ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ

July 9, 2018
  • ಇಂದು ಶಾಲಾ ಕಾಲೇಜಿಗೆ ರಜೆ
  • ಕರಿಕೆ ಬಳಿ ಕೊಚ್ಚಿ ಹೋದ ತೂಗು ಸೇತುವೆ

ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದ್ದು, ಮಳೆ ಯಿಂದ ಕೊಡಗು ಜಿಲ್ಲೆ ತತ್ತರಿಸಿದೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರತಿ ಕೂಲ ಪರಿಣಾಮ ಉಂಟಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತದಿಂದ ಗ್ರಾಮೀಣ ಭಾಗದ ನಿವಾಸಿಗಳು ತೊಂದರೆ ಅನುಭವಿಸು ವಂತಾಗಿದೆ. ಜಿಲ್ಲೆಯಾದ್ಯಂತ ಮಳೆ ಜೋರಾಗಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ನಾಳೆ (ಜು.9) ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಕರಿಕೆ ಬಳಿ ಹೊಳೆಯೊಂದಕ್ಕೆ ಗ್ರಾಮಸ್ಥರು ನಿರ್ಮಿಸಿದ್ದ ತೂಗು ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು, ಅಂದಾಜು ಹತ್ತಕ್ಕೂ ಹೆಚ್ಚು ಕುಟುಂಬಗಳು, ಗ್ರಾಮ ದಿಂದ ಸಂಪರ್ಕ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಕರಿಕೆ ವ್ಯಾಪ್ತಿ ಯಲ್ಲಿ ಕಳೆದ 24 ಗಂಟೆಗಳಲ್ಲಿ 63.77 ಮಿ.ಮೀ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಯಥಾಸ್ಥಿತಿಯಲ್ಲಿದ್ದು, ಈ ವ್ಯಾಪ್ತಿಯಲ್ಲಿ ಮಳೆಯ ಬಿರುಸು ಕಡಿಮೆಯಾದ ಹಿನ್ನೆಲೆಯಲ್ಲಿ ಭಾಗಮಂಡಲ ಸೇತುವೆ ಮತ್ತು ಭಾಗಮಂಡಲ-ನಾಪೋಕ್ಲು ರಸ್ತೆ ಸಂಚಾರಕ್ಕೆ ಮುಕ್ತ ಗೊಂಡಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಈಗಾಗಲೇ 125 ಇಂಚು ಮಳೆ ಸುರಿ ದಿರುವ ಬಗ್ಗೆ ಗ್ರಾಮಸ್ಥರು ಅಂದಾಜಿಸಿದ್ದಾರೆ. ಮಡಿಕೇರಿ ನಗರಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಏಳು ಇಂಚು ಮಳೆ ಸುರಿದಿದ್ದು, ನಗರದ ನಿವಾಸಿಗಳು ತತ್ತರಿಸಿದ್ದಾರೆ. ಮಂಗಳಾದೇವಿ ನಗರ, ಇಂದಿರಾನಗರ. ಚಾಮುಂಡೇಶ್ವರಿನಗರ, ಮಲ್ಲಿಕಾರ್ಜುನನಗರ, ತ್ಯಾಗರಾಜ ಕಾಲೋನಿ ಸೇರಿದಂತೆ ಬೆಟ್ಟಗುಡ್ಡಗಳ ನಿವಾಸಿಗಳಲ್ಲಿ ಪುನರ್ವಸು ಮಳೆ ಆತಂಕ ಸೃಷ್ಟಿಸಿದೆ.

ಹಗಲಿರುಳು ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಈ ಬಡಾವಣೆಗಳ ಜನರು ಕಂಗಾಲಾಗಿದ್ದಾರೆ. ಭಾರಿ ಮಳೆಯೊಂದಿಗೆ ಗಾಳಿಯ ತೀವ್ರತೆಯೂ ಕಂಡುಬಂದಿರುವುದು ನಗರದ ನಿವಾಸಿಗಳಲ್ಲಿ ಭಯ ಮೂಡಿಸಿದೆ. ಕೆಲವು ಮನೆಗಳ ಹೆಂಚು ಗಳು ಹಾರಿಹೋಗಿದ್ದು, ಮಡಿಕೇರಿಯ ಐತಿಹಾಸಿಕ ಕೋಟೆಯ ಮೇಲ್ಚಾವಣಿಯ ಹೆಂಚುಗಳು ತೂರಿಹೋಗಿದೆ. ಕೋಟೆ ಆವರಣ ಕೆರೆಯಂತಾಗಿದ್ದು, ಸಂಪೂರ್ಣ ಪ್ರದೇಶದಲ್ಲಿ ನೀರು ಆವರಿಸಿದೆ.

