ಮಡಿಕೇರಿ: ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಸೊಬಗಿನ ಮಡಿಕೇರಿಯ ರಾಜಾ ಸೀಟು ಉದ್ಯಾನವನದಲ್ಲಿ ಜ.11 ರಿಂದ 13ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಅರಳಿ ನಿಂತಿರುವ ರಂಗು ರಂಗಿನ ಹೂವುಗಳಿಂದ ಉದ್ಯಾನವನ ಕಂಗೊಳಿಸುತ್ತಿದೆ. ವಿವಿಧ ಜಾತಿಯ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದ್ದು, ಉದ್ಯಾನ ವನಕ್ಕೆ ಹೊಸ ಮೆರುಗು ತುಂಬಿವೆ. 8 ರಿಂದ 10 ಸಾವಿರ ಸಂಖ್ಯೆಯಲ್ಲಿ ವಿವಿಧ ಜಾತಿಯ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಪ್ಲಾಕ್ಸ್, ವಿಂಕಾ, ರೋಸಿಯಾ, ಡೇಲಿಯಾ ಹೂವುಗಳು ನೋಡುಗರನ್ನು ಆಕರ್ಷಿಸಲಿದೆ. ಕೊಡಗಿನ ಕುಲದೇವತೆಯಾದ ಕಾವೇರಿ…
ಹಾರಂಗಿ ಜಲಾಶಯದಲ್ಲಿ ಕೆಸರುಮಯ
January 10, 2019ಕುಶಾಲನಗರ: ಕೊಡಗು ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯದ ನೀರಿನ ಮಟ್ಟ ಕ್ರಮೇಣ ಇಳಿಮುಖವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 8.5 ಟಿಎಂಸಿ ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 0.3 ಟಿಎಂಸಿಗೆ ಇಳಿಮುಖ ವಾಗಿದೆ. ಪ್ರಸ್ತುತ ಜಲಾಶಯಕ್ಕೆ ಒಳಹರಿವು ಇಂದು ಬೆಳಗಿನ ದಾಖಲೆ ಪ್ರಕಾರ 103 ಕ್ಯೂಸೆಕ್, ಹೊರಹರಿವು 15ಕ್ಯೂಸೆಕ್. ಜಲಾಶಯವು ಅತೀ ಹೆಚ್ಚು ಕೆಸರಿನಿಂದ ಕೂಡಿದ್ದು, ಹೆಚ್ಚಿನ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಕಳೆದುಕೊಂಡಿದೆ. ಜಲಾ ಶಯದ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ ಕುಶಾಲ ನಗರ, ಕೂಡಿಗೆ ಮತ್ತು ಸುತ್ತಮುತ್ತಲಿನ…
ಮಕ್ಕಳಗುಡಿ ಬೆಟ್ಟದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ
January 10, 2019ಬುದ್ಧಿ ಹೇಳಲು ಹೋದವನ ಮೇಲೆ ಕೊಲೆ ಯತ್ನ ಸೋಮವಾರಪೇಟೆ: ತಾಲೂಕಿನ ಮಕ್ಕಳಗುಡಿ ಬೆಟ್ಟದಲ್ಲಿ ಮಂಗಳವಾರ ಮೈಸೂರಿನ ಯುವಕನ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಪ್ರಾಪ್ತ ಹುಡುಗಿಯನ್ನು ಪ್ರೀತಿಸುತ್ತಿದ್ದ ಬಾಲಕನಿಗೆ ಬುದ್ಧಿ ಹೇಳಲು ಹೋದವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಮಂಗಳವಾರ ಮಕ್ಕಳಗುಡಿ ಬೆಟ್ಟಕ್ಕೆ ತೆರಳಿದ್ದ ಮೈಸೂರಿನ ರಾಕೇಶ್‍ಗೌಡ ಎಂಬ ಯುವಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಲಾಗಿತ್ತು. ಈ ಬಗ್ಗೆ ತನಿಖೆ ಶುರು ಮಾಡಿದ…
ಕೇರಳ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ
