ಅಕ್ರಮ ಕಳ್ಳಭಟ್ಟಿ ವಶ
ಕೊಡಗು

ಅಕ್ರಮ ಕಳ್ಳಭಟ್ಟಿ ವಶ

April 21, 2020

ಮಡಿಕೇರಿ, ಏ.20- ತಾಲೂಕಿನ ಚೆಂಬು ಗ್ರಾಮದ ಕಟ್ಟಿಪಳ್ಳಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳಾದ ಬೆಳ್ಳಿ ಮತ್ತು ವಿಜಯ ಎಂಬುವರು ಕಳ್ಳಭಟ್ಟಿ ತಯಾರಿಸಿ ಮಾರಾಟಕ್ಕೆ ಸಂಗ್ರಹಿಸಿಡಲಾಗಿದ್ದ 10 ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿ, 120 ಲೀಟರ್ ಗೇರು ಹಣ್ಣಿನ ಪುಳಿಗಂಜಿ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳ ವಿರುದ್ದ ಮೊಕದ್ದಮೆ ದಾಖ ಲಿಸಲಾಗಿದೆ. ಅಬಕಾರಿ ನಿರೀಕ್ಷಕಿ ಆರ್.ಎಂ. ಚೈತ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಅನಿಲ್ ಜಿ.ಅರ್., ಅಬಕಾರಿ ರಕ್ಷಕರಾದ ಹಂಜûದ್ ಕೆ.ಎಸ್, ರಾಜು ಎಚ್.ಎಸ್, ಲಕ್ಷ್ಮೀದೇವಿ.ಎಸ್ ಭಾಗವಹಿಸಿದ್ದರು.

Translate »