ಸೋಮವಾರಪೇಟೆ: ಬೆಳೆ ಗಾರರು ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಾಗ ಮಾತ್ರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿ ಪ್ರಾಯಿಸಿದರು. ಕೃಷಿ ಇಲಾಖೆಯ ವತಿಯಿಂದ ಇಲಾಖೆ ಗಳ ನಡಿಗೆ ರೈತರ ಮನೆ ಬಾಗಿಲಿಗೆ ಯೋಜನೆಯಡಿಯಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದೇಶಗಳಲ್ಲಿ ರೈತರು ಬೆಳೆ ಬೆಳೆಯಲು ನಿಬಂಧನೆಗಳಿವೆ, ಯಾರು ಯಾವ ಬೆಳೆಯುತ್ತೇವೆ ಎಂದು ಮೂರು ವರ್ಷದ ಮೊದಲೇ ಘೋಷಣೆ ಮಾಡುತ್ತಾರೆ. ಆದರೆ…
ಗಾಳಿಬೀಡು ಬಳಿ ಭೂಮಿ ಬಿರುಕು ಅಧಿಕಾರಿಗಳಿಂದ ಪರಿಶೀಲನೆ
July 22, 2018ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಬಳಿ ಭೂಮಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ತಪ್ಪಲು 2 ಇಂಚುಗಳಷ್ಟು ಆಳಕ್ಕೆ ಇಳಿದಿದೆ. ಬೆಟ್ಟದಲ್ಲಿ 1 ಕಿ.ಮೀ ಉದ್ದಕ್ಕೂ ಅಂದಾಜು 3 ಇಂಚು ಅಗಲ ದಷ್ಟು ಬಿರುಕು ಮೂಡಿದೆ. 1 ಕಿ.ಮೀ ಉದ್ದದ ಬಿರುಕು 50 ಎಕರೆ ಬೆಟ್ಟ ಪ್ರದೇಶ ವನ್ನು ಆವರಿಸಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕಿದೆ. ಬಿರುಕು ಕಾಣಿಸಿಕೊಂಡ ಪ್ರದೇಶದಲ್ಲಿ 4 ಕುಟುಂಬಗಳು ವಾಸವಿದ್ದು, ಜೀವಭಯ ಎದುರಿಸುತ್ತಿದ್ದಾರೆ. ಈ ವಿಚಾರ…
ಹಾಡಹಗಲೇ ಹುಲಿ ದಾಳಿಗೆ ಹಸು ಬಲಿ
July 22, 2018ಸಿದ್ದಾಪುರ: ಹಾಡಗಲೇ ಗ್ರಾಮಕ್ಕೆ ಬಂದ ಹುಲಿಯೊಂದು ಹಸುವನ್ನು ಬೇಟೆಯಾಡಿ ಬಲಿ ತೆಗೆದುಕೊಂಡ ಘಟನೆ ಅವರೇಗುಂದ ಸಮೀಪ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಹಾಡಿಯ ನಿವಾಸಿ ವೈ.ಕೆ ಮಾದ ಎಂಬವರಿಗೆ ಸೇರಿದ 40ಸಾವಿರ ಮೌಲ್ಯದ ಹಸು ಮನೆ ಸಮೀಪ ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿಗೆ ಬಲಿಯಾಗಿದ್ದು, ಜೊತೆಯಲಿದ್ದ ಮತ್ತೊಂದು ಹಸು ಪ್ರಾಣಪಾಯದಿಂದ ಪಾರಾಗಿದೆ. ರಸ್ತೆಯಲ್ಲಿ ತೆರಳುತ್ತಿದ್ದ ನಿವಾಸಿಗಳು ಹುಲಿ ದಾಳಿಯನ್ನು ಕಂಡ ಭಯಭೀತರಾಗಿದ್ದಾರೆ. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿ ದಾಳಿ ಮಾಡಿದ ಸ್ಥಳದಲ್ಲಿ…
ಕಾರ್ಮಿಕ ಸಾವು
July 22, 2018ಮಡಿಕೇರಿ: ಮಡಿಕೇರಿ ತಾಲೂ ಕಿನ ಕೋಡಂಬೂರು ಗ್ರಾಮದ ನಿವಾಸಿ ಬಾದುಮಂಡ ಕೆ.ಸುಬ್ಬಯ್ಯ ಅವರ ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಪಂಜರಿ ಎರವರ ಕಾಳ(60) ಜು.17 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದು, ಜು.18 ರಂದು ಬೆಳಗ್ಗೆ ಕೆಲಸಕ್ಕೆ ಬಾರದ ಕಾರಣ ಹೋಗಿ ನೋಡಿ ದಾಗ ಮಲಗಿದಲ್ಲಿಯೇ ಮೃತಪಟ್ಟಿರು ವುದು ಕಂಡು ಬಂದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮೃತ ಕಾಳನ…
