ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

January 16, 2019

ವಿರಾಜಪೇಟೆ: ತಾಲೂಕಿನ ಕೆದ ಮುಳ್ಳೂರು ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೊಳಿ ಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಳೆದ ಆರು ವರ್ಷಗಳಿಂದ ಕಾಮಗಾರಿ ಮಾಡುವುದಾಗಿ ಹೇಳಿದ ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳು ಎರಡು ಬಾರಿ ಟೆಂಡರ್ ಕರೆದು ಮತ್ತೆ ವಾಪಸ್ ಪಡೆದುಕೊಂಡಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರ, ದ್ವಿಚಕ್ರ ವಾಹನ, ಶಾಲಾ ಮಕ್ಕಳು ಓಡಾಡಲು ಸಾಧ್ಯವಾಗುತ್ತಿಲ್ಲ. ಅದರಿಂದ ಇನ್ನು 20 ದಿನದಲ್ಲಿ ಈ ರಸ್ತೆ ಕಾಮ ಗಾರಿಗೆ ಚಾಲನೆ ನೀಡದಿದ್ದರೆ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆ ಸುವುದಾಗಿ ಎಚ್ಚರಿಸಿದರು.

ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗಾಪಂ ವ್ಯಾಪ್ತಿಯ ಮೂರ್‍ರೋಡ್‍ನಿಂದ ತೋರ ಗ್ರಾಮಕ್ಕೆ ಹೋಗುವ ಪುತ್ತಮಕ್ಕಿ ಎಂಬಲ್ಲಿ ಅಂದಾಜು 700 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಎರಡು ಬಾರಿ ರೂ. 75 ಲಕ್ಷಕ್ಕೆ ಟೆಂಡರ್ ಕರೆದು ಆರು ವರ್ಷ ಕಳೆದರು ಇದುವರೆಗೂ ರಸ್ತೆ ಕಾಮಗಾರಿ ನಡೆದಿಲ್ಲ. ಈ ರಸ್ತೆಯಲ್ಲಿ ನಡೆದಾಡಲು ಯೋಗ್ಯ ವಿಲ್ಲದಂತಾಗಿದೆ. ವಿರಾಜಪೇಟೆ ಪಟ್ಟಣಕ್ಕೆ ಇಲ್ಲಿಂದ 12 ಕಿ.ಮೀ. ದೂರವಿದ್ದು, ಈ ರಸ್ತೆ ಯಲ್ಲಿ ಖಾಸಗಿ ಬಸ್ಸು ಓಡಾಡುತ್ತಿತ್ತು. ಈಗ ರಸ್ತೆ ಸರಿಇಲ್ಲದ ಕಾರಣ ಬಸ್ಸುಗಳೇ ಇಲ್ಲದಂತಾ ಗಿದೆ. ಇದೇ ರಸ್ತೆಯಲ್ಲಿ ಆನೆಗಳು ಓಡಾ ಡುತ್ತಿರುವುದರಿಂದ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಇದರ ಬಗ್ಗೆ ಅಧಿಕಾರಿಗಳಾಗಳು ಇತ್ತ ಗಮನ ಹರಿಸುತ್ತಿಲ್ಲ. ಸ್ಥಳೀಯ ಶಾಸಕರು ಅಧಿ ಕಾರಿಗಳಿಗೆ ಹಲವು ಬಾರಿ ರಸ್ತೆ ದುರಸ್ಥಿ ಪಡಿಸುವ ಬಗ್ಗೆ ಹೇಳಿದರೂ ಇಲಾಖೆಯ ಅಧಿಕಾರಿಗಳು ಇತ್ತ ತಿರುಗಿನೋಡಿಲ್ಲ ಎಂದು ದೂರಿದರು.

ಗ್ರಾಮಸ್ಥರಾದ ಪಲೇಕಂಡ ಮನು ಚಂಗಪ್ಪ, ಕೆ.ಅರುಣ್ ಮಂದಣ್ಣ, ಕೆ.ಬೆಲ್ಲು ಮೇದಪ್ಪ, ಕೆ.ಬಿ.ಕಾಳಪ್ಪ, ಕೆ.ಎ.ಸುಬ್ಬಯ್ಯ, ಅರುಣ್ ಮಂದಣ್ಣ, ಗ್ರಾಪಂ ಸದಸ್ಯರಾದ ಪರ ಮೇಶ್ವರ, ಕಿರಣ್ ಕುಮಾರ್, ಬೋಜಮ್ಮ, ಮಾಜಿ ಸದಸ್ಯ ಚೋಟು ಬಿದ್ದಪ್ಪ ಹಾಗೂ ಗ್ರಾಮಸ್ಥರುಗಳು ಭಾಗವಹಿಸಿದ್ದರು.

Translate »