ಮಾಯಾಮುಡಿ ಬಳಿ ತೋಟದಲ್ಲಿ ಪುಂಡಾನೆ ಸೆರೆ
ಕೊಡಗು

ಮಾಯಾಮುಡಿ ಬಳಿ ತೋಟದಲ್ಲಿ ಪುಂಡಾನೆ ಸೆರೆ

July 14, 2018

ಗೋಣಿಕೊಪ್ಪಲು: ಇಲ್ಲಿನ ಮಾಯಾಮುಡಿ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಕೆಲವು ದಿನಗಳಿಂದ ಆತಂಕ ಮೂಡಿಸಿ ಸದಾ ಭಯದ ನೆರಳಿನಲ್ಲಿಯೇ ಬದುಕುವಂತೆ ಮಾಡಿದ್ದ ಪುಂಡಾನೆ ಯನ್ನು ಸೆರೆ ಹಿಡಿಯಲು ಮೂಲಕ ಅರಣ್ಯ ಇಲಾಖೆಯು ಜನರಲ್ಲಿನ ಆತಂಕವನ್ನು ಸದ್ಯದ ಮಟ್ಟಿಗೆ ದೂರಮಾಡಿದೆ.

ಇತ್ತೀಚೆಗೆ ಕಾಡಾನೆಗಳು ಮಾಯಾ ಮುಡಿ ಸಮೀಪದ ತೋಟಗಳಲ್ಲಿ ಬೀಡು ಬಿಟ್ಟು ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಭಯಪಡುವ ಸ್ಥಿತಿಯನ್ನು ನಿರ್ಮಾಣಮಾಡಿ, ರಸ್ತೆಗಳಲ್ಲಿ ಓಡಾಡಲೂ ಜನರು ಹೆದರುವಂತೆ ಮಾಡುವ ಮೂಲಕ ಭೀತಿ ಯನ್ನು ಉಂಟುಮಾಡಿತ್ತು.

ಕಾಡಿನಲ್ಲಿ ಒಂಟಿ ಸಲಗದಿಂದ ಏಟು ತಿಂದು ಗಾಯಗೊಂಡಿದ್ದ ಈ ಕಾಡಾ ನೆಯು ಅರಣ್ಯ ಬಿಟ್ಟು ಹಲವಾರು ತಿಂಗಳಿನಿಂದ ಕಾಫಿ ತೋಟದಲ್ಲಿಯೇ ಸಂಚಾರ ಮಾಡು ತ್ತಿತ್ತು. ದಿನ ದಿಂದ ದಿನಕ್ಕೆ ಆರೋಗ್ಯದಲ್ಲಿ ವ್ಯತ್ಯಾಸಗೊಂಡು ನಿತ್ರಾಣ ಗೊಂಡಿತ್ತು. ಈ ಆನೆ ಅರವಳಿಕೆ ತಜ್ಞರು ಅರವಳಕೆ ನೀಡುತ್ತಿದಂತೆಯೇ ತೋಟದಲ್ಲಿಯೇ ಸ್ಥಬ್ದವಾಗಿ ನಿಂತುಬಿಟ್ಟಿತ್ತು.

ತಕ್ಷಣ ಅರಣ್ಯ ಸಿಬ್ಬಂದಿಗಳು ಮತ್ತಿ ಗೋಡು ಆನೆ ಶಿಬಿರದಲ್ಲಿದ್ದ ಸಾಕಾನೆ ಗಳಾದ ಕೃಷ್ಣ ಹಾಗೂ ಅಭಿಮನ್ಯುವಿನ ಸಹಾಯದಿಂದ ಸೆರೆ ಹಿಡಿದು, ಸಂಕೇತ್ ಪೂವಯ್ಯನವರಿಗೆ ಮಾಹಿತಿ ಒದಗಿಸಿದರು. ಮಳೆಯನ್ನು ಲೆಕ್ಕಿಸದೆ ಅರಣ್ಯ ಸಿಬ್ಬಂಧಿಗಳು ಕಾಡಾನೆಯನ್ನು ಸೆರೆಹಿಡಿದ ಬಗ್ಗೆ ಸಂಕೇತ್ ಶ್ಲಾಘನೆ ವ್ಯಕ್ತಪಡಿಸಿದರು.

ಪ್ರೊಬೆಷನರಿ ಅರಣ್ಯಾಧಿಕಾರಿ ಶಿವ ಶಂಕರ್, ಪೊನ್ನಂಪೇಟೆ ಆರ್‍ಎಫ್‍ಓ ಗಂಗಾಧರ್, ತಿತಿಮತಿ ಆರ್‍ಎಫ್‍ಓ ಅಶೋಕ್, ಬಿಆರ್‍ಎಫ್‍ಐ ಗಣಪತಿ, ಡಾ.ಮುಜಿಬುರ್ ರೆಹಮಾನ್ ಹಾಗೂ ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.

Translate »