ಸೋಮವಾರಪೇಟೆ-ವಿರಾಜಪೇಟೆ ರಸ್ತೆ : ಮೇಲ್ದರ್ಜೆಗೇರಿಸಲು ಶಾಸಕ ಅಪ್ಪಚ್ಚು ರಂಜನ್ ಮನವಿ
July 22, 2018ಮಡಿಕೇರಿ: ಹೊಳೆನರಸಿಪುರ- ಅರಕಲಗೋಡು-ಸೋಮವಾರಪೇಟೆ-ವಿರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಕೆಷಿಫ್‍ನಿಂದ ಡಿಪಿಆರ್ ಆಗಿದ್ದು, ಈ ರಸ್ತೆಯು ಸೋಮವಾರ ಪೇಟೆ-ಮಡಿಕೇರಿ-ವಿರಾಜಪೇಟೆ ತಾಲೂಕು ಮೂಲಕ ಹಾದು ಹೋಗುವುದರಿಂದ ಈ ವ್ಯಾಪ್ತಿಯ ಜನತೆಗೂ ತುಂಬಾ ಅನುಕೂಲವಾಗುವುದರಿಂದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಗಲೀಕರಣಕ್ಕೆ ಅನು ದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಕೋರಿದ್ದಾರೆ. ಕೊಡಗು ಜಿಲ್ಲೆಯಲ್ಲಿನ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳು ಇತ್ತೀಚೆಗೆ ಬಿದ್ದ ಮಳೆಯಿಂದ ಹಾನಿಯಾಗಿರುವುದರಿಂದ ವಿಶೇಷವಾಗಿ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಂದು ಸಾವಿರ…
ವಿ.ಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಚೆಂಗಪ್ಪ
July 22, 2018ಗೋಣಿಕೊಪ್ಪಲು: ವಿರಾಜ ಪೇಟೆ ತಾಲೂಕು ಕಾರ್ಯನಿರತ ಪತ್ರ ಕರ್ತರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು. ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 11 ಮಂದಿ ಆಡಳಿತ ಮಂಡ ಳಿಗೆ ಅವಿರೋಧವಾಗಿ ಆಯ್ಕೆಯಾದರು. ನೂತನ ಆಡಳಿತ ಮಂಡಳಿ ಅಧ್ಯಕ್ಷ ರಾಗಿ ಸಣ್ಣುವಂಡ ಎಂ.ಚೆಂಗಪ್ಪ, ಉಪಾ ಧ್ಯಕ್ಷರಾಗಿ ಆರ್. ಸುಬ್ರಮಣಿ , ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ರಜಿತ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಸಣ್ಣುವಂಡ ಕಿಶೋರ್ ನಾಚಪ್ಪ, ಖಜಾಂಜಿಯಾಗಿ ಡಿ.ಪಿ.ರಾಜೇಶ್, ನಿರ್ದೇಶಕರುಗಳಾಗಿ ಅಜಿತ್ ಕರುಂಬಯ್ಯ, ವಿ.ವಿ.ಅರುಣ್ ಕುಮಾರ್, ಎ.ಎಸ್.ಮುಸ್ತಫಾ, ಜಗ ದೀಶ್,…
ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್ ಪೂವಯ್ಯ ರಾಜೀನಾಮೆ
July 22, 2018ಗೋಣಿಕೊಪ್ಪಲು: ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್ ಪೂವಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಇಂದು ನಡೆದ ಜೆಡಿಎಸ್ ಜಿಲ್ಲಾಧ್ಯಕ್ಷರ ಸಭೆಗೆ ತೆರಳಿದ್ದ ಸಂಕೇತ್ ಪೂವಯ್ಯ ಸ್ವಪಕ್ಷದ ಕೆಲವರ ವರ್ತನೆಗೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಪಕ್ಷದ ಬೆಳವಣಿಗೆಗೆ ಸಹಕರಿಸದ ಕೆಲವರು ಕೊಡಗಿಗೆ ಪಕ್ಷದ ರಾಜ್ಯಾಧ್ಯಕ್ಷರೂ ಆದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಭೇಟಿ ನೀಡಿದ್ದ ವೇಳೆ ತಮ್ಮ ವಿರುದ್ಧ ಘೋಷಣೆ ಕೂಗಿ ತಮಗೆ…
