ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿತ
ಕೊಡಗು

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿತ

July 13, 2018

ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದಿಂದ, ರಾಜಾಸೀಟ್ ಬೆಟ್ಟದ ಕೆಳ ಭಾಗದ ಹೆದ್ದಾರಿಯಲ್ಲಿ ಭಾರೀ ಬಿರುಕು ಮೂಡಿದ್ದು, ಹೆದ್ದಾರಿ ಕುಸಿತಗೊಂಡಿದೆ.

ಮಳೆಯ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಹೆದ್ದಾರಿಯ ಪಕ್ಕದಲ್ಲಿ ಬರೆ ಕುಸಿತವಾಗಿ, ಹೆದ್ದಾರಿ ಸಂಚಾರ ದುಸ್ಥರ ಗೊಂಡಿದೆ. ಯಾವುದೇ ಕ್ಷಣದಲ್ಲೂ ರಸ್ತೆ ಕುಸಿಯುವ ಸಾಧ್ಯತೆಯಿದ್ದು, ಪ್ರಸ್ತುತ ಏಕಮುಖ ವಾಹನ ಸಂಚಾರ ವ್ಯವಸ್ಥೆ ರೂಪಿಸಲಾಗಿದೆ. ಶಿರಾಡಿಘಾಟ್‍ನಲ್ಲಿ ಭಾರೀ ವಾಹನಗಳ ಸಾಗಾಟಕ್ಕೆ ರಸ್ತೆ ನವೀಕರ ಣದಿಂದ ನಿರ್ಭಂದ ಹೇರಲಾಗಿದ್ದು, ಮಂಗಳೂರು-ಶಿರಾಡಿ ರಸ್ತೆಯಲ್ಲಿ ಸಂಚರಿಸು ತ್ತಿದ್ದ ಭಾರೀ ಸರಕು ತುಂಬಿದ ಲಾರಿಗಳು ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ.

ಅಧಿಕ ಭಾರ ಹೊತ್ತ ಲಾರಿಗಳ ಸಂಚಾರ ಮತ್ತು ಈ ಹಿಂದೆ ಕೇಬಲ್ ಅಳವಡಿಸಲು ತೋಡಲಾದ ಗುಂಡಿಯಿಂದ ಇದೀಗ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ಗೆ ಸಂಚಕಾರ ಬಂದೊದಗಿದೆ. ಹೆದ್ದಾರಿ ಕುಸಿದ ಸ್ಥಳದ ಒಂದು ಬದಿಯಲ್ಲಿ ಅಂದಾಜು 500 ಅಡಿಯ ಪ್ರಪಾತವಿದ್ದು, ಮುಂಜಾ ಗೃತ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದಾರೆ. 10 ಅಡಿ ಉದ್ದಕ್ಕೂ ರಸ್ತೆ ಬಿರುಕು ಬಿಟ್ಟಿದ್ದು, ಮಳೆಯ ನೀರು ಬಿರುಕಿಗೆ ಸೇರಿದರೆ ಇಡೀ ರಸ್ತೆಯೇ ಕುಸಿತವಾಗುವ ಸಾಧ್ಯತೆಯೂ ಇದೆ. ಈ ಹೆದ್ದಾರಿ ಕುಸಿತವಾದಲ್ಲಿ ಮಡಿಕೇರಿ ಮಂಗಳೂರು ರಸ್ತೆ ಸಂಚಾರ ವ್ಯವಸ್ಥೆ ಏರುಪೇರಾಗಲಿದೆ.

ತಾಳತ್ತಮನೆ ಜಂಕ್ಷನ್ ಮೂಲಕ ಮೇಕೇರಿ- ವಿರಾಜಪೇಟೆ ಸಂಪರ್ಕ ರಸ್ತೆಯ ಮೂಲಕ ಪ್ರಯಾಣಿಕರ ವಾಹನ ಮತ್ತು ಬಸ್ ವ್ಯವಸ್ಥೆ ಕಲ್ಪಿಸಬಹುದಾದರೂ, ಮಲ್ಟಿ ಆ್ಯಕ್ಸಿಲ್ ಬಸ್‍ಗಳು ಮತ್ತು ಸರಕು ತುಂಬಿದ ಲಾಂಗ್ ಚಾಸೀಸ್ ಲಾರಿಗಳ ಸಂಚಾರ ಈ ಮಾರ್ಗದಲ್ಲಿ ಅಸಾಧ್ಯ ವಾಗಲಿದೆ. ಮೇಕೇರಿಯಿಂದ ಮಡಿಕೇರಿ ವರೆಗೆ ತೀರಾ ಕಡಿದಾದ ತಿರುವುಗಳಿದ್ದು, ಬಹು ಚಕ್ರದ ಲಾರಿಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ.

ಹೆದ್ದಾರಿಯ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕ ವಾಹನಗಳನ್ನು ಹೊರತು ಪಡಿಸಿ ಎಲ್ಲಾ ರೀತಿಯ ಸರಕು ಸಾಗಿಸುವ ಲಾರಿಗಳ ಸಂಚಾರವನ್ನು ನಿಷೇಧಿಸ ಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತ ವನ್ನು ಆಗ್ರಹಿಸಿದ್ದಾರೆ. ಹೆದ್ದಾರಿ ಕುಸಿತಗೊಂಡ ಸ್ಥಳಕ್ಕೆ ಲೋಕೋಪಯೋಗಿ ಮತ್ತು ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.

Translate »