ಬಂದೂಕು ತೋಟ ಮಾರಾಟ: ಮೂವರ ಬಂಧನ
ಕೊಡಗು

ಬಂದೂಕು ತೋಟ ಮಾರಾಟ: ಮೂವರ ಬಂಧನ

January 16, 2019

ಮಡಿಕೇರಿ: ಬಂದೂಕು ತೋಟಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವನನ್ನು ಮಡಿಕೇರಿ ಪ್ರವಾಸಿ ಮಂದಿರದ ಬಳಿ ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ಮಡಿಕೇರಿಯ ಬಂದೂಕು ಅಂಗಡಿಗಳಿಂದ ಬಂದೂಕು ತೋಟಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಕೇರಳ ಮೂಲದ ವ್ಯಕ್ತಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾ ಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅರ್ವತೊಕ್ಲು ಗ್ರಾಮದ ಪಿ.ಪೂವಯ್ಯ, ಕೆ.ಸಿ.ಸೂರಿ, ಕೇರಳದ ಪಡಚರ ಗ್ರಾಮದ ಫ್ರಾನ್ಸಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ಗಳಿಂದ ವಿವಿಧ ಕಂಪನಿಗಳ ಸುಮಾರು 263 ಬಂದೂಕು ತೋಟಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »