ಕೊಡಗು

2 ಲಕ್ಷ ಮೌಲ್ಯದ ಮರ ವಶ; ಓರ್ವನ ಬಂಧನ
ಕೊಡಗು

2 ಲಕ್ಷ ಮೌಲ್ಯದ ಮರ ವಶ; ಓರ್ವನ ಬಂಧನ

July 21, 2018

ಗೋಣಿಕೊಪ್ಪಲು: ಅರಣ್ಯದಲ್ಲಿ ಮರ ಕಡಿದು ಸಾಗಾಟ ಮಾಡುತ್ತಿದ್ದ ಆರೋಪದಡಿ ಕೊಂಡಿದ್ದಾರೆ. ತಿತಿಮತಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿ, 2 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದ್ದಾರೆ. ಚೆನ್ನಂಗೊಲ್ಲಿಯ ಮುಕ್ತಾರ್ (37) ಬಂಧಿತ ಆರೋಪಿ. ಆರೋಪಿಯನ್ನು ಪೊನ್ನಂ ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಖಚಿತ ಮಾಹಿತಿಯಂತೆ ಶುಕ್ರವಾರ ಮುಂಜಾನೆ 6 ಗಂಟೆ ಸುಮಾ ರಿಗೆ ದಾಳಿ ನಡೆಸಿರುವ ಅರಣ್ಯ ಇಲಾಖೆ ತಂಡ ತಾರಿಕಟ್ಟೆ ಅರಣ್ಯ ದಿಂದ ಮರ ಕಡಿದು ಸಾಗಾಟ ಮಾಡುತ್ತಿದ್ದ ಸಂದರ್ಭ ವಶ ಪಡಿಸಿಕೊಳ್ಳಲಾಗಿದೆ….

ಕೊಡಗಲ್ಲಿ ಮಳೆ ಕ್ಷೀಣಿಸಿದರೂ ಹಾನಿ ಅಪಾರ
ಕೊಡಗು

ಕೊಡಗಲ್ಲಿ ಮಳೆ ಕ್ಷೀಣಿಸಿದರೂ ಹಾನಿ ಅಪಾರ

July 19, 2018

ಮಡಿಕೇರಿ: ಅತಿವೃಷ್ಟಿಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆ 2 ದಿನಗಳಿಂದ ಸಹಜ ಸ್ಥಿತಿಯತ್ತ ಹೊರಳುತ್ತಿದೆಯಾ ದರೂ, ಬಿರುಗಾಳಿಗೆ ಹಾನಿಯ ಪ್ರಮಾಣ ಮುಂದುವರಿದಿದೆ. ಜಿಲ್ಲೆಯ ಹಲವೆಡೆ ಮರಗಳು ಮುರಿದು ಬಿದ್ದಿದ್ದು, ಕಾಫಿ ತೋಟಗಳು ಮತ್ತು ವಾಸದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಮಡಿಕೇರಿಯ ಡೈರಿ ಫಾರಂ ಬಳಿ ಮನೆ ಯೊಂದರ ಮೇಲ್ಛಾವಣಿ ಸಹಿತ ಗೋಡೆ ಕುಸಿದು ಬಿದ್ದಿದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಬೆಳಗ್ಗೆ 7.30ಗಂಟೆಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಮಕ್ಬುಲ್ ಎಂಬವರ ಮನೆಗೆ ಹಾನಿ ಸಂಭವಿಸಿದ್ದು,…

ಮಡಿಕೇರಿ-ಮಂಗಳೂರು ರಸ್ತೆ ಮತ್ತೊಂದು ಕಡೆ ಬಿರುಕು
ಕೊಡಗು

ಮಡಿಕೇರಿ-ಮಂಗಳೂರು ರಸ್ತೆ ಮತ್ತೊಂದು ಕಡೆ ಬಿರುಕು

July 19, 2018

ಮಡಿಕೇರಿ:  ಮಡಿಕೇರಿ-ಮಂಗಳೂರು ರಸ್ತೆಯ ಕಾಟಕೇರಿ ಜಂಕ್ಷನ್ ಬಳಿ ರಸ್ತೆಯ ಒಂದು ಪಾಶ್ರ್ವದಲ್ಲಿ ಮಂಗಳವಾರ ರಾತ್ರಿ ಭಾರೀ ಪ್ರಮಾಣದ ಬಿರುಕು ಮೂಡಿದೆ. ಕೆಲವು ದಿನಗಳ ಹಿಂದೆ ಇದೇ ಮಾರ್ಗದ ಮತ್ತೊಂದು ಸ್ಥಳದಲ್ಲಿ ಭಾರೀ ಬಿರುಕು ಕಂಡು ಬಂದು ಆತಂಕ ಎದುರಾಗಿತ್ತು. ಇದೀಗ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗದೊಂದು ಬಿರುಕು ಕಂಡು ಬಂದಿದ್ದು, ರಸ್ತೆಯ ಬದಿಯಲ್ಲೆ ಕಂದಕವಿದ್ದು, ನೀರಿನ ಹರಿವೂ ಇದೆ. ಮಳೆಯ ಪ್ರಮಾಣ ಹೆಚ್ಚಿ ರಸ್ತೆ ಕುಸಿದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಲಿದೆ. ಈಗಾಗಲೆ ಬಿರುಕು…

ಇಂದು ಹಾರಂಗಿಗೆ ಸಿಎಂ ಕುಮಾರಸ್ವಾಮಿ ಬಾಗಿನ
ಕೊಡಗು

ಇಂದು ಹಾರಂಗಿಗೆ ಸಿಎಂ ಕುಮಾರಸ್ವಾಮಿ ಬಾಗಿನ

July 19, 2018

ಮಡಿಕೇರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜು.19 ರಂದು ಮಧ್ಯಾಹ್ನ 3 ಗಂಟೆಗೆ ಹಾರಂಗಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಲಿದ್ದಾರೆ. ಮಾಜಿ ಪ್ರಧಾನಮಂತ್ರಿ ಹಾಗೂ ಸಂಸದ ರಾದ ಎಚ್.ಡಿ.ದೇವೇಗೌಡ, ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್, ಶಾಸಕ ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾ ಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಾಸಕ ರಾದ ಅಡಗೂರು ಎಚ್.ವಿಶ್ವನಾಥ್, ಡಾ.ಎ.ಟಿ. ರಾಮಸ್ವಾಮಿ,…

ಕೊಡಗಿನ ಮಳೆ ಹಾನಿ ಪರಿಹಾರಕ್ಕಾಗಿ ಸಾವಿರ ಕೋಟಿ ರೂ. ಅನುದಾನಕ್ಕೆ ಶಾಸಕ ಅಪ್ಪಚ್ಚು ರಂಜನ್ ಆಗ್ರಹ
ಕೊಡಗು

ಕೊಡಗಿನ ಮಳೆ ಹಾನಿ ಪರಿಹಾರಕ್ಕಾಗಿ ಸಾವಿರ ಕೋಟಿ ರೂ. ಅನುದಾನಕ್ಕೆ ಶಾಸಕ ಅಪ್ಪಚ್ಚು ರಂಜನ್ ಆಗ್ರಹ

July 18, 2018

ಸೋಮವಾರಪೇಟೆ: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಕ್ಕೆ ಒತ್ತಿಕೊಂಡಂತಿರುವ ಮೂವತ್ತೊಕ್ಲು, ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಶಿರಂಗಳ್ಳಿ, ಕಿಕ್ಕರಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಕೂತಿ, ತೋಳೂರು ಶೆಟ್ಟಳ್ಳಿ ಭಾಗದಲ್ಲಿ ಮಳೆಯಿಂದ ಹಾನಿ ಗೀಡಾಗಿರುವ ಪ್ರದೇಶಕ್ಕೆ ಮಂಗಳವಾರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತೆರಳಿ ಪರಿಶೀಲನೆ ನಡೆಸಿದರು. ಕೊಡಗಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಭೀಕರವಾಗಿದ್ದು, ಪರಿಹಾರ ಕಾರ್ಯ ಕೈಗೊ ಳ್ಳಲು ಏನಿಲ್ಲವೆಂದರೂ 1 ಸಾವಿರ ಕೋಟಿ ಬೇಕಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೊಡಗಿಗೆ 1 ಸಾವಿರ ಕೋಟಿ ವಿಶೇಷ ಅನುದಾನ ಒದಗಿಸಬೇಕು ಎಂದು…

ಕೊಡಗಿಗೆ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದ್ದ 50 ಕೋಟಿ ಅನುದಾನಕ್ಕೆ ತಡೆ ಅಡ್ಡಂಡ ಸಿ.ಕಾರ್ಯಪ್ಪ ಬೇಸರ
ಕೊಡಗು

ಕೊಡಗಿಗೆ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದ್ದ 50 ಕೋಟಿ ಅನುದಾನಕ್ಕೆ ತಡೆ ಅಡ್ಡಂಡ ಸಿ.ಕಾರ್ಯಪ್ಪ ಬೇಸರ

July 18, 2018

ಪೊನ್ನಂಪೇಟೆ:  ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗಿನ ಗ್ರಾಮೀಣ ರಸ್ತೆಗಳ ಅಭಿ ವೃದ್ಧಿಗೆ ಬಿಡುಗಡೆ ಮಾಡಲಾಗಿದ್ದ 50 ಕೋಟಿ ರೂ. ವಿಶೇಷ ಅನುದಾನವನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ತಡೆ ಹಿಡಿದಿದ್ದಾರೆ ಎಂದು ಪೊನ್ನಂಪೇಟೆ ನಾಗರಿಕ ವೇದಿಕೆ ಸದಸ್ಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಆರೋಪಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೀತಾರಾಂ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕಡ್ಡಣ ಯಂಡ ಹರೀಶ್ ಅವರ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಮಂಡಿಸಿದ್ದ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ 50…

ನಾಳೆ ಸಿಎಂ ಕುಮಾರಸ್ವಾಮಿಯಿಂದ ಹಾರಂಗಿಗೆ ಬಾಗಿನ
ಕೊಡಗು

ನಾಳೆ ಸಿಎಂ ಕುಮಾರಸ್ವಾಮಿಯಿಂದ ಹಾರಂಗಿಗೆ ಬಾಗಿನ

July 18, 2018

ಕುಶಾಲನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.19 ರಂದು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿ ಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯಿಂದ ಮುಖ್ಯಮಂತ್ರಿ ಸ್ವಾಗತಕ್ಕೆ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಾರಂಗಿ ಜಲನಯನ ಪ್ರದೇಶದಲ್ಲಿ ವ್ಯಾಪಕ ವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಜಲಾ ಶಯದಿಂದ 21423 ಕ್ಯುಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇದೀಗ ಮೈದುಂಬಿರುವ ಹಾರಂಗಿ ಜಲಾಶಯಕ್ಕೆ ಗುರುವಾರ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿ ಬಾಗಿನ…

ಕೊಡಗಿನಲ್ಲಿ ಭಾರೀ ಮಳೆ: ಚೆಸ್ಕಾಂಗೆ 1.50 ಕೋಟಿ ನಷ್ಟ
ಕೊಡಗು

ಕೊಡಗಿನಲ್ಲಿ ಭಾರೀ ಮಳೆ: ಚೆಸ್ಕಾಂಗೆ 1.50 ಕೋಟಿ ನಷ್ಟ

July 18, 2018

ಮಡಿಕೇರಿ: ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದ ಪ್ರಕೃತಿ ವಿಕೋಪಗಳು ಮುಂದುವರಿದಿದೆ. ಮರಗಳು ಧರೆಗುರುಳಿ ಬೀಳುತ್ತಿದ್ದು, ಚೆಸ್ಕಾಂ ಇಲಾಖೆಗೆ ಅತೀ ಹೆಚ್ಚು ನಷ್ಟ ಸಂಭವಿಸಿದೆ. ಮಡಿಕೇರಿಯ ಜಿಲ್ಲಾಡಳಿತ ಭವನ ಮುಂಭಾಗ ಭಾರಿ ಭೂ ಕುಸಿತವಾಗಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್ ಆಗಿತ್ತು. ಹೆದ್ದಾರಿಗೆ ಬಿದ್ದ ಮರ ಮತ್ತು ಮಣ್ಣನ್ನು ತೆರವು ಗೊಳಿಸಿದ ಬಳಿಕ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತು. ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ 6 ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿತ್ತು….

