ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಮಗು ಸಾವು
ಕೊಡಗು

ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಮಗು ಸಾವು

April 20, 2020

ಕುಶಾಲನಗರ, ಏ.19- ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಗಂಡು ಮಗು ವೊಂದು ಮೃತಪಟ್ಟಿರುವ ಘಟನೆ ಮಾವಿನ ಹಳ್ಳ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕೂಡಿಗೆ ಗ್ರಾಪಂ ವ್ಯಾಪ್ತಿಯ ಮಾವಿನ ಹಳ್ಳ ಗ್ರಾಮದ ಪ್ರತೀಶ್ ಹಾಗೂ ಲೀಲಾ ದಂಪತಿಯ ಎರಡೂವರೆ ತಿಂಗಳ ಗಂಡು ಮಗು ಮೃತಪಟ್ಟಿರುವುದು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯ ವಾಗದೆ ಪೆÇೀಷಕರು ಪರದಾಡುತ್ತಿದ್ದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೆÇಲೀಸ್ ಬಂದೋಬಸ್ತ್ ಇದ್ದ ಪರಿ ಣಾಮ ಭಯದಿಂದ ಆಟೋ ಆಗಲೀ, ಆ್ಯಂಬುಲೆನ್ಸ್ ವಾಹನವಾಗಲೀ ಸಿಗಲಿಲ್ಲ. ನಂತರ ಗ್ರಾಮದ ಯುವಕನೊಬ್ಬ ಕಾರಿನಲ್ಲಿ ಹೆಬ್ಬಾಲೆಗೆ ಕರೆ ತಂದರು. ಹೆಬ್ಬಾಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮಗುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರು. ಆದರೆ ಇಲ್ಲಿ ಪರಿಕ್ಷಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿಕೊಟ್ಟರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗು ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದೆ. ಈ ಸಂದರ್ಭ ಮಗುವಿನ ಪೆÇೀಷಕರು ಪೆÇಲೀಸರಿಗೆ ಹೆದರಿ ಯಾವ ವಾಹನ ಚಾಲಕರು ಯಾರು ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Translate »