ಕೊಡಗು

ಜೆಡಿಎಸ್‍ನೊಂದಿಗೆ ಸರ್ಕಾರ ರಚಿಸಬಾರದಿತ್ತು
ಕೊಡಗು

ಜೆಡಿಎಸ್‍ನೊಂದಿಗೆ ಸರ್ಕಾರ ರಚಿಸಬಾರದಿತ್ತು

January 16, 2019

ಮಡಿಕೇರಿ: ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳು ಅಸಹ್ಯ ಹುಟ್ಟಿಸುವಂತಿದೆ. ಇಂದಿನ ರಾಜಕಾರಣಿಗಳ ಅಧಿಕಾರದ ಆಸೆ ಖಂಡಿತ ರಾಜಕೀಯ ರಂಗಕ್ಕೆ ಮಾದರಿಯಾಗಲಾರದು ಎಂದು ಪ್ರತಿಕ್ರಿಯಿಸಿರುವ ವಿಧಾನ ಪರಿ ಷತ್ ಮಾಜಿ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎ. ಹಸನಬ್ಬ, ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಸರಕಾರ ರಚಿಸಬಾರದಿತ್ತು ಎಂದು ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಎ. ಹಸನಬ್ಬ, ನಿರೀಕ್ಷಿತ ಸ್ಥಾನಗಳು ಬಾರದಿದ್ದಾಗ ವಿಪಕ್ಷದಲ್ಲಿಯೇ ಇರುವುದು ಸೂಕ್ತ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮನಸ್ಸಿನ ಅಭಿಪ್ರಾಯಕ್ಕೆ ಸ್ಪಂದಿಸದೇ ಜೆಡಿಎಸ್ ಜತೆ ಸೇರಿ ಕಾಂಗ್ರೆಸ್…

ರಾಜ್ಯ ಸರ್ಕಾರ ಸುಭದ್ರವಾಗಿದೆ; ಸಚಿವ ಖಾದರ್
ಕೊಡಗು

ರಾಜ್ಯ ಸರ್ಕಾರ ಸುಭದ್ರವಾಗಿದೆ; ಸಚಿವ ಖಾದರ್

January 16, 2019

ಮಡಿಕೇರಿ: ರಾಜ್ಯ ಸರ್ಕಾರ ಯಾವುದೇ ಸಂಕಷ್ಟಕ್ಕೆ ಒಳಗಾಗಿಲ್ಲ, ಸರ್ಕಾರ ಸುಭದ್ರವಾಗಿದೆ, ಸರ್ಕಾರವನ್ನು ಅಸ್ಥಿರ ಗೊಳಿಸುವ ಬಿಜೆಪಿಯ ಎಲ್ಲಾ ಪ್ರಯತ್ನ ಗಳು ವ್ಯರ್ಥವಾಗಿದೆ ಎಂದು ರಾಜ್ಯ ನಗರಾ ಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು. ಮಡಿಕೇರಿಯ ಸುದರ್ಶನ ಅತಿಥಿ ಗೃಹ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯದ್ದು ಇದು ಮೊದಲ ಪ್ರಯತ್ನವಲ್ಲ, ಈ ಹಿಂದೆಯೂ ಸರ್ಕಾರ ವನ್ನು ಅತಂತ್ರಗೊಳಿಸುವ ಪ್ರಯತ್ನ ಮಾಡಿ ಅದು ವಿಫಲವಾಗಿದೆ ಎಂದರು. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಬಿಜೆಪಿ ಶಾಸಕರಿಗೆ ಹಬ್ಬವೇ ಇಲ್ಲದ ಪರಿಸ್ಥಿತಿ ನಿರ್ಮಾ ಣವಾಗಿದೆ….

ರೇವ್ ಪಾರ್ಟಿ ಪ್ರಕರಣ: ಆರೋಪಿಗಳಿಗೆ ಜಾಮೀನು
ಕೊಡಗು

ರೇವ್ ಪಾರ್ಟಿ ಪ್ರಕರಣ: ಆರೋಪಿಗಳಿಗೆ ಜಾಮೀನು

January 16, 2019

ಮಡಿಕೇರಿ: ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಹೋಂ ಸ್ಟೆ ಒಂದರಲ್ಲಿ ರೇವ್ ಪಾರ್ಟಿ ನಡೆಸಿ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ 5 ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಜ.12 ರಂದು ರೇವ್ ಪಾರ್ಟಿಯಲ್ಲಿ ತೊಡಗಿದ್ದ ಆರೋಪಿಗಳ ಪೈಕಿ ಮುಂಬೈನ ಶಂಕರ್ ಶಾಂತನು(29) ಎಂಬಾತ ಆಕ್ಸಿಸ್ ಬ್ಯಾಂಕಿನ ಮುಂಬೈ ಪಶ್ಚಿಮ ಶಾಖೆಯ ಆಡಳಿತಾಧಿಕಾರಿ ಎಂದು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಖಚಿತಪಡಿಸಿದ್ದಾರೆ. ಮತ್ತೋರ್ವ ಆರೋಪಿ ಜೂಡ್ ಪೆರೇರ(32)…

ಬಂದೂಕು ತೋಟ ಮಾರಾಟ: ಮೂವರ ಬಂಧನ
ಕೊಡಗು

ಬಂದೂಕು ತೋಟ ಮಾರಾಟ: ಮೂವರ ಬಂಧನ

January 16, 2019

ಮಡಿಕೇರಿ: ಬಂದೂಕು ತೋಟಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವನನ್ನು ಮಡಿಕೇರಿ ಪ್ರವಾಸಿ ಮಂದಿರದ ಬಳಿ ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ಮಡಿಕೇರಿಯ ಬಂದೂಕು ಅಂಗಡಿಗಳಿಂದ ಬಂದೂಕು ತೋಟಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಕೇರಳ ಮೂಲದ ವ್ಯಕ್ತಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾ ಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅರ್ವತೊಕ್ಲು…

ಆಶ್ರಯವಿಲ್ಲದೆ ನೆರೆ ಸಂತ್ರಸ್ತ ಆತ್ಮಹತ್ಯೆ
ಕೊಡಗು

ಆಶ್ರಯವಿಲ್ಲದೆ ನೆರೆ ಸಂತ್ರಸ್ತ ಆತ್ಮಹತ್ಯೆ

January 16, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗಿ ಜಮೀನು, ಮನೆ ಕಳೆದು ಕೊಂಡು ಬೀದಿಪಾಲಾಗಿದ್ದ ವ್ಯಕ್ತಿಯೋ ರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೋಡುಪಾಲ ಗ್ರಾಮದ ಎನ್.ಬಿ. ಚರಣ್(38) ಎಂಬುವರು ಸರ್ಕಾರ ದಿಂದ ಸಕಾಲದಲ್ಲಿ ಪುನರ್ವಸತಿ ವ್ಯವಸ್ಥೆ ಆಗುತ್ತಿಲ್ಲ ಎಂಬ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಜ.10 ರಂದು ವಿಷ ಸೇವಿಸಿ ಅಸ್ವಸ್ಥ ರಾಗಿದ್ದ ಚರಣ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಜ.11ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂ ತರಿಸಲಾಗಿತ್ತು. ಆದರೆ ಚಿಕಿತ್ಸೆ…

ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

January 16, 2019

ವಿರಾಜಪೇಟೆ: ತಾಲೂಕಿನ ಕೆದ ಮುಳ್ಳೂರು ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೊಳಿ ಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಳೆದ ಆರು ವರ್ಷಗಳಿಂದ ಕಾಮಗಾರಿ ಮಾಡುವುದಾಗಿ ಹೇಳಿದ ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳು ಎರಡು ಬಾರಿ ಟೆಂಡರ್ ಕರೆದು ಮತ್ತೆ ವಾಪಸ್ ಪಡೆದುಕೊಂಡಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರ, ದ್ವಿಚಕ್ರ ವಾಹನ, ಶಾಲಾ ಮಕ್ಕಳು ಓಡಾಡಲು ಸಾಧ್ಯವಾಗುತ್ತಿಲ್ಲ. ಅದರಿಂದ ಇನ್ನು 20 ದಿನದಲ್ಲಿ ಈ ರಸ್ತೆ ಕಾಮ ಗಾರಿಗೆ ಚಾಲನೆ ನೀಡದಿದ್ದರೆ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆ ಸುವುದಾಗಿ…

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ
ಕೊಡಗು

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

January 15, 2019

ಮಡಿಕೇರಿ: ಜಿಲ್ಲಾಡಳಿತ ವತಿಯಿಂದ ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿ ಕಾರಿ ಲಕ್ಷ್ಮಿಪ್ರಿಯ, ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಿ ಗಣರಾ ಜ್ಯೋತ್ಸವ ಯಶಸ್ವಿಗೆ ಸಹಕರಿಸುವಂತೆ ಕೋರಿದರು. ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಅರ್ಥ ಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ…