January 10, 2019ವಿರಾಜಪೇಟೆ: ಶಬರಿಮಲೆಗೆ ಸ್ತ್ರೀಯರ ಪ್ರವೇಶ ಹಾಗೂ ಯಾತ್ರೆಯ ನಿಯಮ ಉಲ್ಲಂಘನೆ ಮಾಡಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ವಿರಾಜಪೇಟೆ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಕೇರಳದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇನ್ನೊಂದೆಡೆ ರಾಜ್ಯ ಸರಕಾರದ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಬಳಿ ವಿಧಾನಸೌದದಲ್ಲಿಯೇ ರೂ.26 ಲಕ್ಷ ನಗದು ಸಿಕ್ಕಿರುವ ಹಿನ್ನಲೆಯಲ್ಲಿ ಪುಟ್ಟ ರಂಗಶೆಟ್ಟಿ ತಮ್ಮ ಸ್ಥಾನಕ್ಕೆ ಕೂಡಲೆ ರಾಜೀ ನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯ ಕರ್ತರು ಪಟ್ಟಣದ ಗಡಿಯಾರ ಕಂಬದ ಬಳಿ…
ಕಾರ್ಮಿಕ ಸಂಘಟನೆಗಳ ಮುಂದುವರೆದ ಮುಷ್ಕರ
January 10, 2019ಮಡಿಕೇರಿ: ಕೇಂದ್ರ ಸರಕಾರ ಬೆಲೆ ಏರಿಕೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಇಂದಿರಾಗಾಂಧಿ ವೃತ್ತದಿಂದ ಸಹಸ್ರ ಸಂಖ್ಯೆಯಲ್ಲಿದ್ದ ವಿವಿಧ ಸಂಘಟನೆ ಗಳ ಕಾರ್ಯಕರ್ತರು ಗಾಂಧಿ ಮೈದಾನದ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಕೇಂದ್ರ ಸರಕಾರದ ಬೆಲೆ ಏರಿಕೆ, ಕಾರ್ಮಿಕ ಮಸೂದೆ ಅಂಗೀಕಾರಕ್ಕೆ ಒತ್ತಡ ಮತ್ತು ಪ್ರತಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿ ರುವ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ.ವೇತನ ನೀಡುವಂತೆ…
ಜಿಲ್ಲಾದ್ಯಂತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
January 9, 2019ಮಡಿಕೇರಿ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲೆಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ಮೈದಾನದ ಎದುರು ಪ್ರತಿಭಟಸಿದ ಕಾರ್ಮಿಕರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಅಂಗನ ವಾಡಿ ಸಂಘಟನೆಯ ಮುಖಂಡರಾದ ಟಿ.ಪಿ.ರಮೇಶ್, ದೇಶದಲ್ಲಿ 1991ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿ ಯನ್ನು ಇಂದಿನ ಕೇಂದ್ರ ಸರ್ಕಾರ ವೇಗವಾಗಿ ಜಾರಿ ಮಾಡುತ್ತಿವೆ. ಇದರ ಪರಿಣಾಮ ಇಂದು…
ವಿರಾಜಪೇಟೆಯಲ್ಲೂ ಕಾರ್ಮಿಕರ ಹೋರಾಟ
January 9, 2019ವಿರಾಜಪೇಟೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ವಿರೋಧಿಸಿ ಇಂದು ವಿರಾಜಪೇಟೆ ತಾಲೂಕಿನ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ತಾಲೂಕಿನ ಕಟ್ಟಡ ಕಾರ್ಮಿಕರು, ತೋಟ ಕಾರ್ಮಿಕರು, ಬಿಎಸ್‍ಎನ್‍ಎಲ್, ಎಲ್.ಐ.ಸಿ ಹಾಗೂ ಜೆ.ಸಿ.ಟಿ.ಯು ನೇತೃತ್ವದಲ್ಲಿ ಪಟ್ಟಣದ ತೆಲುಗರ ಬೀದಿಯಿಂದ ಮೆರವಣಿಗೆ ಹೊರಟು ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಮುಖ್ಯ ರಸ್ತೆಗಾಗಿ ಗಡಿಯಾರ ಕಂಬದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧ ತಾಲೂಕು ಕಚೇರಿ…
ಸೋಮವಾರಪೇಟೆಯಲ್ಲಿ ಕಾರ್ಮಿಕರ ಬೃಹತ್ ಜಾಥಾ
January 9, 2019ಸೋಮವಾರಪೇಟೆ: ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋ ಧಿಸಿ ಪಟ್ಟಣದಲ್ಲಿ ಐಎನ್‍ಟಿಯುಸಿ, ಎಐಟಿಯುಸಿ, ಎಚ್.ಎಂ.ಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿ ಸಿಟಿಯು, ಎಸ್‍ಇಡಬ್ಲ್ಯೂಎ, ಎಲ್‍ಪಿಎಫ್ ಹಾಗೂ ಯುಟಿಯುಸಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಥಾ ಮತ್ತು ಸಾರ್ವಜನಿಕ ಸಭೆ ನಡೆಯಿತು. ಕಾರ್ಮಿಕರು ಪೌಷ್ಠಿಕಾಂಷ ಆಹಾರ ಬಳಕೆ ಮಾಡಲು, ಅವರು ಕೊಂಡು ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕಿದೆ. ಚುನಾವಣೆಗೂ ಮುನ್ನ ಬಿಜೆಪಿ ಪ್ರಮುಖರು ಬೆಲೆ ನಿಯಂತ್ರಿಸುವ ಹೇಳಿಕೆ ನೀಡಿದ್ದರೂ, ಅಧಿಕಾರಕ್ಕೇರಿದ ಬಳಿಕೆ ಅದು…
ಮಕ್ಕಳಗುಡಿ ಬೆಟ್ಟದಲ್ಲಿ ಪ್ರವಾಸಿಗನ ಕೊಲೆ ಯತ್ನ: ಆರೋಪಿ ಬಂಧನ
January 9, 2019ಸೋಮವಾರಪೇಟೆ: ಪ್ರವಾಸಿತಾಣ ವೀಕ್ಷಣೆಗೆ ಬಂದಿದ್ದ ಮೈಸೂರಿನ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಹಲ್ಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ರಾಯಪುರ ನಿವಾಸಿ ಕೆಲವು ವರ್ಷ ಗಳಿಂದ ಮೈಸೂರಿನ ಎಸ್‍ಬಿಐ ಯೂನಿಟ್‍ನ ಗ್ರಾಮೀಣ ಪ್ರತಿನಿಧಿಯಾಗಿರುವ ರಾಕೇಶ್ ಗೌಡ(26), ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಖ, ತಲೆ, ಕೈ, ಭಾಗಕ್ಕೆ ಮಾರಣಾಂತಿಕ ಹಲ್ಲೆಯಾಗಿದೆ. ಹಲ್ಲೆ ನಡೆಸಿದ ತಾಲೂಕಿನ ಕಿರಂಗದೂರು ಗ್ರಾಮದ ಕುಮಾರಸ್ವಾಮಿ ಎಂಬಾತನನ್ನು…
ಮದೆನಾಡು ರಸ್ತೆಯಲ್ಲಿ ಸರಣಿ ಕಳ್ಳತನ
January 9, 2019ಮಡಿಕೇರಿ: ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿಯಿಂದ ಮದೆನಾಡುವರೆಗೆ ಸರಣಿ ಕಳ್ಳತನ ನಡೆದಿದೆ. ಜ.7ರ ಬೆಳಗಿನ 3.30ರ ವೇಳೆಯಲ್ಲಿ ಬಿಳಿ ಬಣ್ಣದ ಸಿಫ್ಟ್ ಕಾರಿನಲ್ಲಿ ಬಂದ ಯುವಕನೋರ್ವ ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಬೀಗ ಒಡೆದು ಒಳನುಗ್ಗಿ ಹುಂಡಿ ಒಡೆಯಲು ವಿಫಲ ಯತ್ನ ನಡೆಸಿ ದ್ದಾನೆ. ಕೈಯಲ್ಲಿ ತಲವಾರ್ ಹಿಡಿದು ಒಳನುಗ್ಗುವ ಕಳ್ಳ ದೇವಾ ಲಯದ ಗರ್ಭ ಗುಡಿಯ ಒಳಗೆ ಅಮೂಲ್ಯ ವಸ್ತುಗಳಿ ಗಾಗಿ ತಡಕಾಡುತ್ತಿರುವ ದೃಶ್ಯಾವಳಿಗಳು ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ. ದೇವಾಲಯದ ಮುಂಭಾಗದ ಹೆದ್ದಾರಿಯಲ್ಲಿ…