ಕುಂದು ಕೊರತೆ ನಿವಾರಣಾ ಸಭೆ
ಕೊಡಗು

ಕುಂದು ಕೊರತೆ ನಿವಾರಣಾ ಸಭೆ

July 23, 2018

ಮಡಿಕೇರಿ:  ನವದೆಹಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ವತಿಯಿಂದ ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯ ಕ್ಕೊಳಗಾದ ಬಗ್ಗೆ ದೂರುಗಳ ಕುರಿತು ಜುಲೈ 26 ಮತ್ತು 27 ರಂದು ಬೆಂಗಳೂರಿನಲ್ಲಿ ಕುಂದು ಕೊರತೆ ನಿವಾರಣೆ ಸಭೆ ನಡೆಯಲಿದೆ.

ಆ ದಿಸೆಯಲ್ಲಿ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ತಮ್ಮ ದೂರುಗಳನ್ನು ಸಲ್ಲಿಸಲು ಜೂ.30 ರವರೆಗೆ ಅವಕಾಶ ನೀಡಿದೆ. ದೂರನ್ನು ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಮಾನವ ಅಧಿಕಾರ ಭವನ, ಸಿ-ಬ್ಲಾಕ್, ಜಿಪಿಒ ಕಾಂಪ್ಲೆಕ್ಸ್, ಐಎನ್‍ಎ, ನವದೆಹಲಿ ಇಲ್ಲಿಗೆ ಪತ್ರದ ಮೂಲಕ ಅಥವಾ ಇ-ಮೇಲ್ ರಿಡಿಟಚಿತಿಟಿhಡಿಛಿ@ಟಿiಛಿ.iಟಿ ಅಥವಾ ಪ್ಯಾಕ್ಸ್ ಸಂಖ್ಯೆ 011-24651334 ಮೂಲಕ ಕಳುಹಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ ಅವರು ತಿಳಿಸಿದ್ದಾರೆ.

Translate »