ಚೆಂಬೆಬೆಳ್ಳೂರು ಒಂಟಿಯಂಗಡಿ ರಸ್ತೆ ಕಾಮಗಾರಿ ಪೂರ್ಣ
ಕೊಡಗು

ಚೆಂಬೆಬೆಳ್ಳೂರು ಒಂಟಿಯಂಗಡಿ ರಸ್ತೆ ಕಾಮಗಾರಿ ಪೂರ್ಣ

January 22, 2019

ವೀರಾಜಪೇಟೆ:ವಿರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದಿಂದ ಒಂಟಿಯಂಗಡಿಗೆ ಹೊಗುವ ರಸ್ತೆ 2.5 ಕೋಟಿ ರೂ. ಅನುದಾನದಲ್ಲಿ ಅಗಲೀಕರಣ ಮತ್ತು ಡಾಂಬರಿಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಅವರು ಕಾಮಗಾರಿ ವೀಕ್ಷಣೆ ನಡೆಸಿದರು.

ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಈ ರಸ್ತೆ ಬಹಳ ದುಸ್ಥಿತಿಯಲ್ಲಿತ್ತು. ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಈ ರಸ್ತೆ ಕಾಮಗಾರಿ ಉತ್ತಮ ರೀತಿ ನಡೆದಿದೆ ಎಂದರು. ಈ ಸಂದರ್ಭ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಇ.ಸುರೇಶ್, ಸಹಾಯಕ ಅಭಿಯಂತರ ನವೀನ್, ಎ.ಎ.ಉತ್ತಪ್ಪ, ಚಂಬೆ ಬೆಳ್ಳೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Translate »