ವಿ.ಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಚೆಂಗಪ್ಪ
ಕೊಡಗು

ವಿ.ಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಚೆಂಗಪ್ಪ

July 22, 2018

ಗೋಣಿಕೊಪ್ಪಲು:  ವಿರಾಜ ಪೇಟೆ ತಾಲೂಕು ಕಾರ್ಯನಿರತ ಪತ್ರ ಕರ್ತರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು. ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 11 ಮಂದಿ ಆಡಳಿತ ಮಂಡ ಳಿಗೆ ಅವಿರೋಧವಾಗಿ ಆಯ್ಕೆಯಾದರು.

ನೂತನ ಆಡಳಿತ ಮಂಡಳಿ ಅಧ್ಯಕ್ಷ ರಾಗಿ ಸಣ್ಣುವಂಡ ಎಂ.ಚೆಂಗಪ್ಪ, ಉಪಾ ಧ್ಯಕ್ಷರಾಗಿ ಆರ್. ಸುಬ್ರಮಣಿ , ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ರಜಿತ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಸಣ್ಣುವಂಡ ಕಿಶೋರ್ ನಾಚಪ್ಪ, ಖಜಾಂಜಿಯಾಗಿ ಡಿ.ಪಿ.ರಾಜೇಶ್, ನಿರ್ದೇಶಕರುಗಳಾಗಿ ಅಜಿತ್ ಕರುಂಬಯ್ಯ, ವಿ.ವಿ.ಅರುಣ್ ಕುಮಾರ್, ಎ.ಎಸ್.ಮುಸ್ತಫಾ, ಜಗ ದೀಶ್, ವಿ.ಎನ್.ರಂಜಿತಾ ಕಾರ್ಯಪ್ಪ, ಎನ್.ಎನ್.ದಿನೇಶ್ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯಲ್ಲಿ 11 ಸ್ಥಾನ ಗಳಿಗೆ 21 ನಾಮಪತ್ರ ಸಲ್ಲಿಕೆಯಾಗಿದ್ದವು. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು, ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದರು. ಕ್ರಮಬದ್ದ ವಾಗಿಲ್ಲದ ಕಾರಣ ಒಂದು ನಾಮಪತ್ರ ತಿರ ಸ್ಕರಿಸಲಾಯಿತು. ಉಳಿದವರು ನಾಮಪತ್ರ ಹಿಂಪಡೆದ ಕಾರಣ ಅವಿರೋಧವಾಗಿ ಆಯ್ಕೆ ನಡೆಯಿತು. ಇದರಿಂದಾಗಿ ಆಗಸ್ಟ್ 5 ರಂದು ನಡೆಯಬೇಕಾಗಿದ್ದ ಮತದಾ ನಕ್ಕೂ ಮುನ್ನ ಆಯ್ಕೆ ನಡೆದಂತಾಯಿತು.

ಚುನಾವಣಾಧಿಕಾರಿಯಾಗಿ ಬಿ.ಇ. ಕಿರಣ್, ಸಹಾಯಕ ಚುನಾವಣಾಧಿಕಾರಿ ಯಾಗಿ ಸತೀಶ್ ಸಿಂಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ತಾಲೂಕು ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಜಿಲ್ಲಾ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ನಿರ್ದೇಶಕ ಹೆಚ್.ಕೆ. ಜಗ ದೀಶ್, ಸದಸ್ಯ ಮುಬಾರಕ್ ಉಪಸ್ಥಿತರಿದ್ದರು.

Translate »