ಕಣ್ಣೀರು ಹಾಕಿದ ಹೆಚ್‍ಡಿಕೆಗೆ ವುಡ್ವಡ್ರ್ಸ್, ಫೀಡಿಂಗ್ ಬಾಟಲ್, ನಿಪ್ಪಲ್ ರವಾನೆ
ಮಂಡ್ಯ

ಕಣ್ಣೀರು ಹಾಕಿದ ಹೆಚ್‍ಡಿಕೆಗೆ ವುಡ್ವಡ್ರ್ಸ್, ಫೀಡಿಂಗ್ ಬಾಟಲ್, ನಿಪ್ಪಲ್ ರವಾನೆ

July 18, 2018
  • ಅಳಬೇಡಿ, ವುಡ್ವಡ್ರ್ಸ್ ಕುಡಿದು ಅಳು ನಿಲ್ಲಿಸಿ: ಹೆಚ್‍ಡಿಕೆಗೆ ಬಿಜೆಪಿ ಕಾರ್ಯಕರ್ತರ ಲೇವಡಿ

ಮಂಡ್ಯ:  ಜೆಡಿಎಸ್ ಕಾರ್ಯ ಕರ್ತರ ಸಭೆಯಲ್ಲಿ ನಾನು ಸಂತೋಷ ವಾಗಿಲ್ಲ ಎಂದು ಕಣ್ಣೀರು ಹಾಕಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ಕಾರ್ಯಕರ್ತರು ವುಡ್ವಡ್ರ್ಸ್ ಫೀಡಿಂಗ್ ಬಾಟಲ್ ಹಾಗೂ ನಿಪ್ಪಲ್ ರವಾನಿಸುವ ಮೂಲಕ ವುಡ್ವಡ್ರ್ಸ್ ಕುಡಿದು ಅಳುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.

ಮಂಗಳವಾರ ಬೆಳಿಗ್ಗೆ ನಗರದ ಅಂಚೆ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯವನ್ನು ಆಳ್ವಿಕೆ ಮಾಡಲು ಅರ್ಹರಲ್ಲ. ಕೂಡಲೇ ರಾಜೀ ನಾಮೆ ನೀಡಿ, ಫೀಡಿಂಗ್ ಬಾಟಲ್‍ನ ನಿಪ್ಪಲ್ನಲ್ಲಿ ಹಾಲು ಕುಡಿಯಿರಿ, ವುಡ್ವಡ್ರ್ಸ್ ಕುಡಿದು ಅಳುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.

ಬಿಜೆಪಿ ನರೇಂದ್ರ ಮೋದಿ ವಿಚಾರ ಮಂಚ್‍ನ ರಾಜ್ಯ ಕಾರ್ಯದರ್ಶಿ ಸಿ.ಟಿ. ಮಂಜುನಾಥ್ ಮಾತನಾಡಿ, ಚುನಾವಣಾ ಪ್ರಚಾರದ ವೇಳೆ ಈ ಬಾರಿ ಗೆಲ್ಲಿಸಿ, ಇಲ್ಲ ದಿದ್ದರೆ ನಾನು ಜೀವಂತವಾಗಿ ಉಳಿಯಲ್ಲ ಎಂದು ಮತದಾರರ ಎದುರು ಕಣ್ಣೀರು ಸುರಿಸಿದರು.

ಚುನಾವಣೆಯಲ್ಲಿ ಕೇವಲ 38 ಸ್ಥಾನ ಪಡೆದರೂ ಮುಖ್ಯಮಂತ್ರಿ ಗಾದಿಗೆ ಏರಿದ ಬಳಿಕ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾರದೇ ನಾನು ವಿಷಕಂಠ. ನನ್ನದು ಮುಳ್ಳಿನ ಹಾಸಿಗೆ ಎಂದು ಹೇಳುವ ಮೂಲಕ ತಾನೊಬ್ಬ ಅಸಮರ್ಥ ಮುಖ್ಯಮಂತ್ರಿ ಎಂಬುದನ್ನು ಹೇಳಿಕೊಂಡಿ ದ್ದಾರೆ ಎಂದು ಟೀಕಿಸಿದರು.

ರಾಜ್ಯದ ಜನತೆಗೆ ಕುಡಿಯಲು, ಕೃಷಿ ಚಟುವಟಿಕೆ, ಮಹಿಳೆಯರಿಗೆ ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ನೀರು ಬೇಕೇ ಹೊರತು ಕುಮಾರಸ್ವಾಮಿ ಹಾಗೂ ದೇವೇಗೌಡರ ಕಣ್ಣೀರಲ್ಲ. ಇನ್ನಾದರೂ ಕಣ್ಣೀರು ಹಾಕುವುದನ್ನು ಬಿಟ್ಟು ರಾಜ್ಯದ ರೈತರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು. ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ನೀಡಿದ್ದ ರೈತರ ಸಂಪೂರ್ಣ ಸಾಲಮನ್ನಾ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ, ಗರ್ಭೀಣಿ ಮಹಿಳೆಯರಿಗೆ, ವೃದ್ಧರಿಗೆ 6 ಸಾವಿರ ರೂ. ಮಾಸಾಶನ ಸೇರಿದಂತೆ ಇನ್ನಿತರ ಭರವಸೆಗಳನ್ನು ಈಡೇರಿಸಲು ಮುಂದಾಗಲಿ ಎಂದು ಆಗ್ರಹಿಸಿದರು.

ರಾಜ್ಯದ ಮುಖ್ಯಮಂತ್ರಿಯಾಗಿ ಹೇಡಿಯಂತೆ ಅಳುವುದು ಶೋಭೆ ತರುವುದಿಲ್ಲ. ತಮ್ಮ ಹುದ್ದೆ, ಘನತೆಗೆ ತಕ್ಕಂತೆ ನಡೆದು ಕೊಳ್ಳಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಲಿ ಎಂದು ಒತ್ತಾಯಿಸಿದರು. ಈ ಸಂದರ್ಭ ಮುಖಂಡರಾದ ಮಾದರಾಜ ಅರಸ್, ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ವರದರಾಜು ಸೇರಿದಂತೆ ಇತರರಿದ್ದರು.

Translate »