ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆ
ಮೈಸೂರು

ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆ

April 9, 2019

ಮೈಸೂರು: ಹೆಚ್.ಡಿ.ಕೋಟೆ ತಾಲೂಕು ವಿವಿಧ ಮುಖಂಡರು ಮಾಜಿ ಸಚಿವ ಹಾಗೂ ಚಾಮರಾಜನಗರ ಲೋಕಸಭಾ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಸಮ್ಮುಖದಲ್ಲಿ ಶಾಸಕ ಬಿ.ಶ್ರೀರಾಮುಲು, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ವಿ.ರಾಮ ಸ್ವಾಮಿ ಹಾಗೂ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗ ಮೈಸೂರು ವತಿ ಯಿಂದ ನೂರಾರು ಮುಖಂಡರು ವಿ.ಶ್ರೀನಿವಾಸಪ್ರಸಾದ್ ಅವರನ್ನು ಬೆಂಬಲಿಸಿ ಬಿಜೆಪಿ ಸೇರ್ಪಡೆಗೊಂಡರು. ಬಿಎಸ್‍ಪಿ ಜಿಲ್ಲಾ ಮಾಜಿ ಅಧ್ಯಕ್ಷ ದೇವದತ್ತ, ಹೆಚ್.ಡಿ.ಕೋಟೆ ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಪುಟ್ಟೇಗೌಡ, ಹೊಸಹಳ್ಳಿ ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಹೆಚ್.ಎನ್.ಸುಧಾ, ಬಿದ್ದರಹಳ್ಳಿ ಗ್ರಾಪಂ ಹಾಲಿ ಅಧ್ಯಕ್ಷ ನಾಯಕ, ಗೊಳ್ಳಿಹಟ್ಟಿ ಗ್ರಾಪಂ ಮಾಜಿ ಸದಸ್ಯ ಕೃಷ್ಣನಾಯಕ, ಸಮಾಜ ಸೇವಕಿ ಮೀನಾ, ಕೆ.ಬೆಳ್ತೂರು ತಾಪಂ ಮಾಜಿ ಸದಸ್ಯ ಚಿಕ್ಕಣ್ಣ, ಹಾಲಿ ಗ್ರಾಪಂ ಸದಸ್ಯ ರವಿನಾಯಕ, ಬೀಚನಹಳ್ಳಿ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನಮ್ಮ, ಸರಗೂರು ಯುವ ಮುಖಂಡ ರಾಮು, ಮಾನವ ಹಕ್ಕುಗಳ ಹೋರಾಟಗಾರ್ತಿ ಶಾಂತಲಾ ಹಾಗೂ ನೂರಾರು ಮುಖಂಡರು, ಕಾರ್ಯಕರ್ತರುಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Translate »