ಸೆಲ್ಫಿ ತೆಗೆಯಲು ಹೋಗಿ ಯುವಕ ನೀರು ಪಾಲು
ಮಂಡ್ಯ

ಸೆಲ್ಫಿ ತೆಗೆಯಲು ಹೋಗಿ ಯುವಕ ನೀರು ಪಾಲು

July 18, 2018

ಕೆ.ಆರ್.ಪೇಟೆ: ಸೆಲ್ಫಿ ತೆಗೆದು ಕೊಳ್ಳಲು ಹೋಗಿ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ತಾಲೂಕಿನ ಹರಿ ಹರಪುರ-ಅಕ್ಕಿಹೆಬ್ಬಾಳು ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಮಂಗಳವಾರ ಸಂಜೆ ನಡೆದಿದೆ.

ತಾಲೂಕಿನ ಹರಿಹರಪುರ ಗ್ರಾಮದ ಗಣೇಶ್ ಎಂಬುವರ ಪುತ್ರ ಶಿವಕುಮಾರ್ (28) ನೀರು ಪಾಲಾದ ಯುವಕ.

ಘಟನೆ ವಿವರ: ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ ಸುಮಾರು 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಉಕ್ಕಿ ಹರಿಯುತ್ತಿರುವ ನದಿಯ ಪ್ರವಾಹ ನೋಡಲು ತೆರಳಿದ್ದ ಶಿವಕುಮಾರ್ ಸೇತುವೆ ಮೇಲೆ ನಿಂತು ತನ್ನ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಯತಪ್ಪಿ ಬಿದ್ದು, ಹೇಮಾವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಠಾಣೆ ಅಧಿ ಕಾರಿಗಳ ತಂಡ ಕೊಚ್ಚಿ ಹೋಗಿರುವ ಯುವಕನ ಶವಕ್ಕಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದೆ.

ಸ್ಥಳದಲ್ಲಿ ತಹಶೀಲ್ದಾರ್ ಶಿವಮೂರ್ತಿ, ರಾಜಸ್ವ ನಿರೀಕ್ಷಕಿ ಚಂದ್ರ ಕಲಾ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‍ಐ ಗಿರೀಶ್ ಮತ್ತಿತರರು ಮೊಕ್ಕಾಂ ಹೂಡಿದ್ದು, ಮೃತ ಯುವಕನ ಶವ ಪತ್ತೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »