10 ಸಾವಿರ ಅಸಂಘಟಿತ ಕಾರ್ಮಿಕರು, ಬೀದಿಬದಿ ವರ್ತಕರು, ನಿರಾಶ್ರಿತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮೈಸೂರು

10 ಸಾವಿರ ಅಸಂಘಟಿತ ಕಾರ್ಮಿಕರು, ಬೀದಿಬದಿ ವರ್ತಕರು, ನಿರಾಶ್ರಿತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

April 3, 2020

ಕಾರ್ಮಿಕ ಇಲಾಖೆ, ವಿವಿಧ ಸಂಸ್ಥೆಗಳಿಂದ ಜಾಗೃತಿ ಅಭಿಯಾನ
ಮೈಸೂರು,ಏ.2(ಆರ್‍ಕೆಬಿ)-ಕೊರೊನಾ ತಡೆ ಕುರಿತಂತೆ ಮೈಸೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ 1 ವಾರದಿಂದ ಜಾಗೃತಿ ಅಭಿಯಾನ ನಡೆಸುತ್ತಿರುವ ಕಾರ್ಮಿಕ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳು, 10 ಸಾವಿ ರಕ್ಕೂ ಹೆಚ್ಚು ಜನರಿಗೆ ಮಾಸ್ಕ್, ಸ್ಯಾನಿ ಟೈಸರ್, ಸೋಪು, ಬಿಸ್ಕೆಟ್ ವಿತರಿಸಿದವು.

ವಿವಿಧ ಗ್ರಾಮಗಳಲ್ಲಿ ವಾಸಿಸುವ ಕಟ್ಟಡ ನಿರ್ಮಾಣ ಸೇರಿದಂತೆ ಅಸಂಘಟಿತ ವಲ ಯದ ಕಾರ್ಮಿಕರು, ಹಣ್ಣು ಮತ್ತು ತರಕಾರಿ ಮಾರಾಟಗಾರರು, ಬೀದಿ ಬದಿ ವ್ಯಾಪಾರಿ ಗಳು, ಪೌರಕಾರ್ಮಿಕರು, ತಂಗುದಾಣ ದಲ್ಲಿರುವ ನಿರ್ವಸತಿಗರು, ಲಾಕ್‍ಡೌನ್ ಸಂದರ್ಭ ನಿರಾಶ್ರಿತರಾದವರಿಗೆ ಸುರಕ್ಷಾ ಸಾಧನಗಳನ್ನು ವಿತರಿಸುವುದರೊಂದಿಗೆ ಕೊರೊನಾ ವಿರುದ್ಧ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿದವು.

ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ ಅಸಂಘ ಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಹಾಗೂ ಕ್ರೆಡಿಟ್-ಐ ಸಂಸ್ಥೆ ಸಹಯೋಗ ದಲ್ಲಿ ಜಿಲ್ಲೆಯ ಮೈಸೂರು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಹೆಗ್ಗಡದೇವನ ಕೋಟೆ, ನಂಜನಗೂಡು ತಾಲೂಕುಗಳಲ್ಲಿ ಈ ಜಾಗೃತಿ ಅಭಿಯಾನ ನಡೆಸಲಾಯಿತು.

ಮೈಸೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾದೇವಿ, ರೆಡ್‍ಕ್ರಾಸ್‍ನ ಪ್ರೊ.ಮಹ ದೇವಪ್ಪ, ಡಾ.ಲಕ್ಷ್ಮೀದೇವಿ, ಕ್ರೆಡಿಟ್ ಐ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ವರ್ಷ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಮನೋನ್ಮಣಿ, ವಕೀಲರಾದ ಹೇಮಲತಾ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸದಸ್ಯರಾದ ಬಿ.ಎಸ್.ಸುಧಾ, ಬಿ.ಎಸ್.ವನಜಾ ಹಾಜರಿದ್ದರು.

Translate »