ಸಿಪಿಕೆ ಸಾಹಿತ್ಯ ಸಂಪುಟ ಹೊರತರಲು ಸರ್ಕಾರ ನೆರವು ಅವಶ್ಯ
ಮೈಸೂರು

ಸಿಪಿಕೆ ಸಾಹಿತ್ಯ ಸಂಪುಟ ಹೊರತರಲು ಸರ್ಕಾರ ನೆರವು ಅವಶ್ಯ

April 9, 2019

ಮೈಸೂರು: ಹಿರಿಯ ಸಾಹಿತಿ ಸಿಪಿಕೆ ಅವರ ಎಲ್ಲಾ ಸಾಹಿತ್ಯ ಕೃತಿ ಗಳನ್ನು ಒಟ್ಟಾಗಿಸಿ, ಸಮಗ್ರ ಸಾಹಿತ್ಯವನ್ನು ಹೊರ ತರಲು ಸರ್ಕಾರದ ನೆರವು ಅಗತ್ಯ ವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಅಭಿಪ್ರಾಯಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ, ನೃಪತುಂಗ ಚಾರಿ ಟಬಲ್ ಟ್ರಸ್ಟ್ ಮತ್ತು ಅರಸು ಜಾಗೃತಿ ಅಕಾಡೆಮಿ ವತಿಯಿಂದ ಆಯೋಜಿಸಿದ್ದ `ಡಾ.ಸಿಪಿಕೆ ಅವರ 80ರ ಸಂಭ್ರಮ’ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಸಿಪಿಕೆ ಅವರಿಗೆ ದೊಡ್ಡ ಹೆಸರಿದೆ. ಅವರ ಸಾಹಿತ್ಯದಲ್ಲಿ ಗಾತ್ರದೊಂದಿಗೆÉ ಗುಣವು ದೊಡ್ಡದಾಗಿದೆ. ಅವರು ಇಲ್ಲಿವರೆಗೆ 400 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹೀಗಾಗಿ, ಅವರ ಎಲ್ಲಾ ಕೃತಿಗಳನ್ನು ಸಮಗ್ರ ಸಾಹಿತ್ಯವಾಗಿ ಹೊರ ತರಬೇಕಿದೆ. ಈ ಬಗ್ಗೆ ಪೆÇ್ರ.ಭೈರವಮೂರ್ತಿ ಅವರ ಬಳಿಯೂ ಮಾತನಾಡಿದ್ದೆ. ಆ ವೇಳೆ ಈ ಕೆಲಸಕ್ಕೆ ಸರ್ಕಾರ ಮುಂದೆ ಬರಬೇಕು ಎಂದು ಅವರು ಹೇಳಿದ್ದರು. ಇದಕ್ಕೆ ಸರ್ಕಾರ ಮಾತ್ರ ವಲ್ಲದೆ ಅವರ ಎಲ್ಲಾ ಸ್ನೇಹಿತರು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ನನ್ನ ಜೀವನದಲ್ಲಿ ನಾನು ಇಷ್ಟು ವರ್ಷ ಬದು ಕಿದ್ದೇ ನನ್ನ ದೊಡ್ಡ ಸಾಧನೆ. ನನಗಿಂತ ಕಿರಿ ಯರೂ, ಶಿಷ್ಯರೂ, ಸಹಪಾಠಿಗಳು, ಹಿರಿಯರೂ ಬಂದು ಹೋದರು. ಆದರೆ, ನಾನು ಮಾತ್ರ ಇನ್ನೂ ಇದ್ದೇನೆ ಎಂದು ನುಡಿದರು.

ಇದುವರೆಗೆ ನಾನು 300-400 ಕೃತಿ ಬರೆದೆ ಎಂದು ಹಲವರು ನಾನಾ ರೀತಿಯಲ್ಲಿ ಸಂಖ್ಯೆ ಹೇಳುತ್ತಾರೆ. ಆದರೆ, ನಾನು 10 ಪುಸ್ತಕ ಬರೆಯುವುದು 20ಕ್ಕೆ ಸಮ. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಕರಡು ಕೃತಿ ಒಂದಾದರೆ, ಅಂತಿಮ ಕೃತಿ ಮತ್ತೊಂದು. ಹೀಗೆ ನಾನು ಎರಡು ಕೃತಿ ಬರೆಯುತ್ತೇನೆ. ಇದರಿಂದ ನನ್ನ ಎಷ್ಟೋ ಕಾಲ ವ್ಯಯ ವಾಗಿದೆ ಎಂದರು. ನನ್ನ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ಇನ್ನೂ ಬರಬೇಕಿತ್ತು. ಯಾಕೆ ಬರಲಿಲ್ಲ ಎಂಬುದಕ್ಕೆ ಕಾರಣ ಗೊತ್ತು. ಆ ಬಗ್ಗೆ ನನಗೆ ಬೇಸರವಿಲ್ಲ. ಕುವೆಂಪು ಅವರ ಚಿತ್ಪಲಯದಲ್ಲಿ ನನಗೆ ಸ್ಥಾನ ನೀಡಿದ್ದು, ದೇಜಗೌ ಅವರ ವಾತ್ಸಲ್ಯ ಹಾಗೂ ಕನ್ನಡಿ ಗರ ಪ್ರೀತಿಗಿಂತ ನನಗೆ ಮಿಗಿಲಾದ ಪ್ರಶಸ್ತಿ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.

ನನ್ನ ಬದುಕೆ ವಿಚಿತ್ರ: ನನ್ನ ಬದುಕೇ ಬಹಳ ವಿಚಿತ್ರ. ವಿರೋಧಾಭಾಸ, ವಿಪರ್ಯಾಸದಿಂದ ಕೂಡಿದೆ. ದೈಹಿಕ ನ್ಯೂನತೆ, ಸಾಂಸಾರಿಕ ಸಮಸ್ಯೆ ಎಲ್ಲವನ್ನೂ ಮೆಟ್ಟಿ ನಿಂತು ಸಾಹಿತ್ಯ ಕೆಲಸ ಮಾಡಿದ್ದು ದೊಡ್ಡದು. ನಾನು ಮೈಸೂ ರಿಗೆ ಬರುವಾಗ ತಬ್ಬಲಿ ಯಾಗಿದ್ದೆ. ದೇಜಗೌ ದಂಪತಿ ನನ್ನನ್ನು ಸಲುಹಿದರು. ಅವರಿಗೆ ನಾನು ಚಿರಋಣಿಯಾಗಿದ್ದೇನೆ. ನನಗೆ ದೇಜಗೌ ಅವರ ಪ್ರೀತಿಯ ಜತೆಗೆ ಕುವೆಂಪು ಆಶೀ ರ್ವಾದವೂ ಇರುತ್ತಿತ್ತು ಎಂದು ಕೆಲವು ಘಟನೆಗಳನ್ನು ಮೆಲುಕು ಹಾಕಿದರು.

ಇದೇ ವೇಳೆ ಡಾ.ಸಿಪಿಕೆ ದಂಪತಿಯ ರನ್ನು ಅಭಿನಂದಿಸಲಾಯಿತು. ಬಳಿಕ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಅವರು `ಡಾ.ಸಿಪಿಕೆ ಚುಟುಕು ತೋರಣ’ ಹಾಗೂ `ಕಾವ್ಯಕೆ ಗುರು’ ಎಂಬ ಕೃತಿಗಳನ್ನು ಬಿಡುಗಡೆ ಮಾಡಿದರು.

ಧ್ವನಿಕೊಟ್ಟ ಧಣಿ ಪ್ರಶಸ್ತಿ ಪ್ರಧಾನ: ಅರಸು ಜಾಗೃತಿ ಅಕಾಡೆಮಿ ವತಿಯಿಂದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದÀ ಮಡ್ಡಿಕೆರೆ ಗೋಪಾಲ್, ಸಿ.ಜಗದೀಶ್, ಶಾಂತ ಮಹಾದೇವ ಪ್ರಸಾದ್, ಕೆ.ಬಿ.ಲಿಂಗರಾಜ್, ರಾಘವೇಂದ್ರ ರಾಜೇ ಅರಸ್, ಲಯನ್ ಶಿವಕುಮಾರ್, ಬಿ.ಕುಮಾರ್, ಮಲೆಯೂರು ಉಮೇಶ್ ಮತ್ತು ಮಾಧುರ್ಯ ರಾಮಸ್ವಾಮಿ ಅವರಿಗೆ `ಧ್ವನಿಕೊಟ್ಟ ಧಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟ ರಾಮಯ್ಯ, ಹಿರಿಯ ಸಾಹಿತಿ ಪೆÇ್ರ.ಕೆ.ಭೈರವ ಮೂರ್ತಿ, ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಡಾ.ಎಂ.ಜಿ. ಆರ್.ಅರಸು, ಮಾಯಕಾರ ಗುರುಕುಲ ಸ್ಥಾಪಕ ಮಧುದೀಕ್ಷಿತ್ ಗುರೂಜೀ ಉಪಸ್ಥಿತರಿದ್ದರು.

Translate »