ಮಡಿಕೇರಿ: ಮಂಡ್ಯದ ನಾಗಮಂಗಲದಲ್ಲಿನ ಶ್ರೀ ಆದಿಚುಂಚನಗಿರಿ ಮಠ ದಲ್ಲಿ ಆಯೋಜಿತ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಸೋಮವಾರಪೇಟೆ ಮಹಿಳಾ ಪ್ರಗತಿ ಪರ ಮಹಿಳಾ ವೇದಿಕೆ ತಂಡವು ದ್ವಿತೀಯ ಸ್ಥಾನಗಳಿಸಿದೆ. ಪ್ರಗತಿಪರ ಮಹಿಳಾ ವೇದಿಕೆಯ ತಂಡದಲ್ಲಿ ಅಶ್ವಿನಿ ಕೃಷ್ಣಕಾಂತ್, ಸಂಧ್ಯಾಕೃಷ್ಣಪ್ಪ, ರೂಪ, ತೀರ್ಥ, ಭವ್ಯ, ಸೌಮ್ಯ ಮತ್ತು ವೀಣಾ ಪಾಲ್ಗೊಂಡಿದ್ದರು. ಈ ತಂಡದ ಜಾನಪದ ನೃತ್ಯ ತೀರ್ಪುಗಾರರೊಂದಿಗೆ ಪ್ರೇಕ್ಷಕರ ಅಪಾರ ಮೆಚ್ಚುಗೆಗೂ ಕಾರಣವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಲು ಕಾರಣವಾಯಿತು.
ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ಹೆದ್ದಾರಿ, ರೈಲ್ವೆ ಯೋಜನೆ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
January 22, 2019ಈ ಯೋಜನೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ; ಐಐಎಸ್‍ಸಿ ವರದಿ ಎಚ್ಚರಿಕೆ ಮೈಸೂರು: ಕೊಡಗಿನ ಮೂಲಕ ಹಾದು ಹೋಗುವ ಉದ್ದೇಶಿತ ರೈಲ್ವೆ ಮಾರ್ಗ ಮತ್ತು ಹೆದ್ದಾರಿ ಯೋಜನೆಯನ್ನು ಯಥಾಸ್ಥಿತಿ ಕಾಪಾಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂ ಟರ್‍ಗೆ ನಿರ್ದೇಶನ ನೀಡಿದೆ. ಈ ಯೋಜನೆಯಿಂದ ಕೊಡಗಿನ ಅರಣ್ಯ ಸಂಪತ್ತು ಹಾಳಾಗುವುದಲ್ಲದೆ, ದಕ್ಷಿಣ ಭಾರತದ ಜೀವನಾಡಿ ಕಾವೇರಿ ನದಿಗೆ ಹಾನಿಯಾಗುವುದ ರಿಂದ, ಉದ್ದೇಶಿತ ರೈಲ್ವೆ ಮತ್ತು ಹೆದ್ದಾರಿ ಯೋಜನೆ ವಿರುದ್ಧ ಕೂರ್ಗ್ ವೈಲ್ಡ್‍ಲೈಫ್…
ಸಿದ್ಧಗಂಗಾ ಶ್ರೀಗಳಿಗೆ ಕೊಡಗಿನಲ್ಲಿ ಕಂಬನಿ
January 22, 2019ಮಡಿಕೇರಿ: ನಡೆದಾಡುವ ದೇವರಾಗಿದ್ದ ಶ್ರೀಶಿವಕುಮಾರ ಸ್ವಾಮೀಜಿಗಳ ಅಗಲಿಕೆಗೆ ಕೊಡಗು ಜಿಲ್ಲೆ ಕಂಬನಿ ಮಿಡಿದಿದೆ. ಶ್ರೀಗಳು ಈ ಹಿಂದೆ ಕೊಡಗಿಗೂ ಭೇಟಿ ನೀಡಿದ್ದರು. ತಮ್ಮ 101 ನೇ ವಯಸ್ಸಿನಲ್ಲಿ ಶನಿವಾರ ಸಂತೆಯ ಗುಡುಗಳಲೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮಕ್ಕೆ ಬಂದಿದ್ದ ಪರಮಪೂಜ್ಯರು ಅರಮೇರಿ ಮಠಕ್ಕೂ ಭೇಟಿ ನೀಡಿದ್ದರು. ವಿಶ್ವಮಾನವ ಸಂದೇಶ ವನ್ನು ಜಗತ್ತಿಗೇ ಸಾರಿದ ಸಂತಶ್ರೇಷ್ಠರು ಶ್ರೀಗಳಾಗಿದ್ದರು ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸ್ಮರಿಸಿದರು. ಶ್ರೀಶಿವಕುಮಾರ ಸ್ವಾಮೀಜಿಗಳು ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೇ ಸಾರಿದ ಸಂತಶ್ರೇಷ್ಠರಾಗಿದ್ದರು. ಸಾಮಾಜಿಕ,…
ಚೆಂಬೆಬೆಳ್ಳೂರು ಒಂಟಿಯಂಗಡಿ ರಸ್ತೆ ಕಾಮಗಾರಿ ಪೂರ್ಣ
January 22, 2019ವೀರಾಜಪೇಟೆ:ವಿರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದಿಂದ ಒಂಟಿಯಂಗಡಿಗೆ ಹೊಗುವ ರಸ್ತೆ 2.5 ಕೋಟಿ ರೂ. ಅನುದಾನದಲ್ಲಿ ಅಗಲೀಕರಣ ಮತ್ತು ಡಾಂಬರಿಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಅವರು ಕಾಮಗಾರಿ ವೀಕ್ಷಣೆ ನಡೆಸಿದರು. ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಈ ರಸ್ತೆ ಬಹಳ ದುಸ್ಥಿತಿಯಲ್ಲಿತ್ತು. ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಈ ರಸ್ತೆ ಕಾಮಗಾರಿ ಉತ್ತಮ ರೀತಿ ನಡೆದಿದೆ ಎಂದರು. ಈ ಸಂದರ್ಭ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ…
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಆಗ್ರಹ
January 21, 2019ಕುಶಾಲನಗರ: ತುಮಕೂರು ಸಿದ್ಧಗಂಗಾ ಮಠದ ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿರುವ ಶ್ರೀಶಿವಕುಮಾರ್ ಸ್ವಾಮೀಜಿಗಳವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದರು. ಸಮೀಪದ ಶಿರಂಗಾಲ ಗ್ರಾಮದಲ್ಲಿ ಭಾನು ವಾರ ಏರ್ಪಡಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಹಾಗೂ ಗುರುವಂದನಾ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಕಂಪ್ಯೂಟರ್ ಶಿಕ್ಷಣವನ್ನು ಕಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಸರ್ಕಾರಿ ಶಾಲಾ…
ಕಾಲೇಜು ಆವರಣದಲ್ಲಿ ಶಾರದಾ ಪ್ರತಿಮೆ ಪ್ರತಿಷ್ಠಾಪನೆ
January 21, 2019ಕುಶಾಲನಗರ: ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ನಿರ್ಮಾಣ ಮಾಡಿರುವ ಶಾರದಾ ಮಂದಿರದಲ್ಲಿ ಭಾನುವಾರ ಶ್ರೀ ಶಾರದಾ ಮಾತೆಯ ಪ್ರತಿಮೆಯನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪ್ರತಿಷ್ಠಾಪನೆ ನೆರವೇರಿಸಿದರು. ಕಾಲೇಜು 25 ವರ್ಷಕ್ಕೆ ಕಾಲಿಟ್ಟಿರುವ ಸವಿನೆನಪಿಗಾಗಿ ಶಾಲಾಭಿವೃದ್ಧಿ ಸಮಿತಿ, ಮಂಟಿಗಮ್ಮ ದೇವತಾ ಸಮಿತಿ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರ ಸಹಕಾರದಿಂದ ರೂ.16 ಲಕ್ಷ ವೆಚ್ಚದಲ್ಲಿ ಶಾರದಾ ಮಂದಿರ, ಕ್ರೀಡಾ ಗ್ಯಾಲರಿ ಹಾಗೂ ಪ್ರವೇಶ ದ್ವಾರವನ್ನು…
ಗರ್ವಾಲೆಯಲ್ಲಿ ರಾಸುಗಳ ಪ್ರದರ್ಶನ, ಆರೋಗ್ಯ ತಪಾಸಣೆ
January 21, 2019ಸೋಮವಾರಪೇಟೆ: ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾ ಯಿತಿ, ಪಶು ವೈದ್ಯ ಆಸ್ಪತ್ರೆ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯ ದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಉತ್ತಮ ರಾಸುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ಶಿಬಿರ ನಡೆಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಉಪಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಚಾಲನೆ ನೀಡಿದರು. ನಂತರ ಮಾತನಾಡಿ, ರೈತರ ಒಡನಾಡಿಯಾಗಿರುವ ಜಾನುವಾರು ಗಳನ್ನು ಎಲ್ಲ ರೈತರು ಸಂರಕ್ಷಿಸುವ ಕೆಲಸ ಮಾಡಬೇಕಿದೆ. ಕೃಷಿಯೊಂದಿಗೆ ಹೈನುಗಾರಿ ಕೆಯಿಂದಲೂ ಹೆಚ್ಚಿನ ಲಾಭ ಗಳಿಸಲು ಅವಕಾಶವಿದ್ದು, ಉನ್ನತ…
ಶಿರಂಗಾಲದಲ್ಲಿ ರೈತ ಆತ್ಮಹತ್ಯೆ
January 21, 2019ಶಿರಂಗಾಲ: ಸಾಲಬಾಧೆ ತಾಳದೆ ರೈತನೋರ್ವ ಸಾವಿಗೆ ಶರಣಾದ ಘಟನೆ ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಮೇಶ(52) ಎಂಬು ವರು ಸಾಲಬಾಧೆಯಿಂದಾಗಿ ಮನನೊಂದು ಭಾನುವಾರ ಸಂಜೆ ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೃತರು ಪತ್ನಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಕುಶಾಲನಗರ ಗ್ರಾಮಾಂ ತರ ಪೆÇೀಲಿಸ್ ಠಾಣೆಗೆ ದೂರು ನೀಡಲಾಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಜಿ ಮಾಜಿ ಆಟಗಾರ
January 21, 2019ವಿರಾಜಪೇಟೆ: ರಾಜ್ಯ ರಣಜಿ ತಂಡದ ಮಾಜಿ ಆಟಗಾರ ಹಾಗೂ ಬಿಗ್‍ಬಾಸ್ ಸೀಸನ್-3 ಯ ಸ್ಪರ್ಧಿಯಾಗಿದ್ದ ಎನ್.ಸಿ.ಅಯ್ಯಪ್ಪ ಹಾಗೂ ನಟಿ ಅನುಷಾ ಪೂವಮ್ಮ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಟ್ಟಣದ ಕೊಡವ ಸಮಾಜದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಎನ್.ಸಿ.ಅಯ್ಯಪ್ಪ ಅವರ ಸಹೋದರಿ ಖ್ಯಾತ ಚಿತ್ರನಟಿ ಪ್ರೇಮಾ ಅವರು ಭಾಗವಹಿಸಿದ್ದರು. ಶನಿವಾರ ರಾತ್ರಿ ಅರತಕ್ಷತೆ ನಡೆದಿತ್ತು. ಮದುವೆಯಲ್ಲಿ ವಧುವರರು ಕೊಡಗಿನ ಸಾಂಪ್ರದಾಯಿಕ ಉಡುಗೆತೊಟ್ಟು ಕಂಗೊಳಿಸುತ್ತಿದ್ದರು. ಎನ್.ಸಿ.ಅಯ್ಯಪ್ಪ ಜಿಲ್ಲೆಯ ಕುಂಬಳದಾಳು ಗ್ರಾಮದ ನೆರವಂಡ ಚೆಟ್ಟಿಚಾ ಹಾಗೂ ಕಾವೇರಿ ದಂಪತಿಯ ಪುತ್ರ….
ಕೊಡಗು ಫಾರ್ ಟುಮಾರೋ ಕಾರ್ಯಕರ್ತರ ಸ್ವಚ್ಛತಾ ಕಾರ್ಯ
January 21, 2019ಮಡಿಕೇರಿ: ಕೊಡಗು ಮೂಲದ ಹಾಲಿ ಬೆಂಗಳೂರಿನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಯುವಕ ಯುವತಿಯರು ರಜಾ ದಿನಗಳಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳ ಸ್ವಚ್ಚತೆಗೆ ಪಣ ತೊಟ್ಟಿದ್ದಾರೆ. ಭಾನುವಾರ ಭಾಗಮಂಡಲ ಮತ್ತು ತಲ ಕಾವೇರಿಗೆ ಆಗಮಿಸಿದ ‘ಕೊಡಗು ಫಾರ್ ಟುಮಾರೋ’ ಸಮಾನ ಮನಸ್ಕ ವಾಟ್ಸಪ್ ಗುಂಪಿನ ಕಾರ್ಯಕರ್ತರು, ಪವಿತ್ರ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿದ್ದ ಕಸಗಳನ್ನು ಹೆಕ್ಕುವ ಮೂಲಕ ಶ್ರಮದಾನ ಆರಂಭಿಸಿದರು. ಇವರೊಂದಿಗೆ ಕೈ ಜೋಡಿ ಸಿದ ಗಾಳಿಬೀಡುವಿನ ಒಣಚಲು ಗ್ರಾಮ ಸ್ಥರು ತಲಕಾವೇರಿಯ ಪರಿಸರವನ್ನು…