ಮಡಿಕೇರಿ: ಮಡಿಕೇರಿ ತಾಲೂ ಕಿನ ಕೋಡಂಬೂರು ಗ್ರಾಮದ ನಿವಾಸಿ ಬಾದುಮಂಡ ಕೆ.ಸುಬ್ಬಯ್ಯ ಅವರ ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಪಂಜರಿ ಎರವರ ಕಾಳ(60) ಜು.17 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದು, ಜು.18 ರಂದು ಬೆಳಗ್ಗೆ ಕೆಲಸಕ್ಕೆ ಬಾರದ ಕಾರಣ ಹೋಗಿ ನೋಡಿ ದಾಗ ಮಲಗಿದಲ್ಲಿಯೇ ಮೃತಪಟ್ಟಿರು ವುದು ಕಂಡು ಬಂದಿದೆ.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮೃತ ಕಾಳನ ವಾರಸುದಾರರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಬಾದುಮಂಡ ಕೆ.ಸುಬ್ಬಯ್ಯ 9481278414, ಮಡಿಕೇರಿ ಗ್ರಾ. ಠಾಣೆ-08272- 228777, 9480804946 ಸಂಪರ್ಕಿಸಬಹುದು.