ಹಾಡಹಗಲೇ ಹುಲಿ ದಾಳಿಗೆ ಹಸು ಬಲಿ
ಕೊಡಗು

ಹಾಡಹಗಲೇ ಹುಲಿ ದಾಳಿಗೆ ಹಸು ಬಲಿ

July 22, 2018

ಸಿದ್ದಾಪುರ: ಹಾಡಗಲೇ ಗ್ರಾಮಕ್ಕೆ ಬಂದ ಹುಲಿಯೊಂದು ಹಸುವನ್ನು ಬೇಟೆಯಾಡಿ ಬಲಿ ತೆಗೆದುಕೊಂಡ ಘಟನೆ ಅವರೇಗುಂದ ಸಮೀಪ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.

ಹಾಡಿಯ ನಿವಾಸಿ ವೈ.ಕೆ ಮಾದ ಎಂಬವರಿಗೆ ಸೇರಿದ 40ಸಾವಿರ ಮೌಲ್ಯದ ಹಸು ಮನೆ ಸಮೀಪ ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿಗೆ ಬಲಿಯಾಗಿದ್ದು, ಜೊತೆಯಲಿದ್ದ ಮತ್ತೊಂದು ಹಸು ಪ್ರಾಣಪಾಯದಿಂದ ಪಾರಾಗಿದೆ. ರಸ್ತೆಯಲ್ಲಿ ತೆರಳುತ್ತಿದ್ದ ನಿವಾಸಿಗಳು ಹುಲಿ ದಾಳಿಯನ್ನು ಕಂಡ ಭಯಭೀತರಾಗಿದ್ದಾರೆ. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿ ದಾಳಿ ಮಾಡಿದ ಸ್ಥಳದಲ್ಲಿ ಸಿಸಿ ಕ್ಯಾಮಾರ ಅಳವಡಿಸಿದ್ದಾರೆ.

ಹಾಲು ಮಾರಿ ಜೀವನ ನಡೆಸುತ್ತಿದ್ದ ಕುಟುಂಬ ಕಂಗಲಾಗಿದ್ದು ಕೊಡಲೆ ಪರಿಹಾರ ನೀಡ ಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಹುಲಿ ಹಾವಳಿಯಿಂದ ಜಾನುವಾರು ಬಲಿಯಾಗುತ್ತಿದ್ದು.ಸಾರ್ವಜನಿಕರು ನಡೆದಾಡಲು ಸಾಧ್ಯವಾಗ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹುಲಿ ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

Translate »