ಕೊಡಗಿನ ರೈತರೊಡನೆ ಮತ್ತೊಮ್ಮೆ ಸಭೆ ಮಾಡುವೆ: ರೈತ ಸಂಘಕ್ಕೆ ಸಿಎಂ ಕುಮಾರಸ್ವಾಮಿ ಭರವಸೆ
ಕೊಡಗು

ಕೊಡಗಿನ ರೈತರೊಡನೆ ಮತ್ತೊಮ್ಮೆ ಸಭೆ ಮಾಡುವೆ: ರೈತ ಸಂಘಕ್ಕೆ ಸಿಎಂ ಕುಮಾರಸ್ವಾಮಿ ಭರವಸೆ

July 21, 2018

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ರೈತರ ಸಮಸ್ಯೆಗಳನ್ನು ತಿಳಿದಿ ದ್ದೇನೆ. ಮುಂದೆ ಕೊಡಗು ಜಿಲ್ಲೆಯಲ್ಲಿ ರೈತರೊಡನೇ ಮತ್ತೊಂದು ಸುತ್ತಿನ ಸಭೆ ನಡೆಸುವ ಮೂಲಕ ಈ ಭಾಗದ ರೈತರ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸೋಣವೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಕೊಡಗು ಜಿಲ್ಲೆಗೆ ನೆರೆ ಹಾವಳಿ ವೀಕ್ಷಿ ಸಲು ಖುದ್ದು ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾ ಡಳಿತ ಕಛೇರಿಯ ಸಭಾಂಗಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ರೈತ ಮುಖಂಡರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಆನೆ ಮಾನವ ಸಂಘರ್ಷ,ಹುಲಿ ಹಾವಳಿ, ಈ ಬಾರಿ ಸುರಿದ ಬಾರಿ ಮಳೆಯಿಂದ ಕೊಡ ಗಿನ ಕಾಫಿ, ಒಳ್ಳೆ ಮೆಣಸು ಫಸಲುಗಳಿಗೆ ಕೊಳೆ ರೋಗ ಬಂದಿದ್ದು ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಗ್ರಾಮೀಣ ರಸ್ತೆಗಳು ತೀವ್ರ ಹದಗೆಟ್ಟಿ ರುವ ಬಗ್ಗೆ ಗಮನ ಸೆಳೆದರು.

ಈ ಸಂದರ್ಭ ರೈತರ ಪ್ರಶ್ನೆಗಳಿಗೆ ಉತ್ತ ರಿಸಿದ ಕುಮಾರಸ್ವಾಮಿ ರಾಜ್ಯದ ಎಲ್ಲಾ ಜಿಲ್ಲೆಯ ರೈತ ಸಂಘದ ಮುಖಂಡ ರೊಂದಿಗೆ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಸಭೆ ನಡೆಸುವ ತೀರ್ಮಾನ ಮಾಡಿದ್ದೇನೆ. ಆ ಮೂಲಕ ಜಿಲ್ಲೆಯ ರೈತರ ಸಮಸ್ಯೆ ಗಳನ್ನು ಆಲಿಸಲು ಅನುಕೂಲವಾಗಲಿದೆ. ಆದಷ್ಟು ಬೇಗನೆ ರೈತರ ಸಭೆ ಕರೆದು ಚರ್ಚಿಸೋಣ ಎಂದು ಕುಮಾರಸ್ವಾಮಿ ಜಿಲ್ಲೆಯ ರೈತ ಮುಖಂಡರುಗಳಿಗೆ ಭರ ವಸೆ ನೀಡಿದರು.

ಈ ಸಂದರ್ಭ ರೈತ ಸಂಘದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ರೈತರು ಕಣ್ಣೀರು ಸುರಿಸುವ ಪರಿಸ್ಥಿತಿ ಬಂದೊದಗಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಕಷ್ಟದಲ್ಲಿದ್ದೇವೆ. ಮುಖ್ಯಮಂತ್ರಿಗಳನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದರು. ಇವರ ಮಾತಿಗೆ ಉತ್ತರಿಸಿದ ಮುಖ್ಯಮಂತ್ರಿಗಳು ರೈತರ ಸಂಕಷ್ಟಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಇದ ರಲ್ಲಿ ರೈತರಿಗೆ ಅನುಮಾನ ಬೇಡ ಎಂದರು.

ಮುಖ್ಯಮಂತ್ರಿ ಭೇಟಿ ಸಂದರ್ಭ ರೈತ ಮುಖಂಡರಾದ ಅಜ್ಜಮಾಡ ಚಂಗಪ್ಪ, ಅಯ್ಯಮಾಡ ಹ್ಯಾರಿ ಸೋಮೇಶ್, ಆದೇಂಗಡ ಅಶೋಕ್, ಸುನೀಲ್, ವಕೀಲ ರಾದ ಹೇಮಚಂದ್ರ, ಪ್ರಮುಖರಾದ ಮಂಡೇಪಂಡ ಪ್ರವೀಣ್, ಕೆ.ಯು. ಗಣಪತಿ, ಬಿದ್ದಂಡ ಸುಬ್ಬಯ್ಯ, ಗೌತಮ್ ಪೊನ್ನಪ್ಪ, ಕಂಬೀರಂಡ ನಂದ ಗಣಪತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ರಾಜ್ಯ ಕಾರ್ಯ ದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ, ಪರಮಾಲೆ ಗಣೇಶ್, ಮುಂತಾದವರು ಹಾಜರಿದ್ದರು.

Translate »