ಮೈಸೂರು: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸಾಹಿತಿ ಶ್ರೀಮತಿ ಮೊಣ್ಣಂಡ ಶೋಭ ಸುಬ್ಬಯ್ಯ, ಮಾಲತಿ ದೇವಯ್ಯರವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು.
ಸಾಹಿತಿಗಳಾದ ಶ್ರೀಮತಿ ಮೊಣ್ಣಂಡ ಶೋಭ ಸುಬ್ಬಯ್ಯನವರು ತಮ್ಮ ಉಪನ್ಯಾಸದಲ್ಲಿ “ ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಾನ ಮಾನ” ಎಂಬ ಬಗ್ಗೆ ಮಾತನಾಡುತ್ತ ಜಗತ್ತು ಎಷ್ಟೇ ಮುಂದು ವರೆದರು ಕೂಡ ನಮ್ಮ ಕನ್ನಡ ತನ್ನದೇ ಆದ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ಸುಲಿದ ಬಾಳೆಹಣ್ಣಿನ ರೀತಿ ಸುಲಭವಾಗಿ ಅರಗಿಸಿಕೊಳ್ಳಬಹುದು ಎಂದು ಹೇಳಿದರು. ತನ್ನ ಕುಟುಂಬದಲ್ಲಿ ಇಂಗ್ಲೀಷ್‍ನ ಪ್ರಭಾವ ಹೆಚ್ಚಾಗಿದ್ದರು ಕೂಡ ತಾನು ಮಾತ್ರ ಕನ್ನಡದ ಅಪ್ಪಟ ಅಭಿಮಾನಿ ಎಂದು ಹೇಳಿದರು. ಕನ್ನಡದ ಜಾನಪದ ಹಾಡು ಹಾಗೂ ಇತರ ಕುವೆಂಪುರವರ ಹಲವು ಕಾವ್ಯಗಳನ್ನು ರಾಗವಾಗಿ ಹಾಡಿ ವಿದ್ಯಾರ್ಥಿಗಳ ಮನಗೆದ್ದರು.
ಕಮ್ಯೂನಿಕೇಟಿವ್ ಇಂಗ್ಲೀಷ್ ತರಗತಿಯಲ್ಲಿ ಶ್ರೀಮತಿ ಮಾಲತಿ ದೇವಯ್ಯನವರು ಇಂಗ್ಲೀಷ್‍ನಲ್ಲಿ ಮಾತನಾಡಲು ಮತ್ತು ಸರಾಗವಾಗಿ ವಾಕ್ಯಗಳನ್ನು ಬಳಸುವಾಗ ಪ್ರಾಥಮಿಕವಾದ ಕೆಲವು ವ್ಯಾಕರಣ ಅಂಶಗಳನ್ನು ಹೇಗೆ ಉಪಯೋಗಿಸಬೇಕೆಂದು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು.