ಮಡಿಕೇರಿ: ಕೊಡಗು ಮೂಲದ ಹಾಲಿ ಬೆಂಗಳೂರಿನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಯುವಕ ಯುವತಿಯರು ರಜಾ ದಿನಗಳಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳ ಸ್ವಚ್ಚತೆಗೆ ಪಣ ತೊಟ್ಟಿದ್ದಾರೆ.
ಭಾನುವಾರ ಭಾಗಮಂಡಲ ಮತ್ತು ತಲ ಕಾವೇರಿಗೆ ಆಗಮಿಸಿದ ‘ಕೊಡಗು ಫಾರ್ ಟುಮಾರೋ’ ಸಮಾನ ಮನಸ್ಕ ವಾಟ್ಸಪ್ ಗುಂಪಿನ ಕಾರ್ಯಕರ್ತರು, ಪವಿತ್ರ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿದ್ದ ಕಸಗಳನ್ನು ಹೆಕ್ಕುವ ಮೂಲಕ ಶ್ರಮದಾನ ಆರಂಭಿಸಿದರು. ಇವರೊಂದಿಗೆ ಕೈ ಜೋಡಿ ಸಿದ ಗಾಳಿಬೀಡುವಿನ ಒಣಚಲು ಗ್ರಾಮ ಸ್ಥರು ತಲಕಾವೇರಿಯ ಪರಿಸರವನ್ನು ಸ್ವಚ್ಚ ಗೊಳಿಸಿದರು. ಮಧ್ಯಾಹ್ನದ ವೇಳೆಗೆ ಸುಮಾರು ನೂರು ಚೀಲದಷ್ಟು ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲಿಗಳು, ಸ್ಯಾನಿಟರಿ ತ್ಯಾಜ್ಯ ಗಳು ಸಂಗ್ರಹವಾದವು.
ಶ್ರಮದಾನದ ಮೂಲಕ ಸಂಗ್ರಹಿಸಿದ ಕಸ ವನ್ನು ಕೊಡಗಿನ ಯಾವ ಪ್ರದೇಶದಲ್ಲೂ ಸುರಿಯದೆ ನೇರವಾಗಿ ಬೆಂಗಳೂರಿಗೆ ಸಾಗಿ ಸುವುದಾಗಿ ತಂಡದ ಸದಸ್ಯರಾದ ಪೊನ್ನೋ ಲತಂಡ ಕಾವೇರಪ್ಪ ತಿಳಿಸಿದರು. ಕ್ಷೇತ್ರಕ್ಕೆ ಆಗಮಿಸುವ ಹೊರ ಊರುಗಳ ಭಕ್ತರು ಕೂಡ ಕಸಗಳನ್ನು ಎಲ್ಲೆಂದರಲ್ಲಿ ಹರಡದೇ ಸ್ವಚ್ಚತೆಗೆ ಮಹತ್ವ ನೀಡಬೇಕೆಂದು ಅವರು ಮನವಿ ಮಾಡಿದರು. ಭಾನುವಾರ ಸಂಜೆ ಯವರೆಗೂ ಕೆಲಸ ನಿರ್ವಹಿಸಿ, ಮತ್ತೆ ಸೋಮವಾರ ಬೆಳಿಗ್ಗೆಯಿಂದ ಭಾಗಮಂಡ ಲದ ಸುತ್ತ ಮುತ್ತಲಿನ ಪ್ರದೇಶಗಳನ್ನು ಶುಚಿಗೂಳಿಸಲಾಗುವುದೆಂದರು.
ದೇವಸ್ಥಾನದ ವತಿಯಿಂದ ಶ್ರಮದಾನ ದಲ್ಲಿ ಪಾಲ್ಗೊಂಡಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ದೇವಾಲಯ ವ್ಯವಸ್ಥಾಪನಾ ಸಮಿ ತಿಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಪಾರುಪತ್ತೇಗಾರ ಕೊಂಡಿರ ಪೊನ್ನಣ್ಣ, ಪುತ್ತರಿರ ತಿಮ್ಮಯ ಶ್ರಮ ದಾನಕ್ಕೆ ಸಹಕಾರ ನೀಡಿದರು.