ವಿಷಮಿಶ್ರಿತ ಹಲಸಿನಹಣ್ಣು ತಿಂದು ಹಸುಗಳು ಸಾವು
ಕೊಡಗು

ವಿಷಮಿಶ್ರಿತ ಹಲಸಿನಹಣ್ಣು ತಿಂದು ಹಸುಗಳು ಸಾವು

July 18, 2018

ಕುಶಾಲನಗರ: ಸಮೀಪದ ಹುದುಗೂರು ಜೇನುಕಲ್ಲು ಬೆಟ್ಟ ಮೀಸಲು ಅರಣ್ಯದಂಚಿನಲ್ಲಿ ಕಿಡಿಗೇಡಿಗಳು ಕಾಡಾನೆಗಳಿಗೆ ಇಟ್ಟಿದ್ದ ವಿಷಮಿಶ್ರಿತ ಹಲಸಿನಹಣ್ಣು ತಿಂದು ನಾಲ್ಕು ಹಸುಗಳು ಮೃತಪಟ್ಟಿರುವ ಘಟನೆ ಸೀಗೆ ಹೊಸೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಕೂಡಿಗೆ ಗ್ರಾಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ರೈತ ರವಿ ಎಂಬುವವರಿಗೆ ಸೇರಿದ ಒಂದು ಎತ್ತು ಹಾಗೂ ಮೂರು ಹಸುಗಳು ಮೃತಪಟ್ಟಿವೆ. ಕಾಡಾಂಚಿನ ಗ್ರಾಮ ದಲ್ಲಿ ಕಾಡಾನೆಗಳು ದಾಳಿ ಮಾಡಿ ಕೃಷಿ ಫಸಲನ್ನು ನಾಶ ಮಾಡುತ್ತಿರುವ ಹಿನ್ನೆಲೆ ಯಲ್ಲಿ ಕೆಲವು ಕಿಡಿಗೇಡಿಗಳು ಕಾಡಾನೆಗಳು ಬರುವ ದಾರಿಯಲ್ಲಿ…

ಮಠ ಗ್ರಾಮದಲ್ಲಿ ಹಾಡ ಹಗಲೇ ಹಸುವಿನ ಮೇಲೆ ಹುಲಿ ದಾಳಿ
ಕೊಡಗು

ಮಠ ಗ್ರಾಮದಲ್ಲಿ ಹಾಡ ಹಗಲೇ ಹಸುವಿನ ಮೇಲೆ ಹುಲಿ ದಾಳಿ

July 18, 2018

ಸಿದ್ದಾಪುರ: ಹಾಡಹಗಲೇ ಹುಲಿ ದಾಳಿಗೆ ಹಸುವೊಂದು ಗಂಭೀರವಾಗಿ ಗಾಯಗೊಂಡು ಪ್ರಾಣಪಾಯದಿಂದ ಪಾರಾದ ಘಟನೆ ಮಠ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಪಂ ವ್ಯಾಪ್ತಿಯಲ್ಲಿ ದಿನ ನಿತ್ಯ ಕಾಣಿಕೊಳ್ಳುವ ಹುಲಿ ಹಾವಳಿಯಿಂದ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಭಯ ಭೀತರಾಗಿದ್ದಾರೆ. ಕಳೆದ 3 ತಿಂಗಳಲ್ಲಿ ಹುಲಿಯ ಆಟ್ಟಹಾಸಕ್ಕೆ ಹಲವಾರು ಜಾನುವಾರುಗಳು ಬಲಿಯಾಗಿವೆ. ಮಾಲ್ದಾರೆ ಗ್ರಾಪಂ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಚಂದ್ರ ಎಂಬುವವರಿಗೆ ಸೇರಿದ ಹಸುವೊಂದು ಮಂಗಳವಾರ ಅವರ ಗದ್ದೆಯಲ್ಲಿ ಮೇಯುತಿದ್ದ ಸಂದರ್ಭ ಏಕಾಏಕಿ ದಾಳಿ ಮಾಡಿದ ಹುಲಿಯು, ಹಸುವಿನ…

1 154 155 156 157 158 187
Translate »