ಸಂಕೇತ್ ರಾಜೀನಾಮೆ ಹಿಂಪಡೆಯಲು ಆಗ್ರಹ
July 22, 2018ಗೋಣಿಕೊಪ್ಪಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೊಡಗು ಜಿಲ್ಲೆಯ ಸಮಸ್ಯೆ ತಿಳಿಯಲು ಆಗಮಿಸಿದ ಸಂದರ್ಭ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವ ರೀತಿಯಲ್ಲಿ ಪಕ್ಷದ ಕೆಲವರು ನಡೆದುಕೊಂಡ ರೀತಿಯನ್ನು ಖಂಡಿಸುವುದಾಗಿ ಜೆಡಿಎಸ್ ಪಕ್ಷದ ಯುವ ಅಧ್ಯಕ್ಷ ಅಮ್ಮಂಡ ವಿವೇಕ್ ತಿಳಿಸಿದ್ದಾರೆ. ಈ ಘಟನೆಯಿಂದ ನೊಂದಿರುವ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ರಾಜೀನಾಮೆ ನೀಡಿರುವುದು ಸರಿಯಲ್ಲ. ಇವರ ರಾಜೀನಾಮೆ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಸಂಕೇತ್ ರಾಜೀನಾಮೆ ಸಲ್ಲಿಸುವ ವಿಚಾರ ತಿಳಿದು ವಿರಾಜಪೇಟೆಯ ಪಂಜಾರ್‍ಪೇಟೆಯಲ್ಲಿ ಜೆಡಿಎಸ್ ಯುವ ಅಧ್ಯಕ್ಷ ಅಮ್ಮಂಡ ವಿವೇಕ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ…
ಸ್ಥಳೀಯ ಸಮಸ್ಯೆ ಅರಿತು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ :ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ
July 21, 2018ಮಡಿಕೇರಿ: ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿತು ಸೂಕ್ಷ್ಮವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಗುರುವಾರ ಮಾಹಿತಿ ಪಡೆದು ಮುಖ್ಯ ಮಂತ್ರಿಗಳು ಮಾತನಾಡಿದರು. ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ರಾಜ್ಯದ ಹಲವು ಭಾಗಗಳಲ್ಲಿ ಒಂದೊಂದು ರೀತಿಯ…
ಕೊಡಗಿನ ರೈತರೊಡನೆ ಮತ್ತೊಮ್ಮೆ ಸಭೆ ಮಾಡುವೆ: ರೈತ ಸಂಘಕ್ಕೆ ಸಿಎಂ ಕುಮಾರಸ್ವಾಮಿ ಭರವಸೆ
July 21, 2018ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ರೈತರ ಸಮಸ್ಯೆಗಳನ್ನು ತಿಳಿದಿ ದ್ದೇನೆ. ಮುಂದೆ ಕೊಡಗು ಜಿಲ್ಲೆಯಲ್ಲಿ ರೈತರೊಡನೇ ಮತ್ತೊಂದು ಸುತ್ತಿನ ಸಭೆ ನಡೆಸುವ ಮೂಲಕ ಈ ಭಾಗದ ರೈತರ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸೋಣವೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಕೊಡಗು ಜಿಲ್ಲೆಗೆ ನೆರೆ ಹಾವಳಿ ವೀಕ್ಷಿ ಸಲು ಖುದ್ದು ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾ ಡಳಿತ ಕಛೇರಿಯ ಸಭಾಂಗಣದಲ್ಲಿ ಭೇಟಿ…










