ಗಣೇಶ ರೇಖಾಚಿತ್ರ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಣೇಶ ರೇಖಾಚಿತ್ರ ಕ್ಯಾಲೆಂಡರ್ ಬಿಡುಗಡೆ

January 16, 2019

ಮೈಸೂರು: ಮೈಸೂ ರಿನ ಕಲಾವಿದ ಎಸ್.ಆರ್.ಅಪ್ರಮೇಯ ಕಾರ್ತಿಕ್ ರಚಿಸಿದ ಗಣೇಶನ ರೇಖಾ ಚಿತ್ರದ ಕ್ಯಾಲೆಂಡರ್ ಅನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಸಮಾಜಸೇವಕ ಕೆ.ರಘುರಾಮ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಬಿಡುಗಡೆ ಮಾಡಿದರು.

ಬಳಿಕ ಕೆ.ರಘುರಾಮ್ ಮಾತನಾಡಿ, ಕಲಾವಿದ ಅಪ್ರಮೇಯ ಹದಿನೆಂಟು ವರ್ಷ ದಲ್ಲಿಯೇ ಗಣೇಶನ ವಿವಿಧ ಭಂಗಿಯ 4 ಸಾವಿರ ಚಿತ್ರಗಳನ್ನು ರಚಿಸುವ ಮೂಲಕ ಪ್ರತಿಷ್ಠಿತ ಇಂಡಿಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಸೇರಿದಂತೆ ಹಲವು ದಾಖಲೆ ಮಾಡಿದ್ದಾರೆ. ಹಲವಾರು ಬಾರಿ ಏಕ ವ್ಯಕ್ತಿ ಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ. ಇಂತಹ ಪ್ರತಿಭೆ ನಗರದಲ್ಲಿರುವುದೇ ಮೈಸೂ ರಿಗರಿಗೆ ಹೆಮ್ಮೆ ಎಂದು ಪ್ರಶಂಸಿಸಿದರು.

ಗಣೇಶನ 10ಕ್ಕೂ ಹೆಚ್ಚು ವಿವಿಧ ಭಂಗಿಯ ರೇಖಾ ಚಿತ್ರಗಳನ್ನುಳ್ಳ ಕ್ಯಾಲೆಂ ಡರ್ ಇದಾಗಿದೆ. ಈ ಸಂದsÀರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಕಲಾವಿದ ಅಪ್ರಮೇಯ ಕಾರ್ತಿಕ್, ಅವರ ತಾಯಿ ಎಂ.ವಿ.ಅನಿತ ಉಪಸ್ಥಿತರಿದ್ದರು.

Translate »