ಮಡಿಕೇರಿ: ಕಳೆದ 2 ದಿನಗಳಿಂದ ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ಇಂದು ರೆಸಾರ್ಟ್‍ನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದರು. ಬೆಳಗಿನ 11.40ರ ಸಮಯದಲ್ಲಿ ಕಾರ್‍ನಲ್ಲಿ ಪುತ್ರ ಡಾ.ಯತೀಂದ್ರರೊಂದಿಗೆ ಹೊರಬಂದ ಸಿದ್ದರಾಮಯ್ಯ, ಅಲ್ಲಿ ನೆರೆದಿದ್ದ ಸುದ್ದಿಗಾರರನ್ನು ಕಂಡು ಸೌಜನ್ಯದಿಂದ ತಮ್ಮ ಕಾರ್ ನಿಲ್ಲಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಸುದ್ದಿಗಾರರು…
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ
May 8, 2019ಮಡಿಕೇರಿ: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕೆನ್ನುವ ಆದೇಶವಿದ್ದರೂ ಕೊಡಗಿನ ಕಚೇರಿ ಯಲ್ಲಿ ಇದು ಪಾಲನೆಯಾಗಿಲ್ಲವೆಂದು ಆರೋಪಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಇಂದು ಕಪ್ಪು ಪಟ್ಟಿ ಧರಿಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ನಗರದ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್.ಮಹೇಶ್ ಹಾಗೂ ಇತರರು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸದೆ ಅಗೌರವ ತೋರಲಾಗುತ್ತಿದೆ ಎಂದು ಅಸಮಾಧಾನ…
ರಾಷ್ಟ್ರಮಟ್ಟದ 4 ಚಕ್ರ ಟ್ರ್ಯಾಕ್ ರೇಸ್ವೇಗದ ಚಾಲಕ ಪ್ರಶಸ್ತಿ ಪಡೆದ ಡೆನ್ ತಿಮ್ಮಯ್ಯ
May 8, 2019ಗೋಣಿಕೊಪ್ಪಲು: ಬೇಗೂರುಕೊಲ್ಲಿಯ ಗದ್ದೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ನಾಲ್ಕುಚಕ್ರ ಟ್ರ್ಯಾಕ್ ರೇಸ್‍ನಲ್ಲಿ ಡೆನ್ ತಿಮ್ಮಯ್ಯ ವೇಗದ ಚಾಲಕ ಬಹುಮಾನ ಗಿಟ್ಟಿಸಿಕೊಂಡರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಚೇಂದೀರ, ಐಪುಮಾಡ, ಚೆಕ್ಕೇರ ಹಾಗೂ ತೀತೀರ ಕುಟುಂಬಗಳಿಗೆ ಸೇರಿರುವ ಗದ್ದೆಯಲ್ಲಿ ರೋಚಕ ರೇಸ್‍ನಲ್ಲಿ 850 ಮೀಟರ್ ಉದ್ದದ ಟ್ರ್ಯಾಕ್‍ನ್ನು 2.02 ನಿಮಿಷದಲ್ಲಿ ಕ್ರಮಿಸುವ ಮೂಲಕ ವೇಗದ ಚಾಲಕ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು. ಉಳಿದಂತೆ ಕೂರ್ಗ್ ಲೋಕಲ್ ಓಪನ್, 1400-1600 ಸಿಸಿ, ಇಂಡಿಯನ್ ಓಪನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ 3…
ಸೋಮವಾರಪೇಟೆ ಬಳಿ ತಾಯಿ-ಮಗಳ ಹತ್ಯೆ
May 1, 2019ಸೋಮವಾರಪೇಟೆ: ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ-ಮಗಳನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದಿರುವ ದಾರುಣ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಿ. ವೀರರಾಜು ಅವರ ಪತ್ನಿ ಕವಿತಾ(45) ಹಾಗೂ ಅವರ ಪುತ್ರಿ ಜಗಶ್ರೀ (17) ಹತ್ಯೆಗೀಡಾಗಿದ್ದು, ಘಟನೆಗೆ ಸಂಬಂಧಿ ಸಿದಂತೆ ಅದೇ ಗ್ರಾಮದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗಿದೆ. ಕವಿತಾ ಅವರ ತಲೆ, ಕುತ್ತಿಗೆ, ಕೈ, ಕಾಲು ಹಾಗೂ ಜಗಶ್ರೀಯ ಕೈ ಹಾಗೂ ತಲೆ ಭಾಗಕ್ಕೆ ಕತ್ತಿಯಿಂದ ಕಡಿದಿರುವ ಪರಿಣಾಮ ತೀವ್ರ ರಕ್ತಸ್ರಾವವಾಗಿ ಈರ್ವರು ಸ್ಥಳದಲ್ಲಿಯೇ…
ಎಸ್‍ಎಸ್‍ಎಲ್‍ಸಿ: ಕೊಡಗಿಗೆ ಶೇ.78.81 ಫಲಿತಾಂಶ
April 30, 2019ಜಾಗೃತಿ ಸುಬ್ಬಯ್ಯ, ಶ್ರಾವಣಿ ಜಿಲ್ಲೆಗೆ ಪ್ರಥಮ ಮಡಿಕೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ಶೇ.78.81ರಷ್ಟು ಫಲಿ ತಾಂಶ ಪಡೆಯುವ ಮೂಲಕ 22ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜಿಲ್ಲೆಯಲ್ಲಿ ಈ ಬಾರಿಯೂ ಬಾಲಕಿ ಯರೇ ಮೇಲುಗೈ ಸಾಧಿಸಿದ್ದಾರೆ. 2018 ರಲ್ಲಿ ಕೊಡಗು ಜಿಲ್ಲೆ ಶೇ.80.68ರಷ್ಟು ಫಲಿತಾಂಶ ಪಡೆದು 18ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 4 ಸ್ಥಾನಗಳನ್ನು ಕಳೆದು ಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 6987 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 5226 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ….
ವಿರಾಜಪೇಟೆಯಲ್ಲಿ ಮಾರಿಯಮ್ಮ ದೇವಿ ಉತ್ಸವ
April 30, 2019ವಿರಾಜಪೇಟೆ: ವಿರಾಜಪೇಟೆ ಶಿವಕೇರಿಯಲ್ಲಿರುವ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಚಾಮುಂಡಿ[ಚೌಂಡಿ] ದೇವರ ವಾರ್ಷಿಕ ಮಹೋತ್ಸವವು ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಏ.30 ರಂದು ಪ್ರಾತಃಕಾಲ 6 ಗಂಟೆಗೆ ಗಣಪತಿ ಹೋಮ, ಬಳಿಕ 8.30ಕ್ಕೆ ದೇವ ರಿಗೆ ಕಳಸಪೂಜೆ ಹಾಗೂ ವಿಶೇಷ ಪೂಜಾ ಸೇವಾಕಾರ್ಯಗಳು ನಡೆದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದ ವಿನಿ ಯೋಗದ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ 2.30 ಗಂಟೆಗೆ ದೇವರ ಪಲ್ಲ ಕ್ಕಿಯ ಅಲಂಕೃತ ಮಂಟಪದ ಮೆರವಣಿ ಗೆಯು ಶಿವಕೇರಿಯಿಂದ ಹೊರಟು…
ಮಳೆಗಾಳಿ ಅರ್ಭಟಕ್ಕೆ ಮನೆಗಳಿಗೆ ಹಾನಿ, ಅಪಾರ ನಷ್ಟ
April 30, 2019ಕುಶಾಲನಗರ: ಕುಶಾಲನಗರ ಸುತ್ತಮು ತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮಾರುಕಟ್ಟೆ ಬಳಿಯ ಕೆಇಬಿ ಮಂಟಿ ನಿವಾಸಿ ಮಂಜುನಾಥ್ ಎಂಬುವರ ಮನೆಯ ಶೀಟ್‍ಗಳು ಸಂಪೂರ್ಣ ನೆಲಕಚ್ಚಿವೆ. ಮಂಜುನಾಥ್ ತಮ್ಮ ಮನೆಗೆ ಕೆಲವು ದಿನಗಳ ಹಿಂದೆಯಷ್ಟೆ 27 ಹೊಸ ಶೀಟ್‍ಗಳನ್ನು ಅಳವಡಿಸಿ ದ್ದರು. ದುರಾದೃಷ್ಟವಶಾತ್ ಸೋಮವಾರ ರಾತ್ರಿ ಸುರಿದ ಮಳೆಗೆ ಈ ಎಲ್ಲಾ ಶೀಟ್‍ಗಳು ನೆಲಕಚ್ಚಿದ್ದು, ಮನೆ ಯೊಳಗಿದ್ದ ಗೃಹೋಪಯೋಗಿ ವಸ್ತುಗಳು ಹಾನಿಗೊಳ ಗಾಗಿದೆ ಎಂದು ಮಂಜುನಾಥ್ ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಅದೃಷ್ಟವಶಾತ್…
