ಮಡಿಕೇರಿಯಲ್ಲಿ ಕಾಂಟಿಜೆನ್ಸಿ ಯೋಜನೆ ಜಾರಿ
ಕೊಡಗು

ಮಡಿಕೇರಿಯಲ್ಲಿ ಕಾಂಟಿಜೆನ್ಸಿ ಯೋಜನೆ ಜಾರಿ

April 3, 2020

ಮಡಿಕೇರಿ, ಏ.2- ಕೊರೊನ ವೈರಸ್ ಸೋಂಕು ಹರಡುವ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಕಾಂಟಿಜೆನ್ಸಿ ಯೋಜನೆಯನ್ನು ರೂಪಿಸ ಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ 13 ಫೀವರ್ ಕ್ಲಿನಿಕ್, 13 ಕ್ವಾರಂಟೈನ್ ಸೆಂಟರ್ ಮತ್ತು 3 ಸೂಪ ರ್ವೈಸ್ಡ್ ಐಸೋಲೇಶನ್ ಸೆಂಟರ್‍ಗಳನ್ನು ಸ್ಥಾಪಿಸ ಲಾಗಿದೆ. ಅದರಂತೆ ಮೊದಲ ಹಂತದಲ್ಲಿ 4 ಫೀವರ್ ಕ್ಲಿನಿಕ್‍ಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ಅಗತ್ಯ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಲಾಗಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ(ಜಿಲ್ಲಾಸ್ಪತ್ರೆ ಮಡಿಕೇರಿ), ಸೋಮವಾರಪೇಟೆಯ ಸಮುದಾಯ ಆರೋಗ್ಯ ಕೇಂದ್ರ, ಕುಶಾಲನಗರದ ಸಾರ್ವಜನಿಕ ಆಸ್ಪತ್ರೆ, ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಈ ಕ್ಲಿನಿಕ್‍ಗಳು ಕಾರ್ಯಾಚರಣೆ ಮಾಡುತ್ತವೆ.

Translate »