ಕೊಡಗು ಪ್ರವಾಸಿ ಉತ್ಸವ: ನಿರೀಕ್ಷೆ ಮೀರಿ ಯಶಸ್ಸು
ಕೊಡಗು

ಕೊಡಗು ಪ್ರವಾಸಿ ಉತ್ಸವ: ನಿರೀಕ್ಷೆ ಮೀರಿ ಯಶಸ್ಸು

January 15, 2019

ಮಡಿಕೇರಿ: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತವಾಗಿ ನೆಲಕಚ್ಚಿದ್ದ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಚೇತರಿಕೆಗಾಗಿ ಹಮ್ಮಿಕೊಂಡಿದ್ದ ಕೊಡಗು ಪ್ರವಾಸಿ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. 3 ದಿನಗಳ ಕಾಲ ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವಾಸಿ ಉತ್ಸವಕ್ಕೆ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆಂದು ತೋಟಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ. ಪ್ರವಾಸಿ ಉತ್ಸವದ ಪ್ರಯುಕ್ತ ರಾಜಾಸೀಟಿನಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ 43 ಸಾವಿರ ಮಂದಿ ಸಂದರ್ಶಕರು ಆಗಮಿಸಿದ್ದಾರೆಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಾ…

ನಾಪೋಕ್ಲು ಬಳಿ ರೇವ್‍ಪಾರ್ಟಿ; ಆರೋಪಿಗಳ ಬಂಧನ
ಕೊಡಗು

ನಾಪೋಕ್ಲು ಬಳಿ ರೇವ್‍ಪಾರ್ಟಿ; ಆರೋಪಿಗಳ ಬಂಧನ

January 15, 2019

ಮಡಿಕೇರಿ: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ ಗ್ರಾಮದ “ನೆಲಜಿ ಎ-1 ಗ್ಲಾಂಪಿಂಗ್” ಹೋಂ ಸ್ಟೇಯಲ್ಲಿ ಅಕ್ರಮವಾಗಿ ರೇವ್ ಪಾರ್ಟಿಯನ್ನು ಆಯೋಜಿಸಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬಾಂಬೆ, ಪೂನಾ ಹಾಗೂ ಬೆಂಗಳೂರು ಮೂಲದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ನಾಪೋಕ್ಲುವಿನ ಎ1 ಗ್ಲಾಂಪ್ಲಿಂಗ್ ಹೋಂ ಸ್ಟೇ ಮಾಲೀಕ ಎಂ.ಎ. ಅಪ್ಪಣ್ಣ ಸೇರಿದಂತೆ ಪೂನಾದ ಜೂಡ್ ಪೆರೇರ, ಪಶ್ಚಿಮ ಮುಂಬೈನ ಶಂಕರ್ ಶಾಂತನು, ಬೆಂಗಳೂರಿನ ಸಾಯಿರಾಮ್, ಎಂ.ವಿ. ಈಶ್ವರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ…

ಮೂರ್ನಾಡುವಿನಲ್ಲಿ ಸರ್ಟಿಫಿಕೇಟ್ ಕೋರ್ಸ್
ಕೊಡಗು

ಮೂರ್ನಾಡುವಿನಲ್ಲಿ ಸರ್ಟಿಫಿಕೇಟ್ ಕೋರ್ಸ್

January 15, 2019

ಮೈಸೂರು: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸಾಹಿತಿ ಶ್ರೀಮತಿ ಮೊಣ್ಣಂಡ ಶೋಭ ಸುಬ್ಬಯ್ಯ, ಮಾಲತಿ ದೇವಯ್ಯರವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು. ಸಾಹಿತಿಗಳಾದ ಶ್ರೀಮತಿ ಮೊಣ್ಣಂಡ ಶೋಭ ಸುಬ್ಬಯ್ಯನವರು ತಮ್ಮ ಉಪನ್ಯಾಸದಲ್ಲಿ “ ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಾನ ಮಾನ” ಎಂಬ ಬಗ್ಗೆ ಮಾತನಾಡುತ್ತ ಜಗತ್ತು ಎಷ್ಟೇ ಮುಂದು ವರೆದರು ಕೂಡ ನಮ್ಮ ಕನ್ನಡ ತನ್ನದೇ ಆದ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ಸುಲಿದ ಬಾಳೆಹಣ್ಣಿನ ರೀತಿ ಸುಲಭವಾಗಿ ಅರಗಿಸಿಕೊಳ್ಳಬಹುದು ಎಂದು ಹೇಳಿದರು….

1 78 79 80 81 82 187
Translate »