ಬೈಕ್‍ಗೆ ಇನ್ನೋವಾ ಡಿಕ್ಕಿ
ಕೊಡಗು

ಬೈಕ್‍ಗೆ ಇನ್ನೋವಾ ಡಿಕ್ಕಿ

July 17, 2018

ಮಡಿಕೇರಿ:  ಅತಿ ವೇಗದಿಂದ ಬಂದ ಇನ್ನೋವಾ ಕಾರೊಂದು ಬೈಕ್ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಘಟನೆ ನಗರದ ರೋಟರಿ ಹಾಲ್ ಬಳಿ ನಡೆದಿದೆ.

ಕಾರು ಚಾಲಕನ ಅಜಾಗರೂಕತೆ ಚಾಲನೆಯಿಂದ ಈ ಘಟನೆ ಸಂಭವಿಸಿದ್ದು, ಬೈಕ್ ಸವಾರ ಪವಾಡ ಸದೃಶ ರೀತಿಯಲ್ಲಿ ಯಾವುದೇ ಗಾಯಗಳಿಲ್ಲದೆ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯನ್ನು ಕಂಡ ಸ್ಥಳೀಯರು, ಕಾರಿನಲ್ಲಿದ್ದ ಯುವಕರು ಮ್ತತು ಕಾರು ಚಾಲಕನಿಗೆ ಧರ್ಮದೇಟು ನೀಡಿದ್ದಾರೆ

ಈ ದೃಶ್ಯಗಳು ರೋಟರಿ ಹಾಲ್ ಪಕ್ಕ ದಲ್ಲಿರುವ ಪೆಟ್ರೋಲ್ ಬಂಕ್‍ವೊಂದರ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯರ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ ಗೊಂಡಿದ್ದು, ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ.

Translate »