ಜನಸಂಖ್ಯೆ ಪ್ರಮಾಣ ನಿಯಂತ್ರಿಸದಿದ್ದಲ್ಲಿ ಸಮಸ್ಯೆ ಹೆಚ್ಚಳ
ಚಾಮರಾಜನಗರ

ಜನಸಂಖ್ಯೆ ಪ್ರಮಾಣ ನಿಯಂತ್ರಿಸದಿದ್ದಲ್ಲಿ ಸಮಸ್ಯೆ ಹೆಚ್ಚಳ

July 18, 2018

ಚಾಮರಾಜನಗರ: ಮಿತಿ ಮೀರಿದ ಪ್ರಮಾಣದಲ್ಲಿ ಏರುತ್ತಿರುವ ಜನಸಂಖ್ಯೆ ಪ್ರಮಾಣವನ್ನು ನಿಯಂತ್ರಣ ಮಾಡದಿದ್ದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಠಿ ಯಾಗಲಿದೆ ಎಂದು ಸಂಸದ ಆರ್. ಧ್ರುವ ನಾರಾಯಣ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಂದು ಹಮ್ಮಿ ಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಳ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಭಾರತ ನಂತರದ ಸ್ಥಾನದಲ್ಲಿದೆ. ಚೀನಾ ಹಾಗೂ ಭಾರತದ ನಡುವೆ ಜನಸಂಖ್ಯೆ ಪ್ರಮಾಣದಲ್ಲಿ ಭಾರಿ ಅಂತರವೇನಿಲ್ಲ. ಭಾರತದಲ್ಲಿ ಪ್ರಸ್ತುತ ಜನಸಂಖ್ಯೆ ಏರಿಕೆ ಪ್ರಮಾಣವನ್ನು ಗಮನಿಸಿದಾಗ 2024ರ ವೇಳೆಗೆ ಚೀನಾ ವನ್ನು ಜನಸಂಖ್ಯೆಯಲ್ಲಿ ಹಿಂದಿಕ್ಕುವ ಸಾಧ್ಯತೆ ಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.

ಜನಸಂಖ್ಯೆ ಪ್ರಮಾಣ ಏರಿಕೆ ತಡೆಯಲು ಆರೋಗ್ಯ ಪೂರಕ ತಿಳುವಳಿಕೆ ನೀಡಬೇ ಕಿದೆ. ಜನಸಂಖ್ಯಾ ಸ್ಪೋಟದಿಂದ ಆಗುವ ಅಪಾಯಗಳ ಕುರಿತು ಮನವರಿಕೆ ಮಾಡಿ ಕೊಡಬೇಕಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ ಎಂದು ಧ್ರುವನಾರಾಯಣ ತಿಳಿಸಿದರು.

ಜಿಲ್ಲೆಯಲ್ಲಿ ತಾಯಿ-ಶಿಶುವಿನ ಮರಣ ಪ್ರಮಾಣ ಗಣನೀಯವಾಗಿ ತಗ್ಗಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ತಾಯಿ ಮಗುವಿನ ಆರೋಗ್ಯ ಕಾಳಜಿಗೆ ವಿಶೇಷ ಒತ್ತು ನೀಡಲಾಗಿದೆ. ಆಶಾ ಕಾರ್ಯ ಕರ್ತೆಯರು ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ಧ್ರುವನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ಜನಸಂಖ್ಯೆ ಹೆಚ್ಚಳ ವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಯನ್ನಾಗಿ ಪರಿವರ್ತಿಸಿದರೆ ಪ್ರಗತಿಯನ್ನು ಗಣನೀಯವಾಗಿ ಕಾಣಬಹುದು. ಜನರ ಮಾನಸಿಕ ಪರಿವರ್ತನೆಯಾದರೆ ಜನ ಸಂಖ್ಯೆ ಏರಿಕೆಗೆ ಕಡಿವಾಣ ಹಾಕಬಹುದು. ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವಿಶ್ವಜನಸಂಖ್ಯಾ ದಿನ ಆಚರಣೆಯ ಕುರಿತು ಮುಖ್ಯ ಉಪನ್ಯಾಸ ನೀಡಿದ ಉಪನ್ಯಾಸಕ ಎಸ್.ರಾಮಕೃಷ್ಣ ವಿಶ್ವದಲ್ಲಿ 763 ಕೋಟಿ ಜನಸಂಖ್ಯೆ ಇದೆ. ಭಾರತದ ಜನಸಂಖ್ಯೆ 136 ಕೋಟಿ ಆಗಿದೆ. ಜನ ಸಂಖ್ಯೆ ಪ್ರಮಾಣ ವಿಶ್ವದಲ್ಲಿ ನಿಯಂತ್ರಣವಾಗದಿದ್ದರೆ ಜೈವಿಕ ಅಸಮಾನತೆ ಉಂಟಾ ಗಲಿದೆ. ಭೂಮಿಯ ಮೇಲೆ ಒತ್ತಡ ಹೆಚ್ಚಾ ಗಲಿದೆ. ಭವಿಷ್ಯದ ದಿನಗಳಲ್ಲಿ ಜಲಕ್ಷಾಮ ಆಮ್ಲಜನಕ ಕೊರತೆಯಿಂದ ಜನರು ಬಳ ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಜನಸಂಖ್ಯೆ ಪ್ರಮಾಣ ನಿಯಂತ್ರಣ ದಲ್ಲಿರಬೇಕು. ಎಲ್ಲರೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಉತ್ತಮ ಬಾಳ್ವೆ ನಡೆಸಲು ಸೌಲಭ್ಯಗಳು ಸಮಾನವಾಗಿ ಹಂಚಿಕೆಯಾಗಬೇಕು. ಜನಸಂಖ್ಯೆ ಪ್ರಮಾಣ ಸಮತೋಲನದಲ್ಲಿ ಇದ್ದಾಗ ಎಲ್ಲ ಸಮಸ್ಯೆ ಗಳಿಗೆ ಪರಿಹಾರ ಸಿಗಲಿದೆ ಎಂದರು.

ಇದೇವೇಳೆ ಉತ್ತಮ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರನ್ನು ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಪಂ ಅಧ್ಯಕ್ಷರಾದ ಶಿವಮ್ಮ ಕೃಷ್ಣ, ಉಪಾಧ್ಯಕ್ಷ ಜೆ.ಯೋಗೇಶ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಸದಾಶಿವ ಮೂರ್ತಿ, ಮಲೇರಿಯಾ ನಿಯಂತ್ರಣಾಧಿ ಕಾರಿ ಡಾ. ಅನಿಲ್ ಕುಮಾರ್, ಆರ್‍ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಾರಾ ಯಣಸ್ವಾಮಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಜನಸಂಖ್ಯಾ ನಿಯಂತ್ರಣ ಸಂಬಂಧ ಜಾಗೃತಿ ಜಾಥಾ ನಡೆಸಲಾಯಿತು.

Translate »