ಮಡಿಕೇರಿ, ಏ.20- ತಾಲೂಕಿನ ಚೆಂಬು ಗ್ರಾಮದ ಕಟ್ಟಿಪಳ್ಳಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳಾದ ಬೆಳ್ಳಿ ಮತ್ತು ವಿಜಯ ಎಂಬುವರು ಕಳ್ಳಭಟ್ಟಿ ತಯಾರಿಸಿ ಮಾರಾಟಕ್ಕೆ ಸಂಗ್ರಹಿಸಿಡಲಾಗಿದ್ದ 10 ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿ, 120 ಲೀಟರ್ ಗೇರು ಹಣ್ಣಿನ ಪುಳಿಗಂಜಿ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳ ವಿರುದ್ದ ಮೊಕದ್ದಮೆ ದಾಖ ಲಿಸಲಾಗಿದೆ. ಅಬಕಾರಿ ನಿರೀಕ್ಷಕಿ ಆರ್.ಎಂ. ಚೈತ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ…
ಮರದಿಂದ ಬಿದ್ದು ಸಾವು
April 21, 2020ಸೋಮವಾರಪೇಟೆ, ಏ.20- ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕೆಳಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕುಂಬೂರು ಗ್ರಾಮದ ಕೆ.ವಿ. ಜತ್ತಪ್ಪ(64) ಸಾವನ್ನಪ್ಪಿದವರು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಿಳಿಗೇರಿ ಗ್ರಾಮದ ಆಲ್ಫೋನ್ಸ್ ಸಿಕ್ವೇರಾ ಎಂಬುವರಿಗೆ ಸೇರಿದ ತೋಟದಲ್ಲಿ ಮರಕಪಾತು ಮಾಡುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ಮೃತರು ಪತ್ನಿ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್‍ಪೋಸಲ್ ತಂಡ ರಚನೆ
April 20, 2020ಮಡಿಕೇರಿ,ಏ.19-ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಪೊಲೀಸ್ ವತಿಯಿಂದ ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್‍ಪೋಸಲ್ ತಂಡವನ್ನು ರಚಿಸಲಾಗಿದೆ. ದೃಢಪಟ್ಟ ಅಥವಾ ಶಂಕಿತ ಕೋವಿಡ್-19 ಸಂಭವನೀಯ ಮರಣದ ಮೃತದೇಹವನ್ನು ನಿರ್ವಹಿಸುವ ಮತ್ತು ವಿಲೇವಾರಿ ಮಾಡುವ ಬಗ್ಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ತಂಡದ ಸದಸ್ಯರುಗಳಿಗಾಗಿ ಕಾರ್ಯಾಗಾರ ನಡೆಯಿತು. ದೇಶದಲ್ಲಿ ಹರಡುತ್ತಿರುವ ಕೋವಿಡ್-19 ಕಾಯಿಲೆಗೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆ ಫಲಿಸದೆ ಯಾರಾದರೂ ಸೋಂಕಿತ ರೋಗಿಗಳು ಮೃತರಾದಲ್ಲಿ ಅಂತಹ ಪಾರ್ಥಿವ ಶರೀರವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು…
ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರ ತಂಡ
April 20, 2020ಸಿದ್ದಾಪುರ, ಏ.19- ಕೊರೊನಾ ವೈರಸ್ ತಡೆ ಜಾಗೃತಿಗೆ ವಿಧಿಸಿರುವ ಲಾಕ್‍ಡೌನ್ ಸಮಸ್ಯೆಯಿಂದ ಸಿಲುಕಿ ಕೊಂಡಿರುವ ಕಾರ್ಮಿಕರನ್ನು ಭೇಟಿ ಮಾಡಿದ ನ್ಯಾಯಾಧೀಶರ ತಂಡ ಅವರ ಸಮಸ್ಯೆಗಳನ್ನು ಆಲಿಸಿದರು. ಸೋಮವಾರಪೇಟೆ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯ ಅಭ್ಯತ್ ಮಂಗಲ ಗ್ರಾಮದ ಕಾಫಿ ತೋಟದಲ್ಲಿರುವ ಹೊರ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳನ್ನು ಸೋಮವಾರ ಪೇಟೆ ನ್ಯಾಯಾಧೀಶರ ತಂಡ ಆಲಿಸಿತು. ಸೋಮವಾರಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ದಿಂಡಿಲ ಕೊಪ್ಪ, ಪ್ರಧಾನ ನ್ಯಾಯಾಧೀಶರಾದ ಪ್ರತಿಭಾ ಹಾಗೂ ಕುಶಾಲನಗರ ಹಿರಿಯ ಸಿವಿಲ್ ನ್ಯಾಯಾ ಧೀಶ ಸಂದೀಪ್…
ಲಾಕ್‍ಡೌನ್ ನಡುವೆಯೇ ಬೆಂಗಳೂರಿನಿಂದ ಆಗಮಿಸಿದ್ದ ಐವರು ಕ್ವಾರಂಟೈನ್‍ಗೆ ದಾಖಲು
April 20, 2020ಮಡಿಕೇರಿ, ಏ.19- ಬೆಂಗಳೂರಿನಲ್ಲಿ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದು ಕೊಡಗು ಪ್ರವೇಶಿಸಿ ಹೋಂ ಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಹಾಗೂ ತುಮಕೂರು ಮೂಲದ ಐವರು ಹಾಗೂ ಹೋಂ ಸ್ಟೇ ಮಾಲೀಕನ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಜಿಲ್ಲಾ ಕ್ವಾರಂಟೈನ್‍ನಲ್ಲಿ ದಾಖಲಿಸಲಾಗಿದೆ. ಪ್ರಕರಣ ಹಿನ್ನಲೆ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಹೋಂ ಸ್ಟೇಗೆ 15 ದಿನಗಳ ಹಿಂದೆ ತುಮಕೂರು ಮೂಲದ…
ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಮಗು ಸಾವು
