ಸಿದ್ಧಗಂಗಾ ಶ್ರೀಗಳಿಗೆ ಕೊಡಗಿನಲ್ಲಿ ಕಂಬನಿ
ಕೊಡಗು

ಸಿದ್ಧಗಂಗಾ ಶ್ರೀಗಳಿಗೆ ಕೊಡಗಿನಲ್ಲಿ ಕಂಬನಿ

January 22, 2019

ಮಡಿಕೇರಿ: ನಡೆದಾಡುವ ದೇವರಾಗಿದ್ದ ಶ್ರೀಶಿವಕುಮಾರ ಸ್ವಾಮೀಜಿಗಳ ಅಗಲಿಕೆಗೆ ಕೊಡಗು ಜಿಲ್ಲೆ ಕಂಬನಿ ಮಿಡಿದಿದೆ. ಶ್ರೀಗಳು ಈ ಹಿಂದೆ ಕೊಡಗಿಗೂ ಭೇಟಿ ನೀಡಿದ್ದರು. ತಮ್ಮ 101 ನೇ ವಯಸ್ಸಿನಲ್ಲಿ ಶನಿವಾರ ಸಂತೆಯ ಗುಡುಗಳಲೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮಕ್ಕೆ ಬಂದಿದ್ದ ಪರಮಪೂಜ್ಯರು ಅರಮೇರಿ ಮಠಕ್ಕೂ ಭೇಟಿ ನೀಡಿದ್ದರು. ವಿಶ್ವಮಾನವ ಸಂದೇಶ ವನ್ನು ಜಗತ್ತಿಗೇ ಸಾರಿದ ಸಂತಶ್ರೇಷ್ಠರು ಶ್ರೀಗಳಾಗಿದ್ದರು ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸ್ಮರಿಸಿದರು.

ಶ್ರೀಶಿವಕುಮಾರ ಸ್ವಾಮೀಜಿಗಳು ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೇ ಸಾರಿದ ಸಂತಶ್ರೇಷ್ಠರಾಗಿದ್ದರು. ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮ ರಂಗದಲ್ಲಿನ ಶ್ರೀಗಳ ಸೇವೆ ಊಹೆಗೂ ನಿಲುಕದ್ದು. ಶನಿವಾರಸಂತೆ ಬಳಿಯ ಗುಡುಗಳಲೆ ಗ್ರಾಮಕ್ಕೆ 2008 ರಲ್ಲಿ ಆಗಮಿಸಿದ್ದ ಸಿದ್ದಗಂಗಾ ಮಠಾಧೀಶ ಶ್ರೀಶಿವಕುಮಾರ ಸ್ವಾಮೀಜಿ ಗಳು, ತಮ್ಮ 101 ನೇ ವರ್ಷದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊಡಗಿನಾದ್ಯಂತ ಭಕ್ತವೃಂದ ಹೊಂದಿದ್ದಾರೆ.

ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪ್ರಭಾವ ಅತ್ಯಂತ ಪರಿ ಣಾಮಕಾರಿಯಾಗಿತ್ತು. ಜನರೇ ನಡೆದಾಡುವ ದೇವರು ಎಂದು ಬಿರುದು ನೀಡಿದ್ದರು. ಪರಿಪೂರ್ಣ ಸಾಧನೆ ಮಾಡಿರುವ ಶ್ರೀಗಳು ಸಂತ ಸಮುದಾಯದಲ್ಲಿಯೇ ಬಹಳ ವಿರಳ. ಶ್ರೀಗಳ ಅಗಲಿಕೆಯು ಸಂತಕುಲಕ್ಕೆ ಅತ್ಯಂತ ನಷ್ಟವಾ ಗಿದೆ. ಸಮಾಜದ ಪಾಲಿಗೆ ಇದೊಂದು ಆಘಾತದಂತಿದೆ.

ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೇ ಸಾರಿದ ಸಂತ ಶ್ರೇಷ್ಠರಾಗಿದ್ದ ಶ್ರೀಗಳು, ಜೀವನ ಮೌಲ್ಯದ ಸಂದೇಶವನ್ನು ಸಮಾಜದ ಜನತೆಗೆ ಹೇಳಿಕೊಟ್ಟರು. ಸಂತರು ನೀಡಿದ ಮಾರ್ಗದರ್ಶನದನ್ವಯ ಮುಂದಿನ ಜೀವನ ಸಾಗಿಸು ವುದೇ ನಮಗುಳಿದಿರುವ ಮಾರ್ಗ.

10 ವರ್ಷಗಳ ಹಿಂದೆ ಶನಿವಾರಸಂತೆ ಬಳಿಯ ಗುಡು ಗಳಲೆಯಲ್ಲಿ ಭಕ್ತವೃಂದದಿಂದ ಆಯೋಜಿತ ಗುರು ವಂದನಾ ಕಾರ್ಯಕ್ರಮಕ್ಕೆ ಶ್ರೀಗಳು ತಮ್ಮ 101ನೇ ವಯಸ್ಸಿನಲ್ಲಿ ಬಂದಿದ್ದರು. ಲವಲವಿಕೆಯಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಅರಮೇರಿಯಲ್ಲಿನ ಕಳಂಚೇರಿ ಮಠಕ್ಕೂ ಪಾದವೂರಿದ್ದ ಶ್ರೀಗಳು ನಮಗೆಲ್ಲಾ ಆಶೀರ್ವದಿಸಿದ್ದರು. ನನಗೆ 40 ವರ್ಷಗಳ ಹಿಂದೆ ಗುರುದೀಕ್ಷೆ ನೀಡಲಾದ ಸಂದರ್ಭವೂ ಶ್ರೀಗಳು ಉಪಸ್ಥಿತರಿದ್ದರು. ಸಂತಶ್ರೇಷ್ಠರೊಂದಿಗಿನ ಒಡನಾಟದ ಕ್ಷಣಗಳು, ಮಾರ್ಗ ದರ್ಶನಗಳೇ ನಮಗೆ ಮುಂದಿನ ಜೀವನಕ್ಕೆ ದಾರಿದೀಪ ಎಂದು ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಸ್ಮರಿಸಿದರು.

Translate »