ಇನ್ನು ಪ್ರಮುಖ ಪ್ರವಾಸಿತಾಣವಾದ ಅಬ್ಬಿ ಜಲ ಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದು, ಬೆರಳೆಣಿಕೆಯ ಪ್ರವಾಸಿಗರು ಜಲಪಾತದ ಸೌಂದರ್ಯ ಸವಿಯಲು ಆಗಮಿಸಿದ್ದರು. ನಗರದೆಲ್ಲೆಡೆ ಮಳೆಯೊಂದಿಗೆ ದಟ್ಟ ಮಂಜು ಕವಿದ ವಾತಾವರಣವಿದ್ದು, ತೀವ್ರ ಚಳಿಯು ನಗರದ ನಿವಾಸಿಗಳನ್ನು ನಡುಗಿ ಸಿದೆ. ವಾರಾಂತ್ಯದ ರಜೆಯ ಮಜಾ ಅನುಭ ವಿಸಲು ಮಡಿಕೇರಿಗೆ ಆಗಮಿಸುತ್ತಿದ್ದ ಪ್ರವಾ ಸಿಗರು, ಕಳೆದ ಎರಡು ದಿನಗಳಿಂದ ನಗರ ದಲ್ಲಿ ಕಂಡುಬರಲಿಲ್ಲ.

ಮಡಿಕೇರಿ ಮತ್ತು ಸೋಮವಾರಪೇಟೆ ಭಾಗಗಳು ಸೇರಿದಂತೆ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯು ತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರು ತ್ತಿದೆ. 2859 ಅಡಿಗಳ ಗರಿಷ್ಠ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿರುವ ಜಲಾಶಯ ದಲ್ಲಿ ಪ್ರಸ್ತುತ 2856.73 ಅಡಿಗಳಷ್ಟು ನೀರಿದ್ದು, 13,354 ಕ್ಯುಸೆಕ್ ನೀರಿನ ಒಳ ಹರಿವು ದಾಖಲಾಗಿದೆ.

ಶನಿವಾರ ಬೆಳಗ್ಗೆ ಹಾರಂಗಿ ಜಲಾಶಯದಲ್ಲಿ ಕೇವಲ 2591 ಕ್ಯುಸೆಕ್ ಒಳಹರಿವು ಕಂಡು ಬಂದಿತ್ತಾ ದರೂ, ಸಂಜೆ 4 ಗಂಟೆಯ ವೇಳೆಗೆ ಒಳ ಹರಿವು ಪ್ರಮಾಣ ದಾಖಲೆಯ 24 ಸಾವಿರ ಕ್ಯುಸೆಕ್‍ಗೆ ಏರಿಕೆಯಾಗಿತ್ತು. ಈ ಹಿನ್ನೆಲೆ ಯಲ್ಲಿ ಜಲಾಶಯದ ಸುರಕ್ಷತೆಯ ದೃಷ್ಟಿ ಯಿಂದ ನದಿ ಪಾತ್ರಕ್ಕೆ 1,200 ಕ್ಯುಸೆಕ್ ಪ್ರಮಾಣದ ನೀರು ಹರಿಸಲಾಯಿತು.

ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಭಾನು ವಾರವು ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಪಾತ್ರಕ್ಕೆ ಹರಿಯಬಿಡುವ ನೀರಿನ ಪ್ರಮಾಣವನ್ನು ಏರಿಕೆ ಮಾಡಿ ಒಟ್ಟು 1,500 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಮಾತ್ರವಲ್ಲದೇ ಪ್ರಸ್ತುತ ಮುಂಗಾರಿ ನಲ್ಲಿ ಮೊದಲ ಬಾರಿಗೆ 125 ಕ್ಯುಸೆಕ್ ನೀರನ್ನು ನಾಲೆಗೆ ಹರಿಸಲಾಗಿದೆ. ಜಲಾ ಶಯ ವ್ಯಾಪ್ತಿಯಲ್ಲಿ ಇದೇ ಪ್ರಮಾಣ ದಲ್ಲಿ ಮಳೆ ಸುರಿದರೇ ಒಳಹರಿವಿನಲ್ಲಿ ಏರಿಕೆ ಕಂಡಬರಲಿದೆ ಎಂದು ಹಾರಂಗಿ ಜಲಾಶಯ ಮೂಲಗಳು ತಿಳಿಸಿವೆ.

Translate »