April 20, 2020ಕುಶಾಲನಗರ, ಏ.19- ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಗಂಡು ಮಗು ವೊಂದು ಮೃತಪಟ್ಟಿರುವ ಘಟನೆ ಮಾವಿನ ಹಳ್ಳ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕೂಡಿಗೆ ಗ್ರಾಪಂ ವ್ಯಾಪ್ತಿಯ ಮಾವಿನ ಹಳ್ಳ ಗ್ರಾಮದ ಪ್ರತೀಶ್ ಹಾಗೂ ಲೀಲಾ ದಂಪತಿಯ ಎರಡೂವರೆ ತಿಂಗಳ ಗಂಡು ಮಗು ಮೃತಪಟ್ಟಿರುವುದು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯ ವಾಗದೆ ಪೆÇೀಷಕರು ಪರದಾಡುತ್ತಿದ್ದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೆÇಲೀಸ್ ಬಂದೋಬಸ್ತ್ ಇದ್ದ ಪರಿ ಣಾಮ ಭಯದಿಂದ…
ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಆಹಾರ ವಿತರಿಸಿದ ಶಿಕ್ಷಕಿ
April 18, 2020ಮಡಿಕೇರಿ, ಏ.17- ತಾಲೂಕಿನ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಕೆ.ಎಂ.ವಿಮಲ ಸರ್ಕಾರದ ಆದೇಶದಂತೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿ ಗಳ ಪೋಷಕರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಒಂದನೇ ಹಂತದಲ್ಲಿ ಶೇ. 60 ಅಕ್ಷರ ದಾಸೋಹ ಆಹಾರವನ್ನು ಪೋಷಕರಿಗೆ ವಿತರಿಸಿದರು. ಶಾಲೆಯಿಂದ ಬಟ್ಟೆಯ ಚೀಲದಲ್ಲಿ ಆಹಾರವನ್ನು ಅವರ ಸ್ವಂತ ಕಾರಿನಲ್ಲಿ ತುಂಬಿ ವಿದ್ಯಾರ್ಥಿಗಳ ಪೋಷಕರಿಗೆ ಆಹಾರವನ್ನು ವಿತರಿಸಿದ್ದು, ಇದರಿಂದ ಹಷರ್Àಗೊಂಡ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿ ಕೆ.ಎಂ.ವಿಮಲ ಅವರ ಮಾನವೀಯತೆಯ ಕಾರ್ಯಕ್ಕೆ ಅಭಿನಂದನೆ…
‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ
April 18, 2020ಮಡಿಕೇರಿ,ಏ.17-ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಏ.20ರಂದು ಸಂಜೆ 5 ಗಂಟೆಗೆ ‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಕೊರೊನಾ-19ರ ಸಂದರ್ಭದಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನೇರ-ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಭಾಗವಹಿಸಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ರೇಡಿಯೋ ಕೇಳುಗರು ದೂ.ಸಂ. 9740871827ಕ್ಕೆ ಆರೋಗ್ಯ ಇಲಾಖೆಯ ಕೆಲಸಗಳ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಎಸ್‍ಎಂಎಸ್ ಹಾಗೂ ವಾಟ್ಸ್‍ಆಪ್ ಮೂಲಕ ಕಳುಹಿಸುವುದರೊಂದಿಗೆ ಈ ಕಾರ್ಯಕ್ರಮದಲ್ಲಿ…
ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಗೂಡ್ಸ್ ವಾಹನ
April 18, 2020ಮಡಿಕೇರಿ, ಏ.17- ಹುಣಸೂರಿನಿಂದ ಮಡಿಕೇರಿಗೆ ತರಕಾರಿ ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬಸವನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಶುಕ್ರವಾರ ಬೆಳಗಿನ 4.45ರ ನಸುಕಿನ ಸಮಯದಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೊಬ್ಬ ಯುವಕ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕುರಿತು ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ವಿವರ: ಮಡಿಕೇರಿ ಮಹದೇವಪೇಟೆ ನಿವಾಸಿ ಕುಮಾರ್…
ಇಂದಿನಿಂದ ಕೊಡಗಲ್ಲಿ ವಾರದಲ್ಲಿ 3 ದಿನ ಮಾಂಸ ಮಾರಾಟಕ್ಕೆ ಅವಕಾಶ
April 13, 2020ಮಡಿಕೇರಿ, ಏ.12- ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ನಿಷೇಧಿ ಸಿದ್ದ ಮೀನು, ಮಾಂಸ ಮಾರಾಟವನ್ನು ಜಿಲ್ಲಾಡಳಿತ ಸರಕಾರದ ಸೂಚನೆಯಂತೆ ಹಿಂಪಡೆದಿದೆ. ನಾಳೆ (ಸೋಮವಾರ) ಯಿಂದ ಜಿಲ್ಲೆಯಲ್ಲಿ ಕೋಳಿ, ಕುರಿ, ಆಡು, ಹಂದಿ ಮತ್ತು ಹೊಳೆ ಮೀನು(ಕಾಟ್ಲ) ಮಾರಾಟಕ್ಕೆ ವಾರದಲ್ಲಿ 3 ದಿನಗಳ ಕಾಲ ಅವಕಾಶ ನೀಡಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೀನು-ಮಾಂಸ ಖರೀದಿಗೆ ಅವಕಾಶ ನೀಡಲಾಗಿದೆ. ಇನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮೀನು ಮತ್ತು…