ಬಂಟರ ಕ್ರೀಡಾಕೂಟ: ಟೈಸ್ ಪ್ರಕ್ರಿಯೆ
April 30, 2019ಮಡಿಕೇರಿ: ಕೊಡಗು ಜಿಲ್ಲಾ ಬಂಟರ ಯುವ ಘಟಕದ ಆಶ್ರಯದಲ್ಲಿ ಸಮುದಾಯ ಬಾಂಧ ವರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮೇ 11, 12ರಂದು ನಡೆಯಲಿದೆ. ಈ ಪ್ರಯುಕ್ತ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯ ಟೈಸ್ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಘಟಕದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ಯಲ್ಲಿ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ತಂಡಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕ್ರಿಕೆಟ್‍ಗೆ 25 ಹಾಗೂ ವಾಲಿ ಬಾಲ್‍ಗೆ 19 ತಂಡಗಳು ನೋಂದಣಿ ಮಾಡಿಕೊಂ ಡಿದ್ದು, ತಂಡದ ನಾಯಕ,…
ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ; ಕೊಡಗಿನಾದ್ಯಂತ ಬಿಗಿ ಭದ್ರತೆ
April 30, 2019ಮಡಿಕೇರಿ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಗುಪ್ತದಳ ಇಲಾಖೆ ಎಲ್ಲಾ ರಾಜ್ಯಗಳು ಕಟ್ಟೆಚ್ಚರ ವಹಿಸು ವಂತೆ ಸೂಚನೆ ನೀಡಿದ್ದು, ಕೊಡಗು ಜಿಲ್ಲೆ ಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮಾತ್ರವಲ್ಲದೇ, ರಾಷ್ಟ್ರೀಯ ತನಿಖಾ ದಳ ತಮಿಳುನಾಡು, ಕೇರಳ, ಕಾಸರ ಗೋಡು ಹಾಗೂ ಕಣ್ಣೂರಿನಲ್ಲಿ ಕೆಲವು ಶಂಕಿತರ ಮನೆಗಳ ಮೇಲೆ ದಾಳಿ ನಡೆ ಸಿದೆ. ಈ ಹಿನ್ನಲೆಯಲ್ಲಿ ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು ಜಿಲ್ಲೆಯಲ್ಲೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ತಪಾಸಣೆ ನಡೆಸಲಾಗು ತ್ತಿದೆ….
ಮಡಿಕೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಪ್ರತಿಭಟನೆ
April 30, 2019ಮಡಿಕೇರಿ: ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಕಾರ್ಮಿಕ ರನ್ನು ತೆಗೆದುಹಾಕುವ ತೀರ್ಮಾನವನ್ನು ಕೈಬಿಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ವಚ್ಚತಾ ಸಿಬ್ಬಂದಿಗಳು ಪತ್ರಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿದ ಸ್ವಚ್ಚತಾ ಸಿಬ್ಬಂದಿಗಳು ಜಿಲ್ಲೆಯ ಮಡಿಕೇರಿ, ಕುಶಾಲ ನಗರ, ನಾಪೆÇೀಕ್ಲು, ಸೋಮವಾರಪೇಟೆ, ವಿರಾಜಪೇಟೆ, ಪಾಲಿಬೆಟ್ಟ, ಕುಟ್ಟ, ಗೋಣಿಕೊಪ್ಪ ಸೇರಿದಂತೆ ಇನ್ನಿತರ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಡಿ ದರ್ಜೆ…