ಮಿಶ್ರ ಬೆಳೆ ಬೆಳೆದಾಗ ಮಾತ್ರ ಅರ್ಥಿಕ ಸ್ಥಿತಿ ಸುಧಾರಣೆ ಸಾಧ್ಯ: ಶಾಸಕ ಅಪ್ಪಚ್ಚು ರಂಜನ್ ಅಭಿಮತ
ಕೊಡಗು

ಮಿಶ್ರ ಬೆಳೆ ಬೆಳೆದಾಗ ಮಾತ್ರ ಅರ್ಥಿಕ ಸ್ಥಿತಿ ಸುಧಾರಣೆ ಸಾಧ್ಯ: ಶಾಸಕ ಅಪ್ಪಚ್ಚು ರಂಜನ್ ಅಭಿಮತ

July 23, 2018

ಸೋಮವಾರಪೇಟೆ: ಬೆಳೆ ಗಾರರು ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಾಗ ಮಾತ್ರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿ ಪ್ರಾಯಿಸಿದರು.

ಕೃಷಿ ಇಲಾಖೆಯ ವತಿಯಿಂದ ಇಲಾಖೆ ಗಳ ನಡಿಗೆ ರೈತರ ಮನೆ ಬಾಗಿಲಿಗೆ ಯೋಜನೆಯಡಿಯಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದೇಶಗಳಲ್ಲಿ ರೈತರು ಬೆಳೆ ಬೆಳೆಯಲು ನಿಬಂಧನೆಗಳಿವೆ, ಯಾರು ಯಾವ ಬೆಳೆಯುತ್ತೇವೆ ಎಂದು ಮೂರು ವರ್ಷದ ಮೊದಲೇ ಘೋಷಣೆ ಮಾಡುತ್ತಾರೆ. ಆದರೆ ನಮ್ಮ ರಾಷ್ಟ್ರದಲ್ಲಿ ಇಂತಹ ನಿಬಂಧನೆಗಳಿಲ್ಲದೆ ಇರುವುದರಿಂದ ಹೆಚ್ಚಿನವರು ಒಂದೇ ಬೆಳೆಯನ್ನು ಬೆಳೆಯುತ್ತಾರೆ. ಹೀಗಾ ದಾಗ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿಯುತ್ತದೆ. ಈ ಬಗ್ಗೆ ಬೆಳೆಗಾರರು ಚಿಂತನೆ ನಡೆಸಬೇಕಾಗಿದೆ ಎಂದರು.

ಪ್ರತಿಯೊಬ್ಬ ಬೆಳೆಗಾರರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆಗೊಳ ಪಡಿಸಿ, ಭೂಮಿಗೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನೇ ಗೊಬ್ಬರದ ಮೂಲಕ ನೀಡಿದಾಗ ನಿರೀಕ್ಷಿತ ಪ್ರಮಾಣದ ಬೆಳೆ ಯನ್ನು ಬೆಳೆದು, ಆರ್ಥಿಕವಾಗಿ ಸದೃಢ ರಾಗಲು ಸಾಧ್ಯ ಎಂದರು.

ರಾಜ್ಯದಲ್ಲಿ ಸುಮಾರು ಶೇ.70ರಷ್ಟು ರೈತಾ ಪಿವರ್ಗವಿದ್ದರೆ, ಶೇ. 80ರಷ್ಟು ಮಂದಿ ಕೃಷಿ ಅವಲಂಭಿತರಿದ್ದಾರೆ. ಇಲ್ಲಿ ಕೃಷಿಕರ ಬದುಕು ಮೂರಾಬಟ್ಟೆಯಾಗಿದೆ. ತಾಲೂಕಿ ನಾದ್ಯಂತ ಸುರಿದ ಭಾರೀ ಮಳೆ-ಗಾಳಿಗೆ ಸುಮಾರು 183 ಮನೆಗಳಿಗೆ ಹಾನಿ ಯಾಗಿದೆ. ಕೃಷಿ ಭೂಮಿಗಳಿಗೆ ಹಾನಿ ಯಾಗಿದೆ. ಇದನ್ನೆಲ್ಲಾ ರಾಜ್ಯ ಸರಕಾರ ಪರಿಗಣಿಸಿ ಇಡೀ ಜಿಲ್ಲೆಗೆ ಒಂದು ಸಾವಿರ ಕೋಟಿ ರೂ.ಗಳ ಅನುಧಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗು ವುದು ಎಂದರು.

ಅಭಿಯಾನದ ಅಂಗವಾಗಿ ಆಯೋಜಿ ಸಿದ್ದ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾ ಟಿಸಿದ ತಾಲೂಕು ಪಂಚಾಯಿತಿ ಉಪಾ ಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಜಿಲ್ಲೆಯ ರೈತಾಪಿ ವರ್ಗ ತತ್ತರಿಸಿ ಹೋಗಿದ್ದಾರೆ. ಆದರೆ ಇದನ್ನೆಲ್ಲಾ ನಿರ್ಲಕ್ಷಿಸುತ್ತಿರುವ ರಾಜ್ಯ ಸರಕಾರ ಬಾಗಿನ ಅರ್ಪಣೆ, ಜಲ ಪಾತಗಳ ವೀಕ್ಷಣೆ, ತಮಿಳುನಾಡಿಗೆ ನೀರು ಬಿಡುವ ಸಮಸ್ಯೆಗಳೇ ಇಲ್ಲದೆ ಸಂತಸದಲ್ಲಿ ಮುಳುಗಿದೆ. ಕಾವೇರಿ ನದಿ ಉಗಮ ಸ್ಥಾನದ ಮೂಲ ಜನರ ಬವಣೆಯನ್ನು ಅರ್ಥೈಸಿಕೊಳ್ಳದೆ ಇರುವುದು ಜಿಲ್ಲೆಯ ಜನರ ದುರಂತವಾಗಿದೆ. ಕೂಡಲೇ ರಾಜ್ಯ ವನ್ನು ಸಮೃದ್ಧವಾಗಿಸಿದ ಹಾಗೂ ತಮಿಳು ನಾಡಿಗೆ ನೀರು ಬಿಡುವ ಸಮಸ್ಯೆಯನ್ನು ನೀಗಿಸಿಕೊಟ್ಟ ಕೊಡಗು ಜಿಲ್ಲೆಗೆ ಪರಿಹಾರ ರೂಪದಲ್ಲಿ 1 ಸಾವಿರ ಕೋಟಿ ರೂ. ಬಿಡು ಗಡೆ ಮಾಡಿ ಋಣ ಮುಗಿಸಲಿ ಎಂದರು.

ಸಹಾಯಕ ಕೃಷಿ ನಿರ್ದೇಶಕ ಡಾ. ಎಚ್.ಎಸ್. ರಾಜಶೇಖರ್, ಇಲಾಖೆಯ ತಾಂತ್ರಿಕ ಅಧಿಕಾರಿ ಡಾ. ಎಸ್. ಮುಕುಂದ, ಕಾಫಿ ಮಂಡಳಿಯ ಹಿರಿಯ ಸಂಪ ರ್ಕಾಧಿಕಾರಿ ಮುರುಳೀಧರ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಪ್ರಭಾಕರ್, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ವೆಂಕಟರಮಣಪ್ಪ, ಕಾರ್ಪೋ ರೇಷನ್ ಬ್ಯಾಂಕ್ ವ್ಯವಸ್ಥಾಪಕ ಎಂ. ಶಿವ ಪ್ರಶಾಂತ್, ಕೃಷಿ ಅಧಿಕಾರಿ ನವ್ಯ ನಾಣಯ್ಯ ರವರುಗಳು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿ ಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯ ಲಕ್ಷ್ಮಿ ಸುರೇಶ್, ಕಾರ್ಯಕ್ರಮ ಉದ್ಘಾಟಿ ಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಕೃಷಿಕ ಸಮಾ ಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತ ನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರುಗಳಾದ ತಂಗಮ್ಮ, ಸವಿತಾ ಈರಪ್ಪ, ಸಬಿತಾ ಚೆನ್ನಕೇಶವ, ಹಾಸನ-ಕೊಡಗು ಜಿಲ್ಲಾ ಸಾವಯವ ಕೃಷಿಕರ ಒಕ್ಕೂಟದ ಉಪಾಧ್ಯಕ್ಷ ಎಂ.ಕೆ. ಮುತ್ತಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಗೀತಾ, ಗ್ರಾಪಂ ಅಧ್ಯಕ್ಷರುಗಳಾದ ತಿಮ್ಮಯ್ಯ, ರೇಣುಕಾ ವೆಂಕಟೇಶ್ ಇದ್ದರು.

Translate »