ಮಡಿಕೇರಿ, ಏ.2- ಬ್ಯಾಂಕುಗಳಿಗೆ ಪಿಂಚಣಿ ದಾರರು ಹಾಗೂ ಇತರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದ್ದು, ಯಾವುದೇ ರೀತಿಯ ಜನದಟ್ಟಣೆ ಉಂಟಾಗ ದಂತೆ ಅಗತ್ಯ ಕ್ರಮ ವಹಿಸುವಂತೆ ವಿವಿಧ ಬ್ಯಾಂಕುಗಳ ಶಾಖೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನಗಳನ್ನು ಚಾಚೂ…
ಮಡಿಕೇರಿಯಲ್ಲಿ ಕಾಂಟಿಜೆನ್ಸಿ ಯೋಜನೆ ಜಾರಿ
April 3, 2020ಮಡಿಕೇರಿ, ಏ.2- ಕೊರೊನ ವೈರಸ್ ಸೋಂಕು ಹರಡುವ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಕಾಂಟಿಜೆನ್ಸಿ ಯೋಜನೆಯನ್ನು ರೂಪಿಸ ಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ 13 ಫೀವರ್ ಕ್ಲಿನಿಕ್, 13 ಕ್ವಾರಂಟೈನ್ ಸೆಂಟರ್ ಮತ್ತು 3 ಸೂಪ ರ್ವೈಸ್ಡ್ ಐಸೋಲೇಶನ್ ಸೆಂಟರ್‍ಗಳನ್ನು ಸ್ಥಾಪಿಸ ಲಾಗಿದೆ. ಅದರಂತೆ ಮೊದಲ ಹಂತದಲ್ಲಿ 4 ಫೀವರ್ ಕ್ಲಿನಿಕ್‍ಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ಅಗತ್ಯ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ(ಜಿಲ್ಲಾಸ್ಪತ್ರೆ ಮಡಿಕೇರಿ), ಸೋಮವಾರಪೇಟೆಯ ಸಮುದಾಯ ಆರೋಗ್ಯ ಕೇಂದ್ರ, ಕುಶಾಲನಗರದ ಸಾರ್ವಜನಿಕ…
ಆನೆಚೌಕೂರು- ಪಿರಿಯಾಪಟ್ಟಣ ರಸ್ತೆ ಬಂದ್ ತೆರವಿಗೆ ಆಗ್ರಹ
April 3, 2020ಗೋಣಿಕೊಪ್ಪ, ಏ.2- ಆನೆಚೌಕೂರು- ಪಿರಿಯಾಪಟ್ಟಣ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದ್ದು, ಇದರಿಂದ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಲ್ಲಿ, ಅರಣ್ಯ ಇಲಾಖೆ ಕಾರ್ಯಾಚರಣೆಗೆ ಅಡ್ಡಿಯುಂಟಾ ಗಿದೆ ಎಂಬ ದೂರು ಕೇಳಿಬರುತ್ತಿದೆ. ಕೊರೊನಾ ತಡೆಗೆ ಜಿಲ್ಲಾದ್ಯಂತ ಗಡಿ ಬಂದ್ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಆಡಳಿತ ಈ ರಸ್ತೆಯನ್ನು ಬಂದ್ ಮಾಡಿದೆ. ಇದರಿಂದ ಆಗುತ್ತಿರುವ ತೊಂದರೆ ಬಗ್ಗೆ ಉಸ್ತುವಾರಿ ಸಚಿವ ಸೋಮಣ್ಣ ಅವರ ನೇತೃತ್ವದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಮಣ್ಣು ತೆರವುಗೊಳಿಸುವಂತೆ ಆದೇಶಿಸಿದ್ದರೂ…
ಪೊಲೀಸ್ ಬಂದೋಬಸ್ತ್‍ನಲ್ಲಿ ದಿನಸಿ, ತರಕಾರಿ ಖರೀದಿ
April 2, 2020ಮಡಿಕೇರಿ, ಏ.1- ಕೊರೊನಾ ಸೋಂಕು ಹರಡುವ ಹಿನ್ನಲೆ ಮತ್ತು ಜಿಲ್ಲೆಯ ಜನರ ಸುರಕ್ಷತಾ ಹಿತದೃಷ್ಟಿಯಿಂದ ಕೊಡಗು ಜಿಲ್ಲಾಡಳಿತ ವಾರದಲ್ಲಿ 3 ದಿನಗಳ ಕಾಲ ಮಾತ್ರವೇ ದಿನಸಿ, ತರಕಾರಿ ಮತ್ತು ದಿನ ಬಳಕೆಯ ವಸ್ತುಗಳನ್ನು ಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿದೆ. ಸೋಮ ವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರವೇ ಸಾಮೂಹಿಕವಾಗಿ ಸಂತೆ ಮಾದರಿ ಯಲ್ಲಿ ತರಕಾರಿ ವಸ್ತುಗಳನ್ನು ಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಈ ಬಾರಿ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ…
ಸುಂಟಿಕೊಪ್ಪದಲ್ಲಿ ಮನೆ ಮನೆಗೆ ತರಕಾರಿ ಮಾರಲು ದೃಢೀಕರಣ ಪತ್ರ ನೀಡಲು ನಿರ್ಧಾರ
April 2, 2020ಸುಂಟಿಕೊಪ್ಪ, ಏ.1- ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಕಾರಿ ವ್ಯಾಪಾರಸ್ಥರಿಗೆ ವಾಹನದಲ್ಲಿ ತರಕಾರಿ ಗಳನ್ನು ಗ್ರಾಹಕರ ಮನೆ ಮನೆಗಳಿಗೆ ತೆರಳಿ ನಿಗದಿತ ದರದಲ್ಲಿ ಮಾರಲು ದೃಢೀಕರಣ ಪತ್ರ ನೀಡಲಾಗುವುದೆಂದು ಸೋಮವಾರ ಪೇಟೆ ಡಿವೈಎಸ್‍ಪಿ ಶೈಲೆಂದ್ರ ತಿಳಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ನಡೆದ ತರಕಾರಿ ಹಾಗೂ ದಿನಸಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ದಿನಸಿ ಅಂಗಡಿಯವರು ಕೂಡ ಗ್ರಾಹಕರು ದಿನಸಿ ವಸ್ತುಗಳ ಪಟ್ಟಿ ಮಾಡಿ ಕಳುಹಿಸಿದಾಗ ಸಾಮಾಗ್ರಿಗಳನ್ನು ಅಂಗಡಿ ಸಹಾಯಕನ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು….
ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಕುಶಾಲನಗರದ 13 ಮಂದಿ ಭಾಗಿ ಶಂಕೆ
April 2, 2020ಮಡಿಕೇರಿ, ಏ.1- ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಮಂದಿರದಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಕೊಡಗಿನ 13 ಮಂದಿ ಭಾಗಿಯಾಗಿರುವ ಮಾಹಿತಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಲಭಿಸಿದ್ದು, ಪಾಲ್ಗೊಂಡವರು ಕುಶಾಲನಗರ ವ್ಯಾಪ್ತಿಯ ನಿವಾಸಿಗಳೆಂದು ತಿಳಿದು ಬಂದಿದೆ. ಪ್ರಾರ್ಥನಾ ಸಭೆಗೆ ತೆರಳಿದ್ದ 5 ಮಂದಿ ದೆಹಲಿಯಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ. ಇನ್ನೂ 5 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಉಳಿದ 1 ಪ್ರಕರಣದ ವ್ಯಕ್ತಿಯು ಕೊಡಗು ಜಿಲ್ಲೆಯಲ್ಲಿ ವಾಸವಿದ್ದು, ಅವರ 14 ದಿನಗಳ ಕ್ವಾರಂಟೈನ್…
ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿ
April 2, 2020ಸೋಮವಾರಪೇಟೆ, ಏ.1- ಅಪರೂಪದ ಪ್ರಾಣಿ ಪಕ್ಷಿಗಳಿರುವ ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿಯಾಗಿದೆ. ಕಾರೇಕೊಪ್ಪ ಗ್ರಾಮದ ಸಮೀಪದಲ್ಲಿ ನೂರಾರು ಎಕರೆ ಅರಣ್ಯ ಹೊತ್ತಿ ಉರಿದಿದೆ. ಕಾರೇಕೊಪ್ಪದಿಂದ ಯಡವನಾಡು ಗ್ರಾಮದವರೆಗೂ ಪ್ರಾಣಿ, ಪಕ್ಷಿಗಳು, ಬೆಲೆಬಾಳುವ ಮರಗಳು ಸುಟ್ಟು ಕರಕಲಾಗಿವೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿ.ಎಫ್ ನೆಹರು, ಆರ್‍ಎಫ್‍ಓ ಶಮಾ ಸ್ಥಳದಲ್ಲಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಬೆಂಕಿ ಆರಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಬೆಂಕಿ ಬೀಳದಂತೆ ಇಲಾಖೆಯಿಂದ ಎಲ್ಲಾ…
ಕೇರಳದಿಂದ ಗಡಿ ದಾಟಿ ಬಂದ ಇಬ್ಬರ ವಿರುದ್ಧ ಕೇಸು ದಾಖಲು
April 2, 2020ಇಬ್ಬರನ್ನೂ ವಶಕ್ಕೆ ಪಡೆದು ಕ್ವಾರಂಟೇನ್ ಕೇಂದ್ರಕ್ಕೆ ಕಳುಹಿಸಿದ ಜಿಲ್ಲಾಡಳಿತ ಮಡಿಕೇರಿ, ಏ.1- ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಕೊಡಗು ಕೇರಳ ರಾಜ್ಯವನ್ನು ಸಂಪರ್ಕಿಸುವ ಕರಿಕೆ ಚೆಕ್ ಪೋಸ್ಟ್ ಅನ್ನು ಬಂದ್ ಮಾಡಲಾಗಿದ್ದು, ಯಾರೂ ಕೂಡ ಕೊಡಗಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ಕೊಡಗಿಗೆ ತೆರಳುವಂತಿಲ್ಲ ಎಂದು ಜಿಲ್ಲಾಡಳಿತ ಮತ್ತು ಕೊಡಗು ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರೂ ಇಬ್ಬರು ವ್ಯಕ್ತಿಗಳು ಗಡಿ ದಾಟಿ ಬಂದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ವಾರೆಂಟೇನ್‍ಗೆ ಕಳುಹಿಸಲಾಗಿದೆ. ಈ…
ಗೊಂದಿಹಳ್ಳಿ ಗ್ರಾಮಸ್ಥರಿಂದ ರಸ್ತೆ ಬಂದ್
April 1, 2020ಕಿಕ್ಕೇರಿ, ಮಾ.31- ಕೊರೊನಾ ಭಯದಿಂದ ವೈರಾಣು ಗ್ರಾಮಕ್ಕೆ ನುಸುಳದಂತೆ ಹೋಬಳಿಯ ಗಡಿಭಾಗವಾದ ಗೊಂದಿಹಳ್ಳಿ ಗ್ರಾಮಕ್ಕೆ ಹೊರಗಿನಿಂದ ವ್ಯಕ್ತಿಗಳು ಬಾರದಂತೆ ಗ್ರಾಮಸ್ಥರು ರಸ್ತೆಗೆ ಕಲ್ಲುಮಣ್ಣು ಸುರಿದು ಬಂದ್ ಮಾಡಿದರು. ಹೇಮಾವತಿ ನದಿಯ ಸೇತುವೆ ಮೇಲಿರುವ ಈ ರಸ್ತೆ ಸಂಪರ್ಕ ಕಡಿತದಿಂದ ಸಿಂಗಾಪುರ, ಹೊಳೆನರಸೀಪುರ, ಮಾದಾಪುರ, ಮತ್ತಿತರ ಗ್ರಾಮಗಳಿಗೆ ತೆರಳಲು ಕೊಂಡಿಯಾಗಿದ್ದ ರಸ್ತೆ ಸಂಪರ್ಕ ಕಡಿತವಾಯಿತು. ಅಗತ್ಯ ಸೇವೆ ವಾಹನಗಳು ಈ ಮಾರ್ಗವಾಗಿ ನಿತ್ಯವು ಚಲಿಸಬೇಕಿದ್ದು ಆಹಾರ, ಮೂಲಭೂತ ಸೌಲಭ್ಯ ಕಲ್ಪಿಸಲು ವಾಹನ ಓಡಾಡದಂತೆ ರಸ್ತೆ ಬಂದ್ ಆಗಿದ್ದ ಕಾರಣ…
ಕೊಡಗಿನಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್
April 1, 2020ಮಡಿಕೇರಿ, ಮಾ.31- ಮಡಿಕೇರಿಯಲ್ಲಿ ಮಂಗಳವಾರವೂ ಲಾಕ್‍ಡೌನ್ ಆದೇಶ ಕಟ್ಟು ನಿಟ್ಟಾಗಿ ಪಾಲನೆಯಾಗಿದೆ. ದಿನ ದಿಂದ ದಿನಕ್ಕೆ ಜಿಲ್ಲೆಯ ಜನರೂ ಕೂಡ ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿಗೊಂಡಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದಾರೆ. ಕೊರೊನಾ ಸೋಂಕು ತಗುಲಿರುವ ಒಂದು ಪ್ರಕರಣ ಕೊಡಗು ಜಿಲ್ಲೆಯಲ್ಲಿ ದೃಢಪಟ್ಟ ಬಳಿಕ ಕೊಡಗು ಜಿಲ್ಲಾಡಳಿತ ಸೋಂಕು ವ್ಯಾಪಿಸದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಕೂಡ ಕೈಜೋಡಿಸಿದ್ದಾರೆ. ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ಹಾಲು ಮತ್ತು…