ಕೃಷ್ಣರಾಜ ಕ್ಷೇತ್ರದಾದ್ಯಂತ ಪ್ರತಾಪ ಸಿಂಹ ಭರ್ಜರಿ ಪ್ರಚಾರ
ಮೈಸೂರು

ಕೃಷ್ಣರಾಜ ಕ್ಷೇತ್ರದಾದ್ಯಂತ ಪ್ರತಾಪ ಸಿಂಹ ಭರ್ಜರಿ ಪ್ರಚಾರ

April 14, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರತಾಪಸಿಂಹ ಶನಿವಾರ ಮೈಸೂರಿನ ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ರ್ಯಾಲಿ ಮೂಲಕ ಬಿರುಸಿನ ಪ್ರಚಾರ ಕೈಗೊಂಡರು.

ಶಾಸಕ ಎಸ್.ಎ.ರಾಮದಾಸ್ ಅವ ರೊಡನೆ ಮುಂಜಾನೆಯಿಂದಲೇ ಪ್ರಚಾರ ಕ್ಕಿಳಿದ ಅವರು ಶ್ರೀರಾಂಪುರ ಮನುವನ ಉದ್ಯಾನ, ಬೆಮೆಲ್ ಆರ್ಚ್, ದೇವ ಯ್ಯನಹುಂಡಿ, ಶ್ರೀರಾಂಪುರ ನಾಯ್ಡು ಸ್ಟೋರ್, ಅರವಿಂದನಗರ ಬಸ್ ಡಿಪೋ, ವಿವೇಕಾನಂದನಗರ ವೃತ್ತ, ಕುವೆಂಪು ನಗರ ಕಾಂಪ್ಲೆಕ್ಸ್, ಶಾರದಾದೇವಿನಗರ, ಕಾಮಾಕ್ಷಿ ಆಸ್ಪತ್ರೆ ಸುತ್ತಮುತ್ತ ಪ್ರಚಾರ ನಡೆಸಿದರು. ಅಲ್ಲಲ್ಲಿ ಪ್ರಚಾರ ಭಾಷಣ ಮಾಡಿದ ಪ್ರತಾಪಸಿಂಹ, ಐದು ವರ್ಷಗಳ ತಮ್ಮ ಅವಧಿಯಲ್ಲಿ ತಾವು ಮೈಸೂರು ಮತ್ತು ಕೊಡಗು ಜಿಲ್ಲೆಗಳಿಗೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿ ಟ್ಟರು. ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜು ನಾಥ್, ಕೃಷ್ಣರಾಜ ಕ್ಷೇತ್ರ ಅಧ್ಯಕ್ಷ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಪಾಲಿಕೆ ಸದಸ್ಯ ಕೆ.ರಮೇಶ್‍ಕುಮಾರ್, ಸುನಂದಾ ಪಾಲನೇತ್ರ ಇನ್ನಿತರು ಉಪಸ್ಥಿತರಿದ್ದರು.

ಮೈಸೂರಿಗೆ ಕೋಟ್ಯಾಂತರ ರೂ. ಅಭಿವೃದ್ಧಿ ಕಾರ್ಯ ನನ್ನ ಕೆಲಸ: ಪ್ರತಾಪಸಿಂಹ
ಸಂಸದನಾಗಿ 5 ವರ್ಷಗಳ ನನ್ನ ಅವಧಿಯಲ್ಲಿ ಮೈಸೂರಿಗೆ ಕೋಟ್ಯಾಂತರ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಪ್ರಧಾನಿ ಮೋದಿಯವರು ಕೋಟ್ಯಾಂತರ ರೂ.ಗಳನ್ನು ಮೈಸೂರಿಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ನಾನು ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಮಾಡಿದ ಕೆಲಸಗಳು ಜನರಿಗೆ ಗೊತ್ತಿದೆ. ಹೀಗಾಗಿ ಮತದಾರರು ಮತ್ತೊಮ್ಮೆ ನನ್ನ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗ ವಿಳಂಬಕ್ಕೆ ಕಾರಣವಾಗಿದ್ದ ಪುರಾತನ ಟಿಪ್ಪು ಸುಲ್ತಾನ್ ಶಸ್ತ್ರಾಗಾರ ಸ್ಥಳಾಂತರ, ಮೈಸೂರಿ ನಿಂದ ಚೆನ್ನೈ, ಹೈದರಾಬಾದ್, ವಾರಣಾಸಿ, ಹುಬ್ಬಳ್ಳಿಗೆ ನೇರ ರೈಲು ಸಂಪರ್ಕ, ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 50 ಕೋಟಿ ರೂ., ಹಿನಕಲ್ ಜಂಕ್ಷನ್ ಬಳಿ ಫ್ಲೈಓವರ್, ಮೈಸೂರಲ್ಲಿ ಪಾಸ್‍ಪೋರ್ಟ್ ಕಚೇರಿ ತೆಗೆದು 43,000 ಜನರಿಗೆ ಪಾಸ್‍ಪೋರ್ಟ್ ವಿತರಿಸಲಾಗಿದೆ. ಕೊಡಗಿನ ಕುಶಾಲನಗರಕ್ಕೆ ರೈಲು ಸಂಪರ್ಕ, ಮಡಿಕೇರಿ-ಮೈಸೂರು ಚತುಷ್ಪಥ ರಸ್ತೆ ಇತ್ಯಾದಿ ಅನೇಕ ಕಾರ್ಯಕ್ರಮಗಳು ನನ್ನ ಅವಧಿಯಲ್ಲಿಯೇ ಆಗಿದ್ದು. ಇದೆಲ್ಲವನ್ನು ಮತದಾರರು ಅರಿತು ನನಗೆ ಮತ ನೀಡುವಂತೆ ಮನವಿ ಮಾಡಿದರು.

Translate »