ಮಠ ಗ್ರಾಮದಲ್ಲಿ ಹಾಡ ಹಗಲೇ ಹಸುವಿನ ಮೇಲೆ ಹುಲಿ ದಾಳಿ
ಕೊಡಗು

ಮಠ ಗ್ರಾಮದಲ್ಲಿ ಹಾಡ ಹಗಲೇ ಹಸುವಿನ ಮೇಲೆ ಹುಲಿ ದಾಳಿ

July 18, 2018

ಸಿದ್ದಾಪುರ: ಹಾಡಹಗಲೇ ಹುಲಿ ದಾಳಿಗೆ ಹಸುವೊಂದು ಗಂಭೀರವಾಗಿ ಗಾಯಗೊಂಡು ಪ್ರಾಣಪಾಯದಿಂದ ಪಾರಾದ ಘಟನೆ ಮಠ ಗ್ರಾಮದಲ್ಲಿ ನಡೆದಿದೆ.

ಮಾಲ್ದಾರೆ ಗ್ರಾಪಂ ವ್ಯಾಪ್ತಿಯಲ್ಲಿ ದಿನ ನಿತ್ಯ ಕಾಣಿಕೊಳ್ಳುವ ಹುಲಿ ಹಾವಳಿಯಿಂದ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಭಯ ಭೀತರಾಗಿದ್ದಾರೆ. ಕಳೆದ 3 ತಿಂಗಳಲ್ಲಿ ಹುಲಿಯ ಆಟ್ಟಹಾಸಕ್ಕೆ ಹಲವಾರು ಜಾನುವಾರುಗಳು ಬಲಿಯಾಗಿವೆ. ಮಾಲ್ದಾರೆ ಗ್ರಾಪಂ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಚಂದ್ರ ಎಂಬುವವರಿಗೆ ಸೇರಿದ ಹಸುವೊಂದು ಮಂಗಳವಾರ ಅವರ ಗದ್ದೆಯಲ್ಲಿ ಮೇಯುತಿದ್ದ ಸಂದರ್ಭ ಏಕಾಏಕಿ ದಾಳಿ ಮಾಡಿದ ಹುಲಿಯು, ಹಸುವಿನ ಕತ್ತು ಮತ್ತು ಸೊಂಟದ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಹಸುವಿನ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ತೆರಳುತ್ತಿದ್ದಂತೆ ಹುಲಿಯು ಸ್ಥಳದಿಂದ ಪರಾರಿಯಾಗಿದೆ.

ಪಶು ವೈದ್ಯ ತಮ್ಮಯ್ಯ ಸ್ಥಳಕ್ಕೆ ತೆರಳಿ ಗಾಯಗೊಂಡ ಹಸುವಿಗೆ ಚಿಕ್ಸಿತೆ ನೀಡಿದ್ದಾರೆ. ಹುಲಿ ಭೀತಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ರೈತರ ಜಾನುವಾರುಗಳು ನಿರಂತರ ಹುಲಿ ದಾಳಿಗೆ ಬಲಿಯಾಗುತ್ತಿವೆ ಕೊಡಲೆ ಕಾಡು ಪ್ರಾಣಿಗಳು ಗ್ರಾಮಕ್ಕೆ ಬಾರದಂತೆ ಕ್ರಮ ಕೈಗೊಳ್ಳ ಬೇಕೆಂದು ಅರಣ್ಯಾಧಿಕಾರಿ ಬಳಿ ಗ್ರಾಮಸ್ಥರು ಮನವಿ ಮಾಡಿದರು.
ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಶಿವಶಂಕರ್, ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರ ಣ್ಯಾಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಗ್ರಾಮದ ಸ್ವರ್ಣಲತಾ, ರಾಧ, ಲೀಲಾ, ಸಂಧ್ಯಾ, ದೀವ್ಯ, ಹರೀದಾಸ್, ಶೀವದಾಸ್, ಸುರೇಶ್, ವಿನೋದ್, ಸಂತೋಷ್, ವಿಜಯನ್, ಪ್ರಶಾಂತ್ ಪ್ರವೀಣ್, ಬಾಬು ಸೇರಿದಂತೆ ಮತ್ತಿತರು ಇದ್ದರು.

Translate »