ಬಹುರೂಪಿಯಲ್ಲಿ ಪ್ರೋಟಿನ್‍ಯುಕ್ತ ರಾಜಗಿರ ಬಗ್ಗೆ ಅರಿವು
ಮೈಸೂರು

ಬಹುರೂಪಿಯಲ್ಲಿ ಪ್ರೋಟಿನ್‍ಯುಕ್ತ ರಾಜಗಿರ ಬಗ್ಗೆ ಅರಿವು

January 15, 2019

ಮೈಸೂರು,: ರಂಗಾ ಯಣ ಆವರಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಹಿನ್ನೆಲೆಯಲ್ಲಿ ಆಯೋ ಜಿ ಸಿರುವ ವಸ್ತುಪ್ರದರ್ಶನದಲ್ಲಿ ಕಾರಂಜಿ ಟ್ರಸ್ಟ್‍ನ ನೇಗಿಲ ನುಡಿ’ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿರುವ ಸಾವಯವ ಪದ್ಧತಿ ಯಲ್ಲಿ ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದ್ದು, ಇದೇ ವೇಳೆ ಪ್ರೋಟಿನ್ ಅಂಶವುಳ್ಳ ರಾಜಗಿರ’ (ಯಡ್ಡಾ) ಬಳಕೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಉಚಿತವಾಗಿ ಅವುಗಳ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.

ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿ ರಾಜಗಿರ ದೊರೆಯಲಿದ್ದು, ಸಿರಿ ಧಾನ್ಯಕ್ಕಿಂತಲೂ ಹೆಚ್ಚಿನ ಪ್ರೋಟಿನ್ ಅಂಶ ಹೊಂದಿದೆ. ವಿವಿಧ ಅನಾರೋಗ್ಯ ಸಮಸ್ಯೆ ಗಳಿಗೂ ಉತ್ತಮ ಶಕ್ತಿವರ್ಧಕ ಆಹಾರ ವಾಗಿರುವ ರಾಜಗಿರವನ್ನು ಸೋಲಿಗರು ಯಡ್ಡಾ ಎಂದೇ ಕರೆಯುತ್ತಾರೆ. ಸಾಮೆ, ನವಣೆಯಂತೆ ರಾಜಗಿರವನ್ನು ಉಪ ಯೋಗಿಸಬಹುದಾಗಿದೆ. ಕಾರಂಜಿ ಟ್ರಸ್ಟ್ ಜನರಲ್ಲಿ ರಾಜಗಿರ ಬಗ್ಗೆ ಅರಿವು ಮೂಡಿ ಸುವುದರೊಂದಿಗೆ ಅವುಗಳನ್ನು ಬೆಳೆಯು ವುದಕ್ಕೂ ಪ್ರೋತ್ಸಾಹ ನೀಡುತ್ತಿದೆ. ಬಹು ರೂಪಿ ವಸ್ತುಪ್ರದರ್ಶನದಲ್ಲಿ ನೇಗಿಲ ನುಡಿ ಹೆಸರಿನಲ್ಲಿ ಮಳಿಗೆ ತೆರೆದಿದ್ದು, ಪ್ರದರ್ಶನ ವೀಕ್ಷಿಸಲು ಬರುವ ಆಸಕ್ತರಿಗೆ ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಹೆಸರಿನಲ್ಲಿ ರಾಜಗಿರ(ಯಡ್ಡಾ) ಬಿತ್ತನೆ ಬೀಜವನ್ನು ಉಚಿತ ವಾಗಿ ನೀಡುವ ಮೂಲಕ ರಾಜಗಿರವನ್ನು ಬೆಳೆಯುವುದಕ್ಕೂ ಪ್ರೇರಣೆ ನೀಡುತ್ತಿದೆ.

ಮಳಿಗೆಯಲ್ಲಿ: ಬಹುರೂಪಿ ವಸ್ತು ಪ್ರದರ್ಶನದಲ್ಲಿ ತೆರೆಯಲಾಗಿರುವ ನೇಗಿಲ ನುಡಿ ಮಳಿಗೆಯಲ್ಲಿ ರಾಜಗಿರ ಪುರಿ, ರಾಜಗಿರ ಹಿಟ್ಟು ಮಾರಾಟ ಮಾಡಲಾಗು ತ್ತಿದೆ. ಹಿಟ್ಟನ್ನು ಮಾಲ್ಟ್ ಮಾಡಿಕೊಂಡು ಸೇವಿಸಬಹುದಾಗಿದೆ.

ಪುರಿಯನ್ನು ಜೇನುತುಪ್ಪ ಅಥವಾ ಬೆಲ್ಲದ ಪಾಕವನ್ನು ಮಿಕ್ಸ್ ಮಾಡಿ ತಿನ್ನಬಹುದಾಗಿದೆ. ಅಲ್ಲದೆ, ಕಾಡುನೆಲ್ಲಿ ಕಾಯಿ, ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಬಾಳೆಹಣ್ಣು, ಬೀನಸ್ ಕೆಜಿ ವೊಂದಕ್ಕೆ 40 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಆದರೆ ಇಂದು ಬೆಳಿಗ್ಗೆ ಸಾವಯವ ಪ್ರಗತಿಪರ ರೈತ ಡಾ.ನಾರಾ ಯಣ ರೆಡ್ಡಿ ಅವರು ನಿಧನರಾಗಿದ್ದರಿಂದ, ರೆಡ್ಡಿ ಅವರ ಸ್ಮರಣಾರ್ಥ ಬೀನಸ್ ಅನ್ನು ಉಚಿತವಾಗಿ ನೀಡಲಾಯಿತು.

ಜೋಳ ಕೆಜಿ 30 ರೂ, ಹಾಸನ ಸೌತೆಕಾಯಿ ಬೀಜ, ನಾಟಿಹಸು ತುಪ್ಪವನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಸಣ್ಣ ಸಣ್ಣ ನೇಗಿಲನ್ನು ಸಹ ಮಾರಾಟ ಮಾಡಿ ಕೃಷಿ ಮಹತ್ವವನ್ನು ಸಾರಲಾಗುತ್ತಿದೆ ಎಂದು ಮಳಿಗೆ ಮೇಲು ಸ್ತುವಾರಿ ತನುಜಾ ತಿಳಿಸಿದ್ದಾರೆ.

Translate »