ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಜಿ ಮಾಜಿ ಆಟಗಾರ
ಕೊಡಗು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಜಿ ಮಾಜಿ ಆಟಗಾರ

January 21, 2019

ವಿರಾಜಪೇಟೆ: ರಾಜ್ಯ ರಣಜಿ ತಂಡದ ಮಾಜಿ ಆಟಗಾರ ಹಾಗೂ ಬಿಗ್‍ಬಾಸ್ ಸೀಸನ್-3 ಯ ಸ್ಪರ್ಧಿಯಾಗಿದ್ದ ಎನ್.ಸಿ.ಅಯ್ಯಪ್ಪ ಹಾಗೂ ನಟಿ ಅನುಷಾ ಪೂವಮ್ಮ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪಟ್ಟಣದ ಕೊಡವ ಸಮಾಜದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಎನ್.ಸಿ.ಅಯ್ಯಪ್ಪ ಅವರ ಸಹೋದರಿ ಖ್ಯಾತ ಚಿತ್ರನಟಿ ಪ್ರೇಮಾ ಅವರು ಭಾಗವಹಿಸಿದ್ದರು. ಶನಿವಾರ ರಾತ್ರಿ ಅರತಕ್ಷತೆ ನಡೆದಿತ್ತು. ಮದುವೆಯಲ್ಲಿ ವಧುವರರು ಕೊಡಗಿನ ಸಾಂಪ್ರದಾಯಿಕ ಉಡುಗೆತೊಟ್ಟು ಕಂಗೊಳಿಸುತ್ತಿದ್ದರು. ಎನ್.ಸಿ.ಅಯ್ಯಪ್ಪ ಜಿಲ್ಲೆಯ ಕುಂಬಳದಾಳು ಗ್ರಾಮದ ನೆರವಂಡ ಚೆಟ್ಟಿಚಾ ಹಾಗೂ ಕಾವೇರಿ ದಂಪತಿಯ ಪುತ್ರ. ಅನುಷಾ ಅವರು ಕೆದಮುಳ್ಳೂರು ಗ್ರಾಮದ ಮಾಳೇಟಿರ ದಿ.ಚಿಣ್ಣಪ್ಪ ಹಾಗೂ ಪುಷ್ಪಾ ದಂಪತಿಯ ಪುತ್ರಿ. ಕಳೆದ ಎರಡು ವರ್ಷಗಳ ಹಿಂದೆ ಎನ್.ಸಿ.ಅಯ್ಯಪ್ಪ ಹಾಗೂ ಅನುಷಾ ಪೂವಮ್ಮ ನಡುವೆ ಪರಿ ಚಯವಾಗಿ ಸ್ನೇಹವಾಗಿತ್ತು ಎನ್ನಲಾಗಿದೆ. 2018 ರಲ್ಲಿ ಇಬ್ಬರ ನಿಶ್ಚಿತಾರ್ಥವು ಬೆಂಗಳೂರಿನಲ್ಲಿ ನಡೆದಿತ್ತು.

Translate »