ಆಶ್ರಯವಿಲ್ಲದೆ ನೆರೆ ಸಂತ್ರಸ್ತ ಆತ್ಮಹತ್ಯೆ
ಕೊಡಗು

ಆಶ್ರಯವಿಲ್ಲದೆ ನೆರೆ ಸಂತ್ರಸ್ತ ಆತ್ಮಹತ್ಯೆ

January 16, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗಿ ಜಮೀನು, ಮನೆ ಕಳೆದು ಕೊಂಡು ಬೀದಿಪಾಲಾಗಿದ್ದ ವ್ಯಕ್ತಿಯೋ ರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೋಡುಪಾಲ ಗ್ರಾಮದ ಎನ್.ಬಿ. ಚರಣ್(38) ಎಂಬುವರು ಸರ್ಕಾರ ದಿಂದ ಸಕಾಲದಲ್ಲಿ ಪುನರ್ವಸತಿ ವ್ಯವಸ್ಥೆ ಆಗುತ್ತಿಲ್ಲ ಎಂಬ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಜ.10 ರಂದು ವಿಷ ಸೇವಿಸಿ ಅಸ್ವಸ್ಥ ರಾಗಿದ್ದ ಚರಣ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಜ.11ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂ ತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಜ.12 ರಂದು ಮೃತಪಟ್ಟಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಚರಣ್ ಅವರಿಗೆ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ 5 ಎಕರೆ ಜಮೀನಿದ್ದು, ಪ್ರವಾಹ ಮತ್ತು ಭೂ ಕುಸಿತದಿಂದ ಬಹುತೇಕ ಭಾಗ ಭೂ ಸಮಾಧಿಯಾಗಿತ್ತು. ಜೋಡು ಪಾಲದಲ್ಲಿ ಇದ್ದ ಮನೆಯೂ ನದಿ ಪ್ರವಾ ಹದಲ್ಲಿ ಕೊಚ್ಚಿಹೋಗಿದೆ. ಹಾಗಾಗಿ ಅಕ್ಷ ರಶ ಬೀದಿಪಾಲಾಗಿದ್ದ ಚರಣ್ ತೋಟದ ಅಭಿವೃದ್ಧಿಗೆ ಮಾಡಿದ್ದ ಬ್ಯಾಂಕ್ ಮತ್ತು ಕೈ ಸಾಲದ ಮೊತ್ತ 3 ಲಕ್ಷ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು ಎನ್ನಲಾಗಿದೆ.

ಮನೆ, ತೋಟ, ಜಮೀನು ಕಳೆದು ಕೊಂಡು ಸಂತ್ರಸ್ತರಾಗಿದ್ದ ಇವರಿಗೆ ಮದೆ ನಾಡು ಗ್ರಾಮದಲ್ಲಿ ಸರ್ಕಾರ ಮನೆ ಕೊಡುವ ಭರವಸೆ ನೀಡಿತ್ತಾದರೂ ಅದು ಸದ್ಯಕ್ಕೆ ಈಡೇರುವ ಲಕ್ಷಣಗಳೂ ಕಾಣಿಸದೆ ಮಾನಸಿಕವಾಗಿ ನೊಂದಿದ್ದರೆಂದು ತಿಳಿದು ಬಂದಿದೆ. ಹೃದ್ರೋಗಿ ತಾಯಿ ಶೀಲಾವತಿ ಅವರ ತಿಂಗಳ ಚಿಕಿತ್ಸಾ ವೆಚ್ಚ ಸುಮಾರು 3 ಸಾವಿರ ರೂಪಾಯಿ ಹೊಂದಿಸಲೂ ಕಷ್ಟಪಡು ತ್ತಿದ್ದ ಚರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Translate »