ಕೊಡಗಿನ ಮಳೆ ಹಾನಿ ಪರಿಹಾರಕ್ಕಾಗಿ ಸಾವಿರ ಕೋಟಿ ರೂ. ಅನುದಾನಕ್ಕೆ ಶಾಸಕ ಅಪ್ಪಚ್ಚು ರಂಜನ್ ಆಗ್ರಹ
ಕೊಡಗು

ಕೊಡಗಿನ ಮಳೆ ಹಾನಿ ಪರಿಹಾರಕ್ಕಾಗಿ ಸಾವಿರ ಕೋಟಿ ರೂ. ಅನುದಾನಕ್ಕೆ ಶಾಸಕ ಅಪ್ಪಚ್ಚು ರಂಜನ್ ಆಗ್ರಹ

July 18, 2018

ಸೋಮವಾರಪೇಟೆ: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಕ್ಕೆ ಒತ್ತಿಕೊಂಡಂತಿರುವ ಮೂವತ್ತೊಕ್ಲು, ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಶಿರಂಗಳ್ಳಿ, ಕಿಕ್ಕರಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಕೂತಿ, ತೋಳೂರು ಶೆಟ್ಟಳ್ಳಿ ಭಾಗದಲ್ಲಿ ಮಳೆಯಿಂದ ಹಾನಿ ಗೀಡಾಗಿರುವ ಪ್ರದೇಶಕ್ಕೆ ಮಂಗಳವಾರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತೆರಳಿ ಪರಿಶೀಲನೆ ನಡೆಸಿದರು.

ಕೊಡಗಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಭೀಕರವಾಗಿದ್ದು, ಪರಿಹಾರ ಕಾರ್ಯ ಕೈಗೊ ಳ್ಳಲು ಏನಿಲ್ಲವೆಂದರೂ 1 ಸಾವಿರ ಕೋಟಿ ಬೇಕಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೊಡಗಿಗೆ 1 ಸಾವಿರ ಕೋಟಿ ವಿಶೇಷ ಅನುದಾನ ಒದಗಿಸಬೇಕು ಎಂದು ರಂಜನ್ ಒತ್ತಾಯಿಸಿದರು.

ಶಾಸಕರು ಮೂವತ್ತೊಕ್ಲು ಗ್ರಾಮಕ್ಕೆ ತೆರಳಿದ ಸಂದರ್ಭ ಗ್ರಾಮಸ್ಥರಾದ ಕಾರ್ಯಪ್ಪ, ಧನು, ಗಣೇಶ್, ಬಿದ್ದಪ್ಪ, ಉತ್ತಪ್ಪ, ಪೊನ್ನಪ್ಪ, ಪ್ರತು ಸೇರಿದಂತೆ ಇತರರು ಸಂಕಷ್ಟದ ಸನ್ನಿವೇಶದ ಬಗ್ಗೆ ಮಾಹಿತಿ ಒದಗಿಸಿದರು. ಎಂ.ಡಿ. ಕಾರ್ಯಪ್ಪ ಅವರ ಮನೆಯ ಛಾವಣಿ ಭಾರೀ ಗಾಳಿಗೆ ಹಾರಿ ಹೋಗಿದ್ದು, ಸಂಗೀತ ಮತ್ತು ಗಂಗೆ ಅವರುಗಳ ಮನೆ ಬರೆಕುಸಿತ ದಿಂದ ಅಪಾಯಕಾರಿ ಸ್ಥಿತಿಗೆ ತಲುಪಿರು ವುದನ್ನು ರಂಜನ್ ಪರಿಶೀಲಿಸಿದರು.

ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿ ಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಗಂಗೆ ಅವರ ಮನೆಯ ಕೆಳಭಾಗದಲ್ಲಿ ರೂ. 1.50 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಬೇಕು. ಪ್ರತಿ ಮನೆಗಳಿಗೂ ಪೈಪ್ ನೀಡಿ ಮನೆಯ ನೀರನ್ನು ಚರಂಡಿಗೆ ಹರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಅವರಿಗೆ ಸೂಚಿಸಿದರು.

ಶಿರಂಗಳ್ಳಿ-ಗರ್ವಾಲೆ-ಸೂರ್ಲಬ್ಬಿ-ಶಾಂತಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಬರೆ ಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೊಡ ಕಾಗಿದೆ. ಇದರೊಂದಿಗೆ ಬರೆಕುಸಿತದಿಂದ ಹೊಳೆಗೆ ಮಣ್ಣು ತುಂಬಿದ್ದು, ತಕ್ಷಣ ಜೆಸಿಬಿ ಯಂತ್ರದಿಂದ ರಸ್ತೆಯ ಮೇಲಿ ರುವ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಅಭಿಯಂತರ ಪೀಟರ್ ಅವರಿಗೆ ನಿರ್ದೇ ಶನ ನೀಡಿದರು.

ಈ ಭಾಗದ ಸಂಕಷ್ಟದ ಪರಿಸ್ಥಿತಿಯನ್ನು ಗರ್ವಾಲೆ ಗ್ರಾಪಂ ಅಧ್ಯಕ್ಷ ಸುಭಾಷ್, ಉಪಾಧ್ಯಕ್ಷ ಪಳಂಗಪ್ಪ, ಸ್ಥಳೀಯರಾದ ಮಾಚಯ್ಯ, ಅಪ್ಪಾಜಿ, ಈರಪ್ಪ, ಅಯ್ಯಪ್ಪ, ಕಾರ್ಯಪ್ಪ ಅವರುಗಳು ಶಾಸಕರ ಗಮ ನಕ್ಕೆ ತಂದರು. ಹಾನಿ ಪ್ರಕರಣಗಳ ಸಮಗ್ರ ವರದಿಯನ್ನು ತಕ್ಷಣ ನೀಡುವಂತೆ ಕಂದಾಯ ಇಲಾಖಾಧಿಕಾರಿ ಉಮೇಶ್ ಅವರಿಗೆ ಸೂಚಿ ಸಿದರು. ಸೂರ್ಲಬ್ಬಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸ ಕರು, ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿ ದರು. ಇಲ್ಲಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದರು. ಈ ಬಗ್ಗೆ ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ತಾಲೂಕು ಪಂಚಾ ಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು, ವೈದ್ಯರ ನಿಯೋಜನೆಗೆ ಕ್ರಮ ವಹಿಸಲಾಗುವದು ಎಂದರು.

ತೋಳೂರುಶೆಟ್ಟಳ್ಳಿಯಲ್ಲಿ ಶಾರದ ಅವರ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲಾಗು ವುದು. ಇದರೊಂದಿಗೆ ಸರ್ಕಾರದ ಆಶ್ರಯ ಯೋಜನೆಯಡಿಯಲ್ಲೂ ನೂತನ ಮನೆ ನಿರ್ಮಿಸಿಕೊಡಲಾಗುವದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

Translate »