾರ್ಯಪ್ಪ, ಸಾರ್ಜಂಟ್ ಆಗಿ ಭರತ್ ರಾಮ್ ರೈ, ನಿದೇರ್ಶಕರುಗಳಾಗಿ ಸತೀಶ್ ಗಣಪತಿ, ಎಂ.ಐ ನಾಣಯ್ಯ, ಡಾ.ಎಂ.ಯು. ಚಂಗಪ್ಪ, ಎ.ಎಸ್.ಮಾಚಯ್ಯ, ಎಂ.ಎಂ.ಪೂವಣ್ಣ, ಡಾ.ಎಸ್.ವಿ.ನರಸಿಂಹನ್, ವಿಕಾರ್ ಖಾನ್, ಪಿ.ಎನ್.ಪ್ರಸಾದ್‍ಹರಿಶಂಕರ್, ಬಿ.ಸಿ.ಸುಬ್ಬಯ್ಯ ಅಧಿಕಾರ ಸ್ವೀಕರಿಸಿದರು. ಪದಗ್ರಹಣ ಸಮಾ ರಂಭಕ್ಕೆ ಶನಿವಾರಸಂತೆ, ಸೋಮವಾರ ಪೇಟೆ, ಕುಶಾಲನಗರ, ಸುಂಟಿಕೊಪ್ಪ, ಗೋಣಿಕೊಪ್ಪ, ಮಡಿಕೇರಿ, ಮಡಿಕೇರಿಯ ಮಿಸ್ಟಿ ಹಿಲ್ಸ್, ಹುಣಸೂರು, ಪಿರಿಯಾ ